ಪೋಸ್ಟ್‌ಗಳು

September, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

18. ನಮ್ಮ ಶಾಲೆ

ಇಮೇಜ್
ಅಜ್ಜಂಪುರದ  ಆರ್.ಇ.ಎ. ಪ್ರೌಢಶಾಲೆಯಿಂದ

ಶೆಟ್ರು ಸಿದ್ದಪ್ಪನವರ  ಸರಕಾರೀ ಪದವೀ ಪೂರ್ವಕಾಲೇಜಿನವರೆಗೆ
-ಅಪೂರ್ವ


ಈ ಲೇಖನವನ್ನು ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ)ಯವರು ಅಜ್ಜಂಪುರದ ಶೆಟ್ಟರ ಸಿದ್ಧಪ್ಪ ಪ್ರೌಢಶಾಲೆಯ 
ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ರಚಿಸಿದರು. ಇದನ್ನು ಬರೆಯುವ ಕಾಲಕ್ಕೆ ಅವರು ಅನೇಕರಿಂದ ಮಾಹಿತಿಗಳನ್ನು
ಪಡೆದು, ಬಹಳ ಶ್ರಮವಹಿಸಿ ಸಿದ್ಧಪಡಿಸಿದರು. ಕಾರಣಾಂತರಗಳಿಂದ ಆ ಉತ್ಸವ ನಡೆಯಲಿಲ್ಲ.
ಅದು ಇಲ್ಲಿ ಪ್ರಕಟವಾಗುತ್ತಿದೆ. 
ಈ ಪ್ರೌಢಶಾಲೆಗೆ ಮಹತ್ವದ ದಾನಿಗಳಾಗಿದ್ದ ಶ್ರೀ ಶೆಟ್ಟರ ಸಿದ್ಧಪ್ಪನವರ ಬಗ್ಗೆ ಈಗಾಗಲೇ ಒಂದು ಲೇಖನ 
ಪ್ರಕಟಗೊಂಡಿರುವುದನ್ನು ತಾವೆಲ್ಲರೂ ಗಮನಿಸಿರಬಹುದು. ಪ್ರಸ್ತುತ ಲೇಖನದಲ್ಲಿ ಶಾಲೆಯ ಇತಿಹಾಸವನ್ನು ವಿಸ್ತಾರವಾಗಿ 
ವಿವರಿಸಲಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಹರಡಿದ್ದಾರೆ. ಅವರು ತಮ್ಮ ಶಾಲೆಯ 
ಇತಿಹಾಸವನ್ನು ಮನಗಾಣಲಿ, ಹಳೆಯ ನೆನಪುಗಳು ಮರುಕಳಿಸಲಿ ಎಂಬ ಸದಾಶಯದಿಂದ ಬರೆದಿರುವ ಈ ಲೇಖನಕ್ಕೆ 
ನಿಮ್ಮೆಲ್ಲರಿಂದ ಪ್ರತಿಕ್ರಿಯೆಗಳು ಬರುವಂತಾಗಲಿ. ಅಂತೆಯೇ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಜನಪ್ರಿಯವಾಗಿದ್ದ 
ಅದೀಗ ಪ್ರಥಮ ದರ್ಜೆಯ ಕಾಲೇಜು ಆಗಿ ಪರಿವರ್ತಿತವಾಗಿದೆ.
ನಿಮ್ಮ  ಕಾಲಾವಧಿಯಲ್ಲಿದ್ದ ಅಧ್ಯಾಪಕರು,  ವಿಶೇಷಗಳು, ಆಟೋಟಗಳು, ಶಾಲಾ ಚಟುವಟಿಕೆಗಳ ಬಗ್ಗೆ ನಿಮ್ಮ 
ಅನುಭವಗಳನ್ನು ಹಂಚಿಕೊಳ್ಳಿ.  
ಶಾಲೆಯ ಹಳೆಯ-ಹೊಸ ವಿದ್ಯಾರ್ಥಿಗಳೆಲ್ಲರಿಗೂ ಇದು ಸ್ಫೂರ್ತಿ ತುಂಬಲಿ. 


-ಶಂ…