ಪೋಸ್ಟ್‌ಗಳು

June, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

15. ಆದರ್ಶ ಶಿಕ್ಷಕ ಶ್ರೀ ಎನ್. ಎಸ್. ಅನಂತರಾವ್

ಇಮೇಜ್
ಶ್ರೀ ಎನ್. ಎಸ್. ಅನಂತರಾವ್

ಕುಳ್ಳನೆಯ ನಿಲುವು, ಕಾಲೇಜಿಗೆ ಹೊರಟಾಗ ಖಾದೀ ಸೂಟು, ಮಿಕ್ಕಂತೆ ಸರಳ ಉಡುಪು, ಸದಾ ಚಿಂತನೆಯಲ್ಲಿ ತೊಡಗಿರುವಂಥ ಮುಖಭಾವ, ವಿದ್ಯಾರ್ಥಿಗಳನ್ನು ಕಂಡರೆ ಅಕ್ಕರೆಯ ಜತೆಗೆ, ಅವರು ಕಲಿಯಬೇಕಾದಷ್ಟನ್ನು ಕಲಿಯುತ್ತಿಲ್ಲವಲ್ಲ ಎಂಬ ಕಳಕಳಿ. ಇದು ನಮ್ಮೂರಿನ ಪ್ರೌಢಶಾಲೆಯ ನಿವೃತ್ತ ಮಖ್ಯೋಪಾಧ್ಯಾಯರಾಗಿದ್ದ  ನಲ್ಲೂರು ಶ್ರೀನಿವಾಸರಾವ್ ಅನಂತರಾವ್ ಅವರ ಬಾಹ್ಯಚರ್ಯೆ. ಅವರು ಗಾಂಧೀವಾದಿ. ಅಹಿಂಸೆಯಲ್ಲಿ ತುಂಬ ನಂಬಿಕೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ, ಅವರನ್ನು ಕುಳ್ಳಿರಿಸಿಕೊಂಡು ಅನುನಯದ ಮಾತನಾಡಿ ಪರಿವರ್ತನೆಗೆ ಒಳಗಾಗುವಂತೆ ಮಾಡುತ್ತಿದ್ದವರು. 

ಅವರು ಅಜ್ಜಂಪುರಕ್ಕೆ ಸಮೀಪವಿರುವ ಶಾಂತಿಸಾಗರದ ಬಳಿಯಲ್ಲಿರುವ ನಲ್ಲೂರಿನಲ್ಲಿ  ೧೯೧೬ರಲ್ಲಿ ಜನಿಸಿದರು. ತಂದೆ ಶ್ರೀನಿವಾಸರಾವ್, ತಾಯಿ ಪದ್ಮಾವತಿ ಬಾಯಿ. ತಮ್ಮ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ರಾಯರು, ಅವರ ಅಣ್ಣ ಅಶ್ವತ್ಥನಾರಾಯಣ ರಾಯರ ನೆರವಿನಿಂದ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದರು. ಅನತಿಕಾಲದಲ್ಲೇ ಅವರ ಅಣ್ಣನೂ ತೀರಿಕೊಂಡಾಗ, ಶಾಲಾ ಮಕ್ಕಳಿಗೆ ಮನೆಪಾಠಮಾಡುತ್ತ, ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಮದನಪಲ್ಲಿಯಲ್ಲಿ ಬಿ.ಟಿ. ಅಧ್ಯಾಪಕ ಪದವಿಯನ್ನು ಪಡೆದರು.೧೯೩೬-೩೭ನೇ ಇಸವಿಯು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಈ ಸಮಯದಲ್ಲಿ ಗೋವಾದ ಟ್ರಿನಿಟಿ ಆಂಗ್ಲಶಾಲೆಯಲ್ಲಿ ಅಧ್ಯಾಪಕರಾಗಿ ನಿಯುಕ್ತರಾದರು. ೧೯೩…