ಪೋಸ್ಟ್‌ಗಳು

November, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಮೃತಮಹಲ್ ಕಾವಲು ಉಳಿಸಿ -ಅವಿರತ ಹೋರಾಟದ ಕ್ರೋಢೀಕೃತ ವರದಿ ಸಂಗ್ರಹ - ಭಾಗ ೧

ಇಮೇಜ್
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 
ಈ ಲೇಖನ ಸರಣಿ ಮೂರು ಸಂಚಿಕೆಗಳಲ್ಲಿದೆ. ಅಜ್ಜಂಪುರದಲ್ಲಿರುವ ಯುವ ಪತ್ರಕರ್ತ ಶ್ರೀ ಎನ್. ವೆಂಕಟೇಶ ಹಾಗೂ ಅಮೃತಮಹಲ್ ಕಾವಲು ಉಳಿಸಿ ಹೋರಾಟ ಸಮಿತಿಯವರ ಅವಿರತ ಶ್ರಮ ಮತ್ತು ಹೋರಾಟದ ಫಲವಾಗಿ ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕ್ಷೇತ್ರದ ಅಸ್ತಿತ್ವ ನಾಶವಾಗದಂಥ ನೆಲೆ ಕಂಡಿದೆ. ಈ ಸಂಸ್ಥೆಯನ್ನು ಅಷ್ಟುದ್ದ ಹೆಸರು ಹಿಡಿದು ಯಾರೂ ಕರೆಯುವುದಿಲ್ಲ, ಬದಲಾಗಿ ಫಾರಂ ಎನ್ನುವುದೇ ಹೆಚ್ಚು ಬಳಕೆಯಲ್ಲಿದೆ. ಫಾರಂನ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ಮತ್ತು ಪ್ರೀತಿ. ಏಕೆಂದರೆ ಬಾಲ್ಯದಲ್ಲಿ ಅಲ್ಲಿನ ಅಮೃತಮಹಲ್ ತಳಿಯ ಹಸುಗಳ ಹಾಲನ್ನು ಕುಡಿದೇ ಬೆಳೆದವರು ನಾವೆಲ್ಲ. ಅದರ ಉತ್ತುಂಗ ಸ್ಥಿತಿಯಿದ್ದುದು 60-70ರ ದಶಕಗಳಲ್ಲಿ. ಆಗ ಈ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶ್ರೀ ಟಿ. ಎಸ್. ಕೃಷ್ಣಮೂರ್ತಿಯವರು ಅದನ್ನು ವ್ಯವಸ್ಥಿತ ರೂಪದಲ್ಲಿಟ್ಟಿದ್ದರು. ಮೊಲ ಸಾಕಾಣಿಕೆಯಂಥ ಹೊಸ ಆಯಾಮವನ್ನು ಅಜ್ಜಂಪುರಕ್ಕೆ ಪರಿಚಯಿಸಿದರು. ಸರಕಾರದಿಂದ ದೊರೆಯುತ್ತಿದ್ದ ಅನುದಾನದಲ್ಲಿ ತಮ್ಮಿಂದ ಸಾಧ್ಯವಿದ್ದುದನ್ನೆಲ್ಲ ಪ್ರಾಮಾಣಿಕವಾಗಿ ಮಾಡಿದರು. ತಮ್ಮ ವೃತ್ತಿ ಮತ್ತು ಸಂಸ್ಥೆಯ ಬಗ್ಗೆ ಅವರಿಗೆ ಭಾವನಾತ್ಮಕ ಸಂಬಂಧಗಳಿದ್ದವು. ಅವರು ನಿವೃತ್ತರಾದರು. ಇಡೀ ಸಂಸ್ಥೆಯ ಆಡಳಿತ ಹದಗೆಟ್ಟಿತು, ಭ್ರಷ್ಟ ಅಧಿಕಾರಿಗಳು ತೂರಿಕೊಂಡರು. ನಾನು ಅಜ್ಜಂಪುರ ಬಿಟ್ಟು ನಾಲ್ಕುದಶಕಗಳೇ ಆದರೂ, ನನಗೆ ಊರಿನ ಸಂಪರ್ಕ ತಪ್ಪಿಹೋಗಲಿಲ್ಲ. ಊರಿಗೆ ಹೋದ…