ಪೋಸ್ಟ್‌ಗಳು

73. ಅಜ್ಜಂಪುರದಲ್ಲಿ ಹೋಟೆಲ್ ಉದ್ಯಮ ಬೆಳೆದುಬಂದ ಬಗೆ

ಇಮೇಜ್
ಆತ್ಮೀಯರೇ, ಒಂದು ಊರಿನಲ್ಲಿ ಹೋಟೆಲ್ ಸ್ಥಾಪನೆಯಾಗಿ, ಮುಂದೆ ಅದೊಂದು ಉದ್ಯಮವಾಗಿ ಬೆಳೆಯುವುದನ್ನು ದಾಖಲಿಸುವ ಅಗತ್ಯವಿದೆಯೇ ಎಂದುಕೊಂಡರೆ, ಹೌದು ಎನ್ನಬೇಕಾದೀತು. ಏಕೆಂದರೆ, ಊರೊಂದರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮಗಳು ಸಾರ್ವಜನಿಕ ಸಂಕೇತಗಳಾಗುತ್ತವೆ. ಇತ್ತೀಚೆಗಂತೂ ಹೋಟಲ್ ಗಳು ಊರಿನ ಹೆಗ್ಗುರುತು ಗಳಾಗುತ್ತ ನಡೆದಿವೆ. ಅಜ್ಜಂಪುರದ ಮಟ್ಟಿಗೆ ಹೇಳುವುದಾದರೆ, ಒಂದು ಕಾಲಕ್ಕೆ ಉತ್ತಮ ರುಚಿ-ಅಭಿರುಚಿಗಳಿದ್ದ ಹೋಟೆಲುಗಳಿದ್ದವು. ಈಗೀಗ, ಜನರ ತಿನ್ನುವ ಅಭಿರುಚಿ ಬದಲಾದ ಕಾರಣದಿಂದ ರಸ್ತೆಬದಿಯ ತಳ್ಳುಗಾಡಿಗಳೇ ಪ್ರಧಾನವಾಗಿ ಕಾಣುತ್ತಿವೆ. ಇಂದಿಗೂ ನಮ್ಮ ಊರಿಗೆ ಉತ್ತಮ ದರ್ಜೆಯ ಊಟ-ತಿಂಡಿಗಳು ದೊರೆಯುವಂಥ,  ವಿರಾಮವಾಗಿ ಚಹಾ ಹೀರುತ್ತ ಹರಟಲು ಬೇಕಿರುವ ಒಂದು ಜಾಗದ ಅವಶ್ಯಕತೆಯಿದೆ. ಇದನ್ನು ಗಮನಿಸುವ ಉದ್ಯಮಿಗಳಿಗೆ ಇಲ್ಲಿ ಮುಕ್ತ ಅವಕಾಶವಂತೂ ಇದೆ.  ಗೆಳೆಯ ಕೇಶವಮೂರ್ತಿಯವರಿಗೆ ತಮ್ಮ ಅನುಭವಗಳನ್ನು ದಾಖಲಿಸಲು ಕೋರಿದ್ದಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಲೇಖನ ನಿಮ್ಮ ಮುಂದಿದೆ. ಇದಕ್ಕೆ ಸೂಕ್ತ ಚಿತ್ರಾಲಂಕಾರ ಮಾಡಿದ ಮಿತ್ರ ಅಪೂರ್ವ ಬಸು ಅವರಿಗೆ ವಂದನೆಗಳು. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಚಿತ್ರಗಳನ್ನು ಸಂಗ್ರಹಿಸಿ, ಅಡಿಬರಹಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಕೃತಜ್ಞತೆಗಳು.- ಶಂಕರ ಅಜ್ಜಂಪುರ
ದೂರವಾಣಿ - 99866 72483 -------------------------------------------------------------…

72. ಅಜ್ಜಂಪುರದ ವರ್ಣರಂಜಿತ ರಾಜಕಾರಣಿ ಬಿ.ಎಂ. ಏಕೋರಾಮಸ್ವಾಮಿ

ಇಮೇಜ್
ಆತ್ಮೀಯರೇ, ಈ ಬ್ಲಾಗ್ ಆರಂಭವಾಗಿ ಈ ತಿಂಗಳಿಗೆ 6 ವರ್ಷಗಳಾಯಿತು. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲಗಳೇ ಇದನ್ನು ಮುನ್ನಡೆಸುತ್ತಿವೆ. 

ಅಜ್ಜಂಪುರದ ಬೆಳವಣಿಗೆಯಲ್ಲಿ ತಮ್ಮನ್ನು ಸಕ್ರಿಯವಾಗಿ ಹಿಂದಿನಿಂದಲೂ ತೊಡಗಿಸಿಕೊಂಡು ಬಂದ ಹಿರಿಯರಲ್ಲಿ ಬಿ.ಎಂ. ಏಕೋರಾಮಸ್ವಾಮಿಯವರೂ ಒಬ್ಬರು. ಅವರನ್ನು ಈ ಸಂಚಿಕೆಗೆಂದು ಅವರ ಮನೆಯಲ್ಲಿ ಸಂದರ್ಶಿಸಿದೆ. ಅವರೊಡನೆ ನಡೆಸಿದ ಅರ್ಧ ಘಂಟೆಯ ಮಾತುಕತೆಯಲ್ಲಿ ಅವರು ಒಮ್ಮೆಯಾದರೂ ತಾನು ಇಂಥದನ್ನು ಮಾಡಿದೆ ಎಂದು ಹೇಳಿಕೊಳ್ಳಲಿಲ್ಲ. ಇಡೀ ಊರಿನ ಒಗ್ಗಟ್ಟನ್ನು ನಾವು ಕಾಪಾಡಿಕೊಳ್ಳುತ್ತಲೇ, ಸಂಘಟನಾತ್ಮಕ ಕೆಲಸಗಳನ್ನು ಮಾಡಿದೆವು. ಆಗ ಕೂಡ ಪೈಪೋಟಿ, ಮನಸ್ತಾಪಗಳು ಇರಲಿಲ್ಲವೆಂದೇನಿಲ್ಲ. ಅವೆಲ್ಲದರ ಹೊರತಾಗಿಯೂ, ಊರಿನ ಹಿತಾಸಕ್ತಿಗೆ ಧಕ್ಕೆ ತರುವಂಥ ಯಾವ ಕಾರ್ಯಗಳಿಗೂ, ಯಾರೂ ಬೆಂಬಲಿಸಿ, ತಮ್ಮ ಪ್ರಾಬಲ್ಯವನ್ನು ಮೆರೆಯಬೇಕೆಂಬ ದುಷ್ಟಬುದ್ಧಿಯನ್ನು ತೋರುತ್ತಿರಲಿಲ್ಲ. ಅದೀಗ ಮರೆಯಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.  ಅವರಿಗೀಗ 84 ವಯಸ್ಸು. ಆದರೂ ಅವರ ನೆನಪಿನ ಶಕ್ತಿ ಕುಂದಿಲ್ಲ. ತಮ್ಮ ಕಾಲದ ರಾಜಕಾರಣವನ್ನು ವಿವರಿಸುವಾಗ ಅವರು ತೋರಿದ ಉತ್ಸಾಹ, ಆಸ್ಥೆಗಳು ಮೆಚ್ಚುವಂತಿದ್ದವು. ಅವರನ್ನು ಕುರಿತು ಮಿತ್ರ ಅಪೂರ್ವ ಬಸು ಸಂಗ್ರಹಿಸಿರುವ ಮಾಹಿತಿಯುಕ್ತ ಬರಹ ನಿಮಗಾಗಿ  ಇಲ್ಲಿದೆ. 
- ಶಂಕರ ಅಜ್ಜಂಪುರ ದೂರವಾಣಿ ಃ 99866 72483 -----------------------------------------------------------------…

69. ಪೆನ್ ರಿಪೇರಿಯ ಉಮ್ಮರ್ ಸಾಹೇಬರು

ಇಮೇಜ್
ಆತ್ಮೀಯರೇ, 
ಫೆಬ್ರವರಿ ತಿಂಗಳ ಈ ಸಂಚಿಕೆಯಲ್ಲಿ ಹಳೆಯ ನೆನಪು ಮತ್ತು ಮರೆತುಹೋಗಿರುವ ಒಂದು ವೃತ್ತಿಯ ಬಗೆಗಿನ ವಿವರಗಳಿವೆ. ನಿಜ, ಕಳೆದುಹೋದ ಕಾಲ ಮತ್ತು ನಡೆಸಿದ ಜೀವನಕ್ರಮಗಳು ಇಂದು ಮರಳಿ ಬಾರದಿರಬಹುದು. ಆದರೆ ಸಾಗಿಬಂದ ದಾರಿಯನ್ನು ತಿರುಗಿನೋಡುವ ಪರಿಪಾಠ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ. ಪೆನ್ ರಿಪೇರಿಯಂಥ ಚಿಕ್ಕ ಕೌಶಲವನ್ನೇ ವೃತ್ತಿಯನ್ನಾಗಿಸಿ ಜೀವನ ನಡೆಸಿದ, ಅಜ್ಜಂಪುರದ ಪೇಟೆ ಬೀದಿಯಲ್ಲಿ ತುಂಬ ಪರಿಚಿತರಿದ್ದ ವ್ಯಕ್ತಿ ಶೇಖ್ ಉಮ್ಮರ್ ಸಾಬ್ ರನ್ನು ನೆನಪಿಸಿಕೊಂಡು ಮಿತ್ರ ಅಪೂರ್ವ ಬಸು ತಮ್ಮ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಂಥ ನೆನಪುಗಳ ಸಂಗ್ರಹ ಊರಿನಲ್ಲಿರುವವರ, ಅಜ್ಜಂಪುರದ ಸ್ಥಳೀಕರ ಸಂಗ್ರಹಗಳಲ್ಲಿ ಇರಬಹುದು. ಅವನ್ನು ಲೇಖನ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ. ಹಾಗೆ ಮಾಡುವಿರೆಂದು ಆಶಿಸುತ್ತೇನೆ.
- ಶಂಕರ ಅಜ್ಜಂಪುರ -----------------------------------------------------------------------------------------------------------------------------------------------------------------------------------------------
ಚಿತ್ರಗಳು, ಲೇಖನ  ಅಪೂರ್ವ ಬಸು, ಅಜ್ಜಂಪುರ


ಅಜ್ಜಂಪುರದ ಪೇಟೆ ಭಾಗವು ಊರು ಬೆಳೆದಂತೆಲ್ಲ ಅದರ ಕುರುಹೂ ಉಳಿಯದಂತೆ ಬದಲಾಗಿಹೋಗಿರುವುದನ್ನು ಕಾಲಧರ್ಮ ಎಂದು ಕರೆಯಬೇಕಲ್ಲದೆ, ಬೇರೆ ಯಾವ ವಿವರಣೆಯೂ ಹೊಂದಲಾರದು. ಇದ್ದರೂ ಒಂದ…

71. ಅಜ್ಜಂಪುರದ ಶ್ರೀ ಕನ್ಯಕಾಪರಮೇಶ್ವರೀ ದೇವಾಲಯ

ಇಮೇಜ್
ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಬರೆಯುತ್ತ ಸಾಗಿದಂತೆ, ಇದುವರೆಗೆ ಏಳೆಂಟು ದೇವಾಲಯಗಳನ್ನು ಈ ಬ್ಲಾಗ್ ನಲ್ಲಿ ಪರಿಚಯಿಸಲಾಗಿದೆ. ಈ ಸಂಚಿಕೆಯಲ್ಲಿ ಅಜ್ಜಂಪುರದ ಶ್ರೀ ಕನ್ಯಕಾ ಪರಮೇಶ್ವರೀ ದೇವಾಲಯದ ಬಗ್ಗೆ ಮಾಹಿತಿಗಳಿವೆ.   ಗೆಳೆಯ ಅಪೂರ್ವ ಬಸು ಅವರೊಂದಿಗೆ, ದೇವಾಲಯದ ಅಧ್ಯಕ್ಷ ಶ್ರೀ ಸತ್ಯನಾರಾಯಣ ಶೆಟ್ಟರನ್ನು ಸಂದರ್ಶಿಸಿ ಪಡೆದ ಮಾಹಿತಿಗಳ ಆಧಾರದಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ. ಅಜ್ಜಂಪುರದ ಶ್ರೀ ಸುಬ್ರಹ್ಮಣ್ಯ ಶೆಟ್ಟರ ನೇತೃತ್ವದಲ್ಲಿ ಪೇಟೆಯ ಬೀದಿಯಲ್ಲಿದ್ದ ಚಿಕ್ಕ ಮಳಿಗೆಯೊಂದರಲ್ಲಿ ಶ್ರೀರಾಮಮಂದಿರ ಆರಂಭವಾಯಿತು. ಶೆಟ್ಟರಿಗೆ ಹಾರ್ಮೋನಿಯಂ, ತಬಲಾ ವಾದನಗಳ ಪರಿಣತಿ ಮತ್ತು ಕಲಾಸಕ್ತಿಗಳಿದ್ದುದರಿಂದ, ಅವರು ಪ್ರತಿ ಶನಿವಾರ ಭಜನೆಯ ಏರ್ಪಾಡನ್ನು ಮಾಡಿದ್ದರು.  ಇದು ಕೆಲವು ಕಾಲ ನಡೆದುಬಂದಿತು. ಆಗಲೂ ವೈಶ್ಯರ ಕುಲದೇವತಾ ಮಂದಿರವನ್ನು ಸ್ಥಾಪಿಸುವ ಆಲೋಚನೆಯೇನೂ ಇರಲಿಲ್ಲ. ಏಕೆಂದರೆ ಅಜ್ಜಂಪುರದಲ್ಲಿ ಆರ್ಯವೈಶ್ಯ ಜನಾಂಗದ ಕುಟುಂಬಗಳ  ಸಂಖ್ಯೆ 20 ನ್ನು ಮೀರಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ದೊಡ್ಡ ಯೋಜನೆಯಾದಇದನ್ನು ಕೈಗೆತ್ತಿಕೊಳ್ಳುವುದು ಕಠಿಣವಾಗಿತ್ತು. ಆದರೆ ಪೇಟೆಯಲ್ಲಿದ್ದ ಶ್ರೀ ರಾಮ ಮಂದಿರವನ್ನು ಆಧರಿಸಿ ಶ್ರೀ ಕನ್ಯಕಾ ಪರಮೇಶ್ವರೀ ದೇವಾಲಯದ ಹೊಳಹು ಮೂಡಲುಆರಂಭವಾಯಿತು. ಇದಕ್ಕೆಂದು ದೇವಾಲಯ ನಿರ್ಮಾಣ ಸಮಿತಿಯನ್ನು 1966ರಲ್ಲಿ ಆರಂಭಿಸಲಾಯಿತು. ಹೀಗಾಗಿ 2016ನೇ ಇಸವಿಯು ದೇವಾಲಯದ ಸ್ವರ್ಣಮಹೋತ್ಸವವರ್ಷ.

70. ಅಜ್ಜಂಪುರದ ಶ್ರೀ ಕೋಟೆ ಆಂಜನೇಯ ದೇವಾಲಯ

ಇಮೇಜ್
ಆತ್ಮೀಯರೇ, ಅಜ್ಜಂಪುರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕಗಳು ಜರುಗಿ ಸರಿಯಾಗಿ ಒಂದು ದಶಕದ ನಂತರ ಈ ಲೇಖನ ಪ್ರಕಟವಾಗುತ್ತಿದೆ. , ನಾನು ಮತ್ತು ನನ್ನ ಪರಿವಾರ ನನ್ನ ಸ್ವಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ದೊರೆತಿತ್ತು. ದಶಕದ ನಂತರವೂ ದೇವಾಲಯಕ್ಕೆ ಆಗಮಿಸುವ ಭಕ್ತರು, ನಡೆಯುವ ಕಾರ್ಯಕ್ರಮಗಳಲ್ಲಿ ವೃದ್ಧಿಯಾಗಿರುವುದು ಸಂತೋಷದ ಸಂಗತಿ. 
ಕುಂಭಾಭಿಷೇಕದ ಸಂದರ್ಭದಲ್ಲಿ ಎಲ್ಲ ಚಿತ್ರಗಳನ್ನೂ ನನ್ನ ಮಗಳು ಚಿ.ಸೌ. ರಮ್ಯಾ ನವೀನ್ ಸೆರೆಹಿಡಿದಿದ್ದಳು. ಅದನ್ನು ಸಂಗ್ರಹಿಸಿದ್ದರಿಂದ ಆ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಾಗಿದೆ. ಇದಲ್ಲದೆ ಹಳೆಯ ಚಿತ್ರಗಳೂ ಈ ಸಂಕಲನದಲ್ಲಿವೆ. 
ಇದೇ ಸಂದರ್ಭದಲ್ಲಿ ಆಗಮಿಸಿದ್ದ ತರೀಕೆರೆಯ ಹಿರಿಯ ಖ್ಯಾತ ಪತ್ರಕರ್ತ ಶ್ರೀ ಅಂಚೆ ನಾಗಭೂಷಣರು ಅಜ್ಜಂಪುರದ ಬಗ್ಗೆ ದಾಖಲಾತಿಯ ಕಾರ್ಯವನ್ನು ಯಾರಾದರೂ ಕೈಗೊಳ್ಳಬೇಕಾಗಿದೆ ಎಂದು ಸೂಚಿಸಿದ್ದರು. ಅದಕ್ಕೆ ನಾನು ಪ್ರತಿಕ್ರಿಯಿಸಿ, ಅದನ್ನು ಮಾಡುತ್ತೇನೆ ಎಂದು ಹೇಳಿದ್ದೆ. ಮುದ್ರಣ ಮಾಧ್ಯಮವು ತುಂಬ ದುಬಾರಿ ಹಾಗೂ ನಿರ್ವಹಿಸಲಾಗದ್ದು ಎಂದು ಭಾವಿಸಿದ್ದರಿಂದ, ಇಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಬಿಸುವುದು ಅನಿವಾರ್ಯವಾಯಿತು. ತತ್ಫಲವಾಗಿ  ಈ ಬ್ಲಾಗ್ ಅಂತರಜಾಲದಲ್ಲಿ ಅಜ್ಜಂಪುರ ಮೂಡಿಬರಲು ಸಾಧ್ಯವಾಯಿತು. 
70ನೇ ಸಂಚಿಕೆಯಾಗಿ ಬಂದಿರುವ ಈ ಲೇಖನವು ಸ್ಥಳೀಯ ಹಾಗೂ ಹೊರ ಊರು, ದೇಶಗಳಲ್ಲಿರುವ ಅಜ್ಜಂಪ…