ಪೋಸ್ಟ್‌ಗಳು

October, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಯಾಮರಣ ಬೇಡುತ್ತಿರುವ ಅಮೃತಮಹಲ್ ರಾಸುಗಳು

ಇಮೇಜ್
ಆತ್ಮೀಯರೇ,

ಈ ಸಂಚಿಕೆಯಲ್ಲಿ ಪ್ರಕಟವಾಗಿರುವುದು ಅಜ್ಜಂಪುರದ ಅಮೃತಮಹಲ್ ಪಶುಸಂವರ್ಧನಾ ಕೇಂದ್ರದ ಪ್ರಸ್ತುತ ಸ್ಥಿತಿ-ಗತಿ. ಇದು ಛಾಯಾಚಿತ್ರದ ನಕಲು. ಹೀಗಾಗಿ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲದಿರುವುದಕ್ಕೆ ವಿಷಾದಿಸುತ್ತೇನೆ. ಸ್ಪಷ್ಟ ಓದಿಗೆಂದು ಚಿತ್ರವನ್ನು ಸೂಕ್ತವಾಗಿ ಹಿಗ್ಗಲಿಸಿಕೊಂಡು ನೋಡಿದರೆ ಸ್ಫುಟವಾಗಿ ಕಾಣುತ್ತದೆ. ಈ ವಿಸ್ತೃತ ವರದಿಯನ್ನು ದಿನಾಂಕ 15-09-2013ರಂದು ಶ್ರೀ ಆರಗ ರವಿಯವರು ವಿಜಯ ಕರ್ನಾಟಕ ದಿನಪತ್ರಿಕೆಯ ಶಿವಮೊಗ್ಗದ ಆವೃತ್ತಿಯಲ್ಲಿ ಪ್ರಕಟಿಸಿದರು. ಈ ಕೇಂದ್ರದ ಕುರಿತಾಗಿ ಜುಲೈ 2012ರಲ್ಲಿ ಸವಿಸ್ತಾರ ವರದಿಯನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. 
ಐತಿಹಾಸಿಕ ಮಹತ್ವವುಳ್ಳ ಈ ಕೇಂದ್ರದ ಹದಗೆಟ್ಟಿರುವ ಪರಿಸ್ಥಿತಿಯ ಸುಧಾರಣೆಗೆ ಸರಕಾರದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಪ್ರಯತ್ನ ಕೈಗೊಳ್ಳುವ ಆಲೋಚನೆ ಅಜ್ಜಂಪುರದಲ್ಲಿ ಬಂದಂತಿದೆ. ಜತೆಗೇ ಈ ಕೇಂದ್ರದ ಮೇಲೆ ಲೋಕಾಯುಕ್ತರು ಕ್ರಮಕ್ಕೆ ಮುಂದಾಗಿರುವ ವರದಿಗಳೂ ಬರುತ್ತಿವೆ.

ಈ ಲೇಖನದ ಪುನರ್ ಪ್ರಕಟಣೆಯ ಅನುಮತಿಗೆಂದುಮೂಲ ಲೇಖಕ ಶ್ರೀ ಆರಗ ರವಿಯವರನ್ನು ಸಂಪರ್ಕಿಸಿದ್ದಾಯಿತು. ಅವರಿಂದ ಉತ್ತರ ಬರಲಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಈ ವರದಿಯನ್ನು ಕೃಪೆ :  ಚಿತ್ರ : ಶ್ರೀ ಎ.ಎನ್. ಪ್ರಸನ್ನ,  ಲೇಖನ : ಶ್ರೀ ಆರಗ ರವಿ ಎಂಬ ಸ್ಮರಣವಾಕ್ಯದೊಡನೆ ಇಲ್ಲಿ ಪ್ರಕಟಿಸಲಾಗಿದೆ. ಮನ್ನಿಸುವರೆಂದು ಭಾವಿಸುವೆ. 
ಕೃಪೆ :  ಚಿತ್ರ : ಎ.ಎನ್. ಪ್ರಸನ್ನ,  ಲೇಖನ : ಶ್ರೀ ಆರಗ ರವಿ