ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

99. ಗೀತಾಮಿತ್ರ – ಸುವರ್ಣ ಸಂಭ್ರಮ

ಇಮೇಜ್
ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಗೀತಾಮಿತ್ರ ಆಧ್ಯಾತ್ಮಿಕ ಮಾಸ ಪತ್ರಿಕೆಯನ್ನು ಪ್ರಸ್ತಾಪಿಸದಿದ್ದರೆ ಅದು ಅಪೂರ್ಣವೇ ಸರಿ. 1963ರಲ್ಲಿ ಆರಂಭವಾಗಿ 2012ಕ್ಕೆ ಐವತ್ತು ವರ್ಷ ತುಂಬಿದ, ಭಗವದ್ಗೀತೆಯ ಪ್ರಸಾರಕ್ಕೆಂದೇ ಮೀಸಲಾದ ಈ ಪತ್ರಿಕೆಯ ಉಲ್ಲೇಖ 2012ರಲ್ಲೇ ಈ ಬ್ಲಾಗ್ ನಲ್ಲಿ ಪ್ರಸ್ತಾಪವಾಗಬೇಕಿತ್ತು. ಆದರೆ ಸೂಕ್ತ ಸಂವಹನದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇದಕ್ಕೆ ಪೂರಕವಾಗಿ ಈ ಬ್ಲಾಗ್ ನಲ್ಲಿ, ಈ ಪತ್ರಿಕೆಯ ಸಂಪಾದಕ ಶ್ರೀ ಸುಬ್ರಹ್ಮಣ್ಯಶೆಟ್ಟರು, ಅಜ್ಜಂಪುರದಲ್ಲಿ ಗೀತೆಯ ಮೂಲಸ್ರೋತವಾದ ಶ್ರೀ ಶಿವಾನಂದಾಶ್ರಮ, ಇನ್ನೋರ್ವ ಸಂಪಾದಕ ಶ್ರೀ ರಾಜಗೋಪಾಲ ಗುಪ್ತರು ಮುಂತಾಗಿ ಹಲವಾರು ಲೇಖನಗಳು ಪ್ರಕಟವಾಗಿರುವುದುಂಟು. ಸುವರ್ಣ ಸಂಚಿಕೆಯ ಸಂಭ್ರಮದ ವರದಿ ಆಗ ಸಾಧ್ಯವಾಗದ್ದು, ಈಗ ಇಲ್ಲಿದೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಜ್ಜಂಪುರದಲ್ಲಿ ಶ್ರೀ ಶಂಕರಾನಂದ ಸ್ವಾಮಿಗಳು ಬಂದು ನೆಲೆಸಿದಾಗ, ಶ್ರೀ ಸುಬ್ರಹ್ಮಣ್ಯ ಶೆಟ್ಟರಿಗೆ ಅವರ ಬಗ್ಗೆ ಒಂದು ವಿಶೇಷವಾದ ಆಕರ್ಷಣೆ. ಅವರ ಪ್ರವಚನಗಳಿಂದ ಪ್ರಭಾವಿತರಾಗಿ, ಇದನ್ನು ಗ್ರಂಥಸ್ಥಗೊಳಿಸಬೇಕೆಂಬ ನಿರ್ಧಾರದಿಂದ ಒಂದು ಪತ್ರಿಕೆಯನ್ನು ಆರಂಭಿಸಿದರು. ಆಗ ಮುದ್ರಣ ಸೌಲಭ್ಯವೂ ಸುಲಭವಾಗಿರಲಿಲ್ಲ. ಇಂದು ಬಹುವರ್ಣದ ಮುದ್ರಣ ತುಂಬ ಸುಲಭವಾಗಿದೆ. ಆದರೆ ಕಳೆದ ಶತಮಾನದ 60ರ ದಶಕದಲ್ಲಿ ಇದು ಸುಲಭ ಸಾಧ್ಯವಿರಲಿಲ್ಲ ಹಾಗೂ ಹೆಚ್ಚಿನ ಖರ್ಚನ್ನೂ ಒಳಗೊಂಡಿರುತ್ತಿತ್ತು. 

ಮೂರು ವರ್ಣಗಳಲ್ಲಿ ಮುದ್ರಣ ಮಾಡಬೇಕಿದ್…

98. ಮಠದ ಮನೆ

ಇಮೇಜ್
ಆತ್ಮೀಯ ಓದುಗರೇ, 
ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲ ಒಂದು ಮಾಹಿತಿ ದೊರೆಯುತ್ತಿರುತ್ತದೆ. ಅದಕ್ಕೆ ಅಲ್ಲಿನ ಗೆಳೆಯರೂ ನೆರವಾಗುತ್ತಾರೆ. ಇಲ್ಲಿನ ಮಠದ ಮನೆಗೊಂದು ಚಿಕ್ಕ ಇತಿಹಾಸವಿದೆ. ಅಲ್ಲಿಗೆ ಕರೆದೊಯ್ದು, ಮಾಹಿತಿಗಳನ್ನು ವಿವರಿಸಿದವರು ಸಮಾನ ಮನಸ್ಕ ಮಿತ್ರ ಅಪ್ಪಾಜಿ. ನಮ್ಮೂರಿಗೂ ಒಂದು ಶಾಸನವಿದೆ ಎಂದು ತಿಳಿದದ್ದೇ ಈಗ. ಅದನ್ನು ಓದಲು ಪ್ರಯತ್ನಿಸೋಣವೆಂದರೆ, ಅದರಲ್ಲಿನ ಅಕ್ಷರಗಳೆಲ್ಲ ನಷ್ಟವಾಗಿದೆ. ಗ್ರಾಮದೇವತೆ ಕಿರಾಳಮ್ಮ ದೇವಾಲಯದಲ್ಲಿರುವ ಬರಹಕ್ಕೂ ತೀರ ಹಿಂದಿನದು ಎಂದು ಹೇಳಬಹುದಾದ ಇದು ಹೊಯ್ಸಳೋತ್ತರ ಶಾಸನವಿದ್ದೀತು ಎಂದು ಭಾವಿಸಬಹುದು. 

ಶತಕವನ್ನು ಸಮೀಪಿಸುತ್ತಿರುವ ಈ ಬರಹದ ಮಾಲಿಕೆಗೆ ಇನ್ನೆರಡು ಸಂಚಿಕೆಗಳ ನಂತರ ವಿರಾಮ ಘೋಷಿಸುವ ಸಮಯ ಬಂದಿದೆಯೆಂದು ಭಾವಿಸುವೆ. ಹಾಗೆಂದು ಇದು ಸಂಪೂರ್ಣ ನಿಂತುಹೋದೀತೆಂದಲ್ಲ. ಮಾಹಿತಿಗಳು ದೊರೆತಂತೆ, ಲೇಖಕರು ಆಸಕ್ತಿ ವಹಿಸಿ ಲೇಖನಗಳನ್ನು ಕಳಿಸಿದಾಗಲೆಲ್ಲ ಪ್ರಕಟವಾದೀತು. 
ನಿಮ್ಮೆಲ್ಲರ ಸಹಕಾರಕ್ಕೆ ವಂದನೆಗಳು.
- ಶಂಕರ ಅಜ್ಜಂಪುರ
ಪೆ.23ರಂದು ಅಜ್ಜಂಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಲನ ನಡೆಯಿತು. ಈ ಸಂದರ್ಭದಲ್ಲಿ ಗೋಷ್ಠಿಯೊಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಿತ್ರ ಅಪ್ಪಾಜಿ, ಊರಿಗೆ ಹೋದಾಗಲೆಲ್ಲ ಯಾವುದಾದರೊಂದು ವಿಶೇಷದ ಬಗ್ಗೆ ನೆನಪಿಸಿ, ಆ ಸ್ಥಳಕ್ಕೆ ಕರೆದೊಯ್ದು, ಅಲ್ಲಿನ ಮಾಹಿತಿಗಳನ್ನು ನೀಡುತ್ತಾರೆ. ಈ ಬಾರಿಯೂ ಹಾಗೇ ಆಯಿತು.
ಗ್ರಾಮದೇವತೆ ಕಿರಾಳಮ್ಮನ ದೇವಾಲಯದ…

97. ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣ

ಇಮೇಜ್
ಅಜ್ಜಂಪುರದಲ್ಲಿ ಗೀತಾ ಪ್ರಸಾರಕ್ಕೆ ಕಟಿಬದ್ಧರಾಗಿ ದುಡಿದು, ಈ ದಿಸೆಯಲ್ಲಿ ಅಜ್ಜಂಪುರವನ್ನು ದೇಶಾದ್ಯಂತ ಪ್ರಸಿದ್ಧಿಪಡಿಸಿದವರು ಶ್ರೀ ಶಂಕರಾನಂದ ಸ್ವಾಮಿಗಳು. ಅವರು ಹಚ್ಚಿದ ಈ ಹಣತೆ ಇನ್ನೂ ಬೆಳಗುತ್ತಿರುವುದು, ಇಂದಿನ ತಲೆಮಾರಿಗೂ ಪ್ರೇರಕವಾಗಿರುವುದು ಅವರ ಸಂಕಲ್ಪಶಕ್ತಿಯ ದೃಢತೆಯನ್ನು ಎತ್ತಿತೋರುವಂತಿದೆ. 
ಅಜ್ಜಂಪುರದ ಶಿವಾನಂದಾಶ್ರಮವನ್ನು ಕುರಿತಂತೆ ಈ ಹಿಂದ ವಿಸ್ತೃತ, ಚಿತ್ರಸಹಿತ ಲೇಖನವನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. ಇದೀಗ ಗೀತಾ ಪ್ರಸಾರ-ಪ್ರಚಾರದ ಚಟುವಟಿಕೆಯ ಇನ್ನೊಂದು ರೂಪವಾಗಿ, ವ್ಯವಸ್ಥಿತ ಕಾರ್ಯಕ್ರಮದೊಡನೆ ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣವು ಅಜ್ಜಂಪುರದ ಆಧ್ಯಾತ್ಮಿಕ ಮಾಸಪತ್ರಿಕೆ "ಗೀತಾಮಿತ್ರ"ದ ಆಯೋಜಕತ್ವದಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹ. 
ಫೇಸ್ ಬುಕ್ ನಲ್ಲಿ ನೋಡುತ್ತಿರುವಾಗ ಅಜ್ಜಂಪುರದಲ್ಲಿ ನಡೆಯುತ್ತಿರುವ ಗೀತಾ  ನಿತ್ಯ ಪಾರಾಯಣವನ್ನು ಕುರಿತಂತೆ ಇದ್ದ ಚಿಕ್ಕದೊಂದು ಟಿಪ್ಪಣಿ ಮನಸೆಳೆಯಿತು. ಅದರ ವಿವರಗಳನ್ನು ಅಪೇಕ್ಷಿಸಿ, ಅಜ್ಜಂಪುರದ ಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ  ಸಂಚಾಲಕಿ ಶ್ರೀಮತಿ ವೀಣಾ ನಟರಾಜ್ ಇವರನ್ನು ಸಂಪರ್ಕಿಸಿದೆ. ಒಂದೇ ದಿನದಲ್ಲಿ ಈ ಕಾರ್ಯಕ್ರಮದ ಸವಿವರ ಮಾಹಿತಿ ಹಾಗೂ ಚಿತ್ರಗಳು ದೊರಕಿದವು. 
ಅಜ್ಜಂಪುರಕ್ಕೆ ವಿಶಿಷ್ಟವಾದ ಈ ಗೀತಾ ಪಾರಾಯಣದ  ಆಯೋಜನೆ, ಅದರ ಅಚ್ಚುಕಟ್ಟುತನ ಹಾಗೂ ಪಾರಂಪರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸುತ್ತಿರುವ…

96. ಅಜ್ಜಂಪುರದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಇಮೇಜ್
ದಿನಾಂಕ 23 ಫೆಬ್ರವರಿ 2019ರಂದು ಅಜ್ಜಂಪುರದಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಅಜ್ಜಂಪುರವು ಇತ್ತೀಚೆಗೆ ತಾಲೂಕು ಆಗಿ ಪರಿವರ್ತನೆಯಾದ ಸಂದರ್ಭದಲ್ಲಿ, ಸಾಹಿತ್ಯ ಸಮ್ಮೇಳನ ನಡೆಸುವುದರ ಮೂಲಕ, ತಾಲೂಕಿನ ಅಸ್ತಿತ್ವವನ್ನು ಜಾಹೀರುಪಡಿಸಲು ಈ ಉತ್ಸವದ ಆಯೋಜನೆ ಸಹಕಾರಿಯಾಯಿತು. 

ಮೊದಲ ಸಮ್ಮೇಳನವಾದ್ದರಿಂದ ಏರ್ಪಾಡಿನ ವ್ಯವಸ್ಥೆಗಳಲ್ಲಿ ಕೊಂಚ ಏರುಪೇರಾದುದು ಸ್ವಾಭಾವಿಕ. ಆದರೆ ಸಾಹಿತ್ಯ ಸಮ್ಮೇಳನವೆನ್ನುವುದು ನೆಪಮಾತ್ರದಂತೆ ಆಯಿತೆನ್ನಲು ಇಂದು ಸಾಹಿತ್ಯಕ್ಕಿಂತಲೂ, ಸಾಹಿತಿಗಳ ಕುರಿತಾದ ಮನೋಭಾವ ಬದಲಾಗಿರುವುದು ಕಾರಣ ಎನ್ನುವುದು ಎದ್ದು ಕಾಣುವಂತಿತ್ತು. ಸಾಹಿತಿಗಳನ್ನು ಗೌರವದಿಂದ, ಆರಾಧನಾ ಭಾವದಿಂದ ನೋಡುವ ದಿನಗಳಿದ್ದವು. ಬರೆಯುವುದು, ಬದುಕುವುದು ಪ್ರತ್ಯೇಕ ಎನ್ನುವಂತಿರದ ಆ ದಿನಗಳಲ್ಲಿ, ಅಂಥ ಗೌರವ ಸಹಜವಾಗಿತ್ತು.
ಆದರೆ ಸಾಹಿತಿಗಳಷ್ಟೇ ಅಲ್ಲದೆ, ಸಾಹಿತ್ಯ ಕೃತಿಗಳ ಮೌಲ್ಯಗಳು ಅಧೋಗತಿಗೆ ಇಳಿದುದರ  ಪರಿಣಾಮಗಳು, ಸಾಹಿತ್ಯವಷ್ಟೇ ಅಲ್ಲದೆ,  ಜೀವನಕ್ಕೆ ಸಂಬಂಧಿಸಿದ  ಇತರ ಅಂಶಗಳೂ ಈ ವೇದಿಕೆಯಲ್ಲಿ ಮೆರೆಯಬೇಕೆಂಬುದು ಸಹಜ ನಿಲುವಾಗಿ ಪರಿಣಮಿಸಿತು. ಈ ಅಂಶಗಳನ್ನೇ ಸಮ್ಮೇಳನಕ್ಕೆ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗೊ.ರು. ಚನ್ನಬಸಪ್ಪನವರು ಹಾಗೂ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಶ್ರೀ ಎ.ಎಸ್.ಕೃಷ್ಣಮೂರ್ತಿ ಮಾತನ…

02. ಇದ್ದದ್ದು-ಇಲ್ಲದ್ದು

ಇಮೇಜ್
ಶೀರ್ಷಿಕೆ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯ ಉಪಯೋಗದಲ್ಲಿರುವ ಪದವನ್ನು ನಾನು ಬಳಸಿದ್ದೆ. ಆದರೆ ಅದು ಹಾಗಲ್ಲ, ಶೀರ್ಷಿಕೆ ಸರಿಯಾದ ರೂಪ ಹೀಗಿರಬೇಕು ಎಂದು ಆಧಾರ ಸಹಿತವಾಗಿ ಮಿತ್ರ ಮಂಜುನಾಥ ಅಜ್ಜಂಪುರ  ತಿಳಿಸಿದ್ದಾರೆ. ಕಮೆಂಟ್ ನಲ್ಲಿ ಅವರ ಪ್ರತಿಕ್ರಿಯೆಯನ್ನು ಗಮನಿಸಿ. ಇಂಥ ಸಕ್ರಿಯ ಭಾಗವಹಿಸುವಿಕೆಯೇ ಬ್ಲಾಗ್‌ನ ಗುಣಮಟ್ಟ ಹೆಚ್ಚಿಸಬಲ್ಲದು.

ಅಜ್ಜಂಪುರದ ಬಿ.ಆರ್. ಮಮತಾ ಫೇಸ್ ಬುಕ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಬರೆಯುವಾಗ ಹೀಗೆ ಹೇಳಿದ್ದಾರೆ :

"very nice blog uncle, ಖುಷಿ ಆಗುತ್ತೆ, ನಮ್ಮ ಊರಿನ ಬಗ್ಗೆ ನನ್ನ ಫ್ರೆಂಡ್ಸ್ ಎಲ್ಲರಿಗೂ ವಿವರಿಸಲು ಈ ಬ್ಲಾಗ್ ತುಂಬಾ ಚೆನ್ನಾಗಿದೆ".  ಹಲವರಿಗೆ ವಿದ್ಯಾಭ್ಯಾಸ, ಉದ್ಯೋಗ ಮುಂತಾದ ಕಾರಣಗಳಿಂದಾಗಿ ಈಗ ಊರಿನಲ್ಲಿ ಇರಲಾಗದಿದ್ದರೂ, ಅದರ ಬಗ್ಗೆ ಅಭಿಮಾನವೇನೂ  ಕುಂದುವುದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ. ಹುಟ್ಟಿದೂರಿನ ಸೆಳೆತವೇ ಅಂಥದು. ಆಕೆ ಹೇಳಿರುವಂತೆ ಊರಿನ ಬಗ್ಗೆ ವಿವರಿಸಲು, ತಿಳಿಯಲು ನನ್ನ ನೆನಪಿನಲ್ಲಿರುವ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವೆ. ಇಲ್ಲದ್ದನ್ನು ಇದ್ದಂತೆ ಚಿತ್ರಿಸುವಂತಾಗುವುದೇ ಇಂಥ ಬರವಣಿಗೆಗಳಲ್ಲಿ ಇರುವ ಅಪಾಯ. ಹಾಗಾಗದಂತೆ ನಾನು ಗಮನಿಸಿದ್ದಷ್ಟನ್ನು ಮಾತ್ರವೇ ಇಲ್ಲಿ ದಾಖಲಿಸಿರುವೆ. ಈ ಮಾಹಿತಿಗಳಿಗೆ ಪೂರಕವಾಗಿ ನಿಮ್ಮಿಂದ ಇನ್ನಷ್ಟು ವಿವರಗಳು ಹರಿದುಬರುವಂತಾದರೆ ಸಂತೋಷ. ಈ ಬಗ್ಗೆ ಇನ್ನೂ ಗಾಢವಾದ ನೆನ…

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

ಇಮೇಜ್
ನಾನು ಅಂತರಜಾಲದಲ್ಲಿ ಅಜ್ಜಂಪುರ ಎಂಬ ಈ ಬ್ಲಾಗನ್ನು ಆರಂಭಿಸಿ ಎಂಟು ವರ್ಷಗಳೇ ಸಂದಿವೆ. ಪ್ರತಿ ತಿಂಗಳಿಗೆ ಒಂದು ಲೇಖನದಂತೆ, ನಾನೂ ಬರೆಯುತ್ತ, ಅಜ್ಜಂಪುರದ ಬಂಧು-ಮಿತ್ರರನ್ನು  ಕಾಡಿ ಬೇಡಿ ಅವರಿಂದಲೂ ಲೇಖನಗಳನ್ನು ಬರೆಸುತ್ತ, ಇದೀಗ ನೂರನೆಯ ಲೇಖನದತ್ತ ಬಂದಿದ್ದಾಯಿತು. 
ಆರಂಭದಲ್ಲಿ ಕೇವಲ ಅಜ್ಜಂಪುರದ ವ್ಯಕ್ತಿಗಳು, ವಿಶೇಷಗಳಿಗೆ ಮಾತ್ರ  ಸಂಬಂಧಿಸಿದ ಲೇಖನಗಳನ್ನು ಬರೆಯುತ್ತೇನೆಂದು ಭಾವಿಸಿದ್ದರೂ ಅದು ಹಾಗಾಗಲು ಬಿಡಲಿಲ್ಲ. ಅಜ್ಜಂಪುರದ ಸುತ್ತಮುತ್ತಣ ವ್ಯಕ್ತಿಗಳು, ಸ್ಥಳಗಳು ಅಜ್ಜಂಪುರವನ್ನು ಪ್ರಭಾವಿಸಿದ್ದು ಇದೆಯಾಗಿ, ಅವುಗಳನ್ನು ಸ್ಮರಿಸದೇ ಹೋದರೆ, ಅದು ಅಪೂರ್ಣ ಕಾರ್ಯವಾದೀತೆಂಬ ತಿಳುವಳಿಕೆ ನಂತರ ಮೂಡಿತು. ಹೀಗಾಗಿಯೇ ಈ ಸಂಕಲನದಲ್ಲಿ ಅಜ್ಜಂಪುರದ ಸಮೀಪದ ಗಡಿಹಳ್ಳಿ, ಹಣ್ಣೆ, ಬಗ್ಗವಳ್ಳಿ ಮುಂತಾದ ಗ್ರಾಮಗಳ ಪ್ರಸ್ತಾಪ ಬಂದಿದೆ. ಇದು ಅಜ್ಜಂಪುರದ ವಿಷಯ ವ್ಯಾಪ್ತಿಗೆ ಪೂರಕವಾಗಿರುವುದರಿಂದ ಹೆಚ್ಚಿನ ಮಾಹಿತಿಗಳನ್ನು ಅರಿಯಲು ಸಹಾಯಕವಾಯಿತು. ಅದಂತಿರಲಿ. ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಶ್ರೀ ಹಣ್ಣೆ ಸಂಜೀವಯ್ಯನವರು ಅಜ್ಜಂಪುರದೊಡನೆ ತುಂಬ ಒಡನಾಟ ಹೊಂದಿದ್ದವರು. ಅವರ ಬಂಧು-ಬಳಗದಲ್ಲಿ ಅಜ್ಜಂಪುರದವರು ತುಂಬ ಇದ್ದು, ಅವರ ಸಾಹಿತ್ಯದಿಂದ ಪ್ರಭಾವಿತರಾಗಿರುವುದರಿಂದ ಸಂಜೀವಯ್ಯನವರು ಅಜ್ಜಂಪುರದವರೇ ಆಗಿದ್ದಾರೆ. ನಾನು ಹಣ್ಣೆ ಸಂಜೀವಯ್ಯನವರ ಹೆಸರನ್ನು ಐವತ್ತು ವರುಷಗಳ ಹಿಂದೆ ಕೇಳಿದ್ದುಂಟು. ಅವರೊಬ್ಬ ಆಶುಕವಿ, ಪ್ರಾಪಂಚಿಕ ವಿಷಯಗಳಲ್ಲ…