ಪೋಸ್ಟ್‌ಗಳು

February, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

23. ಈರ್ವರು ಹಿರಿಯರು

ಇಮೇಜ್
ಜೋಗಿ ತಿಮ್ಮಯ್ಯ

೧೯೩೦-೪೦ರದಶಕದಲ್ಲಿಅಜ್ಜಂಪುರ ಜೋಗಿ ತಿಮ್ಮಯ್ಯನವರು ಧನಿಕರು. ಲೇವಾದೇವಿಯ ವ್ಯವಹಾರ ಇಟ್ಟಕೊಂಡಿದ್ದರು. ಪ್ರತಿ ವಾರಕ್ಕೆ ನೂರು ರೂಪಾಯಿಗಳಿಗೆ ಹತ್ತು ರೂಪಾಯಿ ಬಡ್ಡಿ ಪಡೆಯುತ್ತಿದ್ದರು. ಆದರೆ ಅದೆಲ್ಲಕ್ಕೂ ಕಾಗದ ಪತ್ರಗಳ ಜಂಜಾಟವಿರುತ್ತಿರಲಿಲ್ಲ. ಕೇವಲ ನಂಬಿಕೆ, ವಿಶ್ವಾಸಗಳೇ ಆಧಾರ. ವ್ಯಕ್ತಿಯ ಪ್ರಾಮಾಣಿಕತೆಯನ್ನು ಸರಿಯಾಗಿ ಗುರುತಿಸಿ ಅವರೊಡನೆ ವ್ಯವಹರಿಸುತ್ತಿದ್ದರು.  ಅವರನ್ನು ರಾಮೇ ತಿಮ್ಮಣ್ಣನೆಂದೂ ಕರೆಯುತ್ತಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡಿರದ ತಿಮ್ಮಯ್ಯನವರಲ್ಲಿ ಜೀವಕಾರುಣ್ಯ ಹೆಚ್ಚಾಗಿತ್ತು. ಎತ್ತುಗಳು, ಹಸುಗಳು ರೈತರ ಜೀವನಾಡಿಯೆಂದು ತಿಳಿದಿದ್ದರು. ಅವುಗಳ ಆರೋಗ್ಯ ಚೆನ್ನಾಗಿದ್ದರೆ, ರೈತನ ಜೀವನವೂ ಹಸನಾಗಿರುತ್ತದೆಂಬುದು ಅವರ ನಂಬಿಕೆ. ಇದಕ್ಕೆಂದೇ ಅಜ್ಜಂಪುರದಲ್ಲಿ ಪಶುವೈದ್ಯ ಶಾಲೆಯನ್ನು ನಿರ್ಮಿಸಲು ಮುಂದಾಗಿ, ಅದರಲ್ಲಿ ಯಶಸ್ವಿಯಾದರು. ಇತ್ತೀಚೆಗೆ ಒಂದು ಚಿತ್ರವನ್ನು ನೋಡಿದೆ. ಅದರಲ್ಲಿ ಜೋಗಿ ತಿಮ್ಮಯ್ಯನವರು, ಸುಬ್ರಹ್ಮಣ್ಯಶೆಟ್ಟರುಮತ್ತುಶೆಟ್ರು ಸಿದ್ದಪ್ಪನವರಭಾವಚಿತ್ರಗಳನ್ನು ಒಟ್ಟಾಗಿ ಜೋಡಿಸಿಟ್ಟಿರುವ ಅರ್ಥಪೂರ್ಣ ಚಿತ್ರವದು. ಅಜ್ಜಂಪುರದ ಬೆಳವಣಿಗೆಗೆ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾದ ಈ ಮಹನೀಯರನ್ನು ಇಂದಿನ ಪೀಳಿಗೆ ಸ್ಮರಿಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ.
ಚಿತ್ರ ಕೃಪೆ :ವೆಂಕಟೇಶ್, ಪವಿತ್ರ ಪ್ರಿಂಟರ್ಸ್, ಅಜ್ಜಂಪುರ. * * * * * *

ಪಂಡಿತ್  ಕರೀಂ ಖಾನ್
ಇವರು ಅಜ್ಜಂಪುರದ ಏಕಮಾತ್ರ …