ಪೋಸ್ಟ್‌ಗಳು

November, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

09. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ

ಇಮೇಜ್
ಹಿಂದಿನ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದಂತೆ, ಈ ಸಂಚಿಕೆಯಲ್ಲಿ ನಿವೃತ್ತ ಅರಣ್ಯಮುಖ್ಯಾಧಿಕಾರಿ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಪರಿಚಯ ಲೇಖನ ಇಲ್ಲಿದೆ. ಅವರ ಸಾಧನೆ, ಸಾಮಾಜಿಕ ಕಾಳಜಿಗಳನ್ನು ಬಿಂಬಿಸುವ ಹಲವಾರು ಅಂಶಗಳನ್ನು ನೀವು ಇಲ್ಲಿ ಗುರುತಿಸಬಹುದು.
ಅವರ ಹಿರಿಯರು ಕಳೆದ ಶತಮಾನದ ಆದಿಭಾಗದಲ್ಲಿ ಅಜ್ಜಂಪುರದ ನಿವಾಸಿಗಳಾಗಿದ್ದವರು. ಕಾಲಾಂತರದಲ್ಲಿ ಈ ಕುಟುಂಬದ ಸದಸ್ಯರು ರಾಜ್ಯದ, ದೇಶದ ಹಾಗೂ ವಿಶ್ವದ ಅನೇಕ ಎಡೆಗಳಿಗೆ ತೆರಳಿ ಸಾಧನೆ ಮಾಡಿದರು. ಈ ಎಲ್ಲ ಹಂತಗಳಲ್ಲೂ ತಮ್ಮ ಹುಟ್ಟೂರಿನ ಬಗೆಗಿನ ಅಭಿಮಾನವನ್ನು ಅವರಾರೂ ಮರೆಯಲಿಲ್ಲವೆನ್ನುವುದು ವಿಶೇಷ. ಸರಳ, ಸಜ್ಜನಿಕೆಯ ಜತೆಜತೆಗೇ, ತಮಗನ್ನಿಸಿದುದನ್ನು ನಿರ್ಭಿಡೆಯಿಂದ ಹೇಳುವ, ಅರಣ್ಯ, ಪರಿಸರ ಮತ್ತು ಮಾನವೀಯತೆಗಳ ಬಗ್ಗೆ ಕಳಕಳಿಹೊಂದಿರುವ ೮೭ರ ಹರೆಯದ ಅಜ್ಜಂಪುರ ಕೃಷ್ಣಸ್ವಾಮಿಗಳು ಉತ್ತಮ ಅಭಿರುಚಿಯ ಪ್ರತೀಕ. ಅವರನ್ನು ಬೆಂಗಳೂರಿನ ಬಿ.ಟಿ.ಎಂ. ಲೇಔಟ್‌ನ ಅವರ ನಿವಾಸಕ್ಕೆ ಹೋಗಿ ಸಂದರ್ಶಿಸಿದೆ. ಅವರು ನೀಡಿರುವ ಅಪರೂಪದ ಛಾಯಾಚಿತ್ರಗಳು, ಲೇಖನಗಳು ಕಳೆದು ಹೋದ ಕಾಲದ ಸಿರಿಯನ್ನು ನೆನಪಿಸುತ್ತವೆ.
"ಅನುಭವದ ಬೆಂಬಲ ಇರುವಷ್ಟು ದೂರಕ್ಕೆ ನನಗೆ ನೆನಪಾದುದನ್ನೆಲ್ಲ ನನ್ನ ಬರಹಗಳಲ್ಲಿ ದಾಖಲಿಸಿದ್ದೇನೆ. ಇವು ಯುವ ಪೀಳಿಗೆಗೆ ಮಾದರಿಯಾದೀತು ಎಂಬ ಆಶಯ ನನ್ನದು, ಅವರು ಅದನ್ನು ಸದುಪಯೋಗ ಮಾಡಿಕೊಂಡರೆ ನನ್ನ ಬರಹ ಸಾರ್ಥಕವಾದಂತೆ. ಈ ಬರಹಗಳಲ್ಲಿ ನಾನು ಎಂದು ಹೇಳಿಕೊಂಡಿರುವ ಎಡೆಯಲ್ಲೆಲ್ಲ…

08. ಸಾಹಸಿ ಕನ್ನಡಿಗ - ಅಜ್ಜಂಪುರ ಸರ್ಕಸ್ ಸುಬ್ಬರಾವ್

ಇಮೇಜ್
ಹಿರಿಯಪತ್ರಕರ್ತಗರುಡನಗಿರಿನಾಗರಾಜರುಅಜ್ಜಂಪುರದವರೇನೂಅಲ್ಲ.ಆದರೆಅವರುನಾಡು-ನುಡಿಯಬಗ್ಗೆತಳೆದವಿಶಾಲದೃಷ್ಟಿಕೋನಎಲ್ಲರೂಅನುಸರಿಸುವಂಥದು.ಅವರೊಂದುಸಂದರ್ಶನದಲ್ಲಿಹೇಳಿದ್ದರು: "ಕರ್ನಾಟಕದಲ್ಲಿ27000ಕ್ಕೂಹೆಚ್ಚುಹಳ್ಳಿಗಳಿವೆ.ನಾನುಕನಿಷ್ಠ20000  ಹಳ್ಳಿಗಳನ್ನಾದರೂಸುತ್ತಿರುವೆ.ಅಲ್ಲಿನವಿಶೇಷಗಳು,ಜನ,ಸಂಸ್ಕೃತಿಗಳಬಗ್ಗೆಅಧ್ಯಯನಮಾಡುವಅವಕಾಶಗಳನ್ನುಅರಸಿಹೋದೆ.ಹೀಗಾಗಿನಮ್ಮದೇಪ್ರದೇಶಗಳವೈವಿಧ್ಯ,ಪ್ರತಿಭೆಗಳುಕಣ್ಣಿಗೆಕಾಣುವಂತಾಯಿತು.ಇದುಪತ್ರಕರ್ತರಿಗೆಅತ್ಯವಶ್ಯ