ಪೋಸ್ಟ್‌ಗಳು

May, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

26. ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ

ಅಜ್ಜಂಪುರದ ಬಗ್ಗೆ ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ ಇಲ್ಲಿದೆ. ಇತ್ತೀಚೆಗೆ ಅವರು ನೀಡಿರುವ ವಿವಿಧಮಾಹಿತಿಗಳನ್ನು ಆಧರಿಸಿದಈ ಬರಹವನ್ನುನಿಮ್ಮ ಓದಿಗಾಗಿ ಇಲ್ಲಿ ನೀಡಿದ್ದೇನೆ.
ಸಮಾಜದಲ್ಲಿ ಎಲ್ಲ ಕಾಲಕ್ಕೂ ಒಳ್ಳೆಯವರು ಕೆಟ್ಟವರು ಇರುತ್ತಾರೆ.ವಿವಿಧಜಾತಿ, ಜನಾಂಗಗಳಲ್ಲಿ ದುಷ್ಟರು ಇಲ್ಲವೆಂದಲ್ಲ. ಅದನ್ನು ಆಯಾ ಸಮಾಜದವರು ಹೇಳಿಕೊಳ್ಳುವ ಮನೋಧರ್ಮ ತೋರಬೇಕಷ್ಟೆ. ಒಳಿತಿನಂತೆ ಕೆಡುಕನ್ನೂ ಹೇಳಿಕೊಳ್ಳುವುದು ರೂಢಿಯಾಗಬೇಕು. ಬ್ರಾಹ್ಮಣರಲ್ಲಿ ಈಕೆಳಗಿನಈರ್ವರನ್ನು ಕುರಿತಾಗಿನ ಪ್ರಸ್ತಾಪ ಆಗೀಗ ಬಂದುಹೋಗುವುದುಂಟು.ಅಜ್ಜಂಪುರದ ಕೆಲವು ಮಹನೀಯರನ್ನು ನೆನಪಿಸಿಕೊಂಡಿರುವಂತೆ ಕುಖ್ಯಾತರನ್ನೂ ಈ ಭಾಗದಲ್ಲಿ ನೆನಪಿಸಿಕೊಂಡಿದ್ದೇನೆ.ಅವರು ಅಂದಿಗೆ ಕುಖ್ಯಾತರಾದರೂ, ಇಂದು ನಡೆಯುತ್ತಿರುವ ಅಪರಾಧಗಳ ಮುಂದೆ ಅವರದೇನೂ ಅಲ್ಲ. ಹಾಗೆಂದು ಕ್ಷಮಾರ್ಹವೂ ಅಲ್ಲ.

ಸೊಕ್ಕೆ ಗಿರಿಯಪ್ಪನೆಂಬಾತನು ಜಾತಿಯಿಂದ ಬ್ರಾಹ್ಮಣ. ಕೇವಲ ಜಾತಿಯಿಂದ ಶ್ರೇಷ್ಟತೆ ಬರುವುದಿಲ್ಲವಷ್ಟೆ. ವ್ಯಕ್ತಿಯ ನಡವಳಿಕೆಯನ್ನು ಜನರು ಮೆಚ್ಚುವರೇ ವಿನಾ ಅವನ ಕುಲ-ಅಂತಸ್ತುಗಳನ್ನಲ್ಲ. ಗಿರಿಯಪ್ಪನು ದುಷ್ಟಸಹವಾಸಕ್ಕೆ ಬಿದ್ದುದರ ಪರಿಣಾಮವಾಗಿ ಮದ್ಯವ್ಯಸನ, ದುಂಡಾವರ್ತಿಗಳನ್ನು ಬೆಳೆಸಿಕೊಂಡಿದ್ದ. ಪೇಟೆಯ ಬೀದಿಯಲ್ಲಿ ಸುತ್ತುತ್ತ ಅಂಗಡಿಗಳನ್ನು ಬೆದರಿಸಿ ಉಪಜೀವನ ನಡೆಸುತ್ತಿದ್ದ ಅವನ ಉಪಟಳಕ್ಕೆ ಜನರು ಬೇಸತ್ತಿದ್ದರು. ನೇರವಾಗಿ ಅವನನ್ನು ಎದುರಿಸುವ ಧೈರ್ಯವಿಲ್ಲದೆ, ಯಾರೋ ಒಬ್…