ಪೋಸ್ಟ್‌ಗಳು

September, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

05. ಶ್ರೀ ಎ. ಸೀತಾರಾಮ ಭಟ್ಟರು

ಇಮೇಜ್
ಶ್ರೀ ಎ. ಸೀತಾರಾಮ ಭಟ್ಟರು
"ಇವರು ನಮ್ಮ ಹಿರಿಯರು" ಮಾಲಿಕೆಯಲ್ಲಿನ ನಾಲ್ಕನೆಯ ಲೇಖನವಿದು. ೫೦-೬೦ರ ದಶಕದಲ್ಲಿ ಅಜ್ಜಂಪುರದ ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸಮಾಡಿದ ಈ ಹಿರಿಯರು ತಮ್ಮ ಸರಳ ಜೀವನ ಶೈಲಿಯಿಂದ ಜನರ ಮನಸ್ಸನ್ನು ಗೆದ್ದವರು. ಇಂದಿನ ರಾಜಕೀಯಕ್ಕೆ ಹೋಲಿಸಿದರೆ, ಅವರದು ರಾಜಕೀಯವೇ ಅಲ್ಲ. ಅವರಿಗೆ ಅದೊಂದು ಜನಸಂಪರ್ಕದ ಮಾಧ್ಯಮವಾಗಿದ್ದಿತು. ಅವರ ವಿಶೇಷ ಶೈಲಿ, ಉಡುಪು ಮತ್ತು ರಾಜಕೀಯ ಚಟುವಟಿಕೆಗಳನ್ನು ಮಿತ್ರ ಮಂಜುನಾಥ ಅಜ್ಜಂಪುರ ಇಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀ ಸೀತಾರಾಮಭಟ್ಟರ ಪರಿಚಯವಿರುವ ಜನರು ಇದನ್ನು ನಿಶ್ಚಿತವಾಗಿ ಆನಂದಿಸುವರು.

ನಮ್ಮೂರಿನ "ಕುಲಪುರೋಹಿತ"ರೆಂಬ ಅಭಿದಾನವಿದ್ದ ಸೀತಾರಾಮ ಭಟ್ಟರು ನಿಜಕ್ಕೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರು. ನಗುಮುಖ,ಒಂದಿಷ್ಟು ತುಂಟತನ, ಸರಳತೆ ಅವರ ವ್ಯಕ್ತಿತ್ವದ ಗುಣಲಕ್ಷಣಗಳಾಗಿದ್ದವು.ನಿಜವಾಗಿಯೂ ಅವರೊಬ್ಬ Born Leader. ಇವತ್ತಿನ ಪರಿಭಾಷೆಯಲ್ಲಿ ಅವರೊಬ್ಬ Crowd Puller. 1950 ಮತ್ತು 1960ರ ದಶಕಗಳಲ್ಲಿ, ಅವರು ಊರಿನ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದ್ದರು.
ಅಜ್ಜಂಪುರದಲ್ಲಿ ಅತಿ ಹೆಚ್ಚು ಸಮುದಾಯಗಳಿರುವುದು ವಿಶೇಷವೇ. ಲಿಂಗಾಯತರು, ಕುರುಬರು ಹೆಚ್ಚು ಜನ ಇದ್ದರು ಎಂದರೂ ಬ್ರಾಹ್ಮಣ, ಆರ್ಯವೈಶ್ಯ, ಮರಾಠ, ಭಾವಸಾರ ಕ್ಷತ್ರಿಯ,  ದೇವಾಂಗ, ವಿಶ್ವಕರ್ಮ, ಹೀಗೆ ಅನೇಕ ಜಾತಿಗಳ ಜನರಿದ್ದರು. ಮುಸ್ಲಿಮರನ್ನೂ ಒಳಗೊಂಡಂತೆ ಎಲ್ಲ ಸ…