ಪೋಸ್ಟ್‌ಗಳು

August, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮರೆಯಾದ ಗ್ರಾಮೀಣ ಕಸುಬು - ಹಲ್ಲೆ ಹೊಡೆಯುವವರು ಹೋದರೆಲ್ಲಿ ?

ಇಮೇಜ್
ಆತ್ಮೀಯ ಓದುಗರೇ, ಬಾಲ್ಯದ ನೆನಪುಗಳು ಯಾವಾಗಲೂ ಗಾಢ ಮತ್ತು ತೀವ್ರ. ಅದು ನೆನಪಿನ ಸಂಗ್ರಹದಿಂದ ಸುಲಭವಾಗಿ ಮಸಳಿಹೋಗದು. ನನ್ನ ಬಾಲ್ಯದಲ್ಲಿ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಗಂಟೆಗಟ್ಟಲೆ ನೋಡುತ್ತ ನಿಲ್ಲುತ್ತಿದ್ದೆ. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಈ ಕಸುಬು ಕೊನೆಯುಸಿರು ಎಳೆಯುತ್ತಿರುವ ಈ ದಿನಗಳಲ್ಲಿ  ಸ್ಮರಣೆಗೆ ಬಂದಿತು.  ನನ್ನ ಸಮಕಾಲೀನರು, ಹಿರಿಯರಿಗೆ ಇದೊಂದು ನೆನಪು ಮಾತ್ರವಾದರೆ, ಹಿಂದೆ ಹೀಗಿತ್ತು ಎಂಬ ಮಾಹಿತಿಯಾದರೂ ಕಿರಿಯರಿಗೆ ದೊರಕಲಿ ಎಂಬ ಉದ್ದೇಶದ ಈ ಬರಹ ನಿಮಗೆ ಇಷ್ಟವಾಯಿತೇ, ಬರೆದು ತಿಳಿಸಿ.  ವಂದನೆಗಳೊಡನೆ,  ಅಜ್ಜಂಪುರದಲ್ಲಿ ಮುಸಲ್ಮಾನರ ವಸತಿ ಪ್ರದೇಶವು ಹಿಂದೆ ಬ್ರಾಹ್ಮಣರು ಹೆಚ್ಚಾಗಿ ಇರುತ್ತಿದ್ದ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಪ್ರಗತಿಯ ದೃಷ್ಟಿಯಿಂದ ಹೇಳುವುದಾದರೆ, ಮುಸಲ್ಮಾನರದೇ ಹೆಚ್ಚು ಎನ್ನಬಹುದು. ಇದನ್ನೇನೂ ಅಸೂಯೆಯಿಂದ ಹೇಳುತ್ತಿಲ್ಲ. ತಮ್ಮ ಶ್ರಮ ಜೀವನ ಮತ್ತು ಸರಕಾರಗಳ ಬೆಂಬಲದ ಫಲವಾಗಿ ಅವರು ಹೊಂದಿರುವ ಅಭಿವೃದ್ಧಿ ಮೆಚ್ಚತಕ್ಕುದೇ ಸರಿ. ಇದನ್ನು ನನ್ನ ಬಾಲ್ಯದಲ್ಲಿ ಎಂದರೆ, 1960ರ ದಶಕದಲ್ಲಿ ನೋಡಿದ ನೆನಪು. ಆ ದಿನಗಳಲ್ಲಿ ಅವರದು ಮಣ್ಣಿನ ಗುಡಿಸಿಲುಗಳು. ಅವುಗಳಿಗೆ ಛಾವಣಿಗೆಂದು ಆಪು ಅಥವಾ ಜೊಂಡನ್ನು ಹೊದಿಸಿರುತ್ತಿದ್ದರು. ಕೆಲವು ದಶಕಗಳು ಕಳೆದವು. ಅದೇ ಜಾಗಗಳಲ್ಲಿ ಕರಿಹೆಂಚಿನ, ಇನ್ನೂ ಸ್ವಲ್ಪ ವರ್ಷಗಳ ನಂತರ, ಮಂಗಳೂರು ಹೆಂಚಿನ ಮನೆಗಳು ಅಸ್ತಿತ್ವಕ್ಕೆ ಬಂದವು. ಈಗ…