ಪೋಸ್ಟ್‌ಗಳು

June, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಇಮೇಜ್
ಇದ್ದದ್ದು - ಇಲ್ಲದ್ದು

ಶೀರ್ಷಿಕೆ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯ ಉಪಯೋಗದಲ್ಲಿರುವ ಪದವನ್ನು ನಾನು ಬಳಸಿದ್ದೆ. ಆದರೆ ಅದು ಹಾಗಲ್ಲ, ಶೀರ್ಷಿಕೆ ಸರಿಯಾದ ರೂಪ ಹೀಗಿರಬೇಕು ಎಂದು ಆಧಾರ ಸಹಿತವಾಗಿ ಮಿತ್ರ ಮಂಜುನಾಥ ಅಜ್ಜಂಪುರ  ತಿಳಿಸಿದ್ದಾರೆ. ಕಮೆಂಟ್ ನಲ್ಲಿ ಅವರ ಪ್ರತಿಕ್ರಿಯೆಯನ್ನು ಗಮನಿಸಿ. ಇಂಥ ಸಕ್ರಿಯ ಭಾಗವಹಿಸುವಿಕೆಯೇ ಬ್ಲಾಗ್‌ನ ಗುಣಮಟ್ಟ ಹೆಚ್ಚಿಸಬಲ್ಲದು.

ಅಜ್ಜಂಪುರದ ಬಿ.ಆರ್. ಮಮತಾ ಫೇಸ್ ಬುಕ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಬರೆಯುವಾಗ ಹೀಗೆ ಹೇಳಿದ್ದಾರೆ :

"very nice blog uncle, ಖುಷಿ ಆಗುತ್ತೆ, ನಮ್ಮ ಊರಿನ ಬಗ್ಗೆ ನನ್ನ ಫ್ರೆಂಡ್ಸ್ ಎಲ್ಲರಿಗೂ ವಿವರಿಸಲು ಈ ಬ್ಲಾಗ್ ತುಂಬಾ ಚೆನ್ನಾಗಿದೆ".  ಹಲವರಿಗೆ ವಿದ್ಯಾಭ್ಯಾಸ, ಉದ್ಯೋಗ ಮುಂತಾದ ಕಾರಣಗಳಿಂದಾಗಿ ಈಗ ಊರಿನಲ್ಲಿ ಇರಲಾಗದಿದ್ದರೂ, ಅದರ ಬಗ್ಗೆ ಅಭಿಮಾನವೇನೂ  ಕುಂದುವುದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ. ಹುಟ್ಟಿದೂರಿನ ಸೆಳೆತವೇ ಅಂಥದು. ಆಕೆ ಹೇಳಿರುವಂತೆ ಊರಿನ ಬಗ್ಗೆ ವಿವರಿಸಲು, ತಿಳಿಯಲು ನನ್ನ ನೆನಪಿನಲ್ಲಿರುವ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವೆ. ಇಲ್ಲದ್ದನ್ನು ಇದ್ದಂತೆ ಚಿತ್ರಿಸುವಂತಾಗುವುದೇ ಇಂಥ ಬರವಣಿಗೆಗಳಲ್ಲಿ ಇರುವ ಅಪಾಯ. ಹಾಗಾಗದಂತೆ ನಾನು ಗಮನಿಸಿದ್ದಷ್ಟನ್ನು ಮಾತ್ರವೇ ಇಲ್ಲಿ ದಾಖಲಿಸಿರುವೆ. ಈ ಮಾಹಿತಿಗಳಿಗೆ ಪೂರಕವಾಗಿ ನಿಮ್ಮಿಂದ ಇನ್ನಷ್ಟು ವಿವರಗಳು ಹರಿದುಬರುವಂತಾದರೆ ಸಂತೋಷ. ಈ ಬಗ್ಗ…

ಅಂತರಜಾಲದಲ್ಲಿ ಅಜ್ಜಂಪುರ

ಅಜ್ಜಂಪುರದ ಆತ್ಮೀಯ ಬಂಧುಗಳೇ


ಇದು ನನ್ನ ಹೊಸ ಬ್ಲಾಗ್.

ದಶಕಗಳ ಹಿಂದೆ ತರೀಕೆರೆ ಅಂಚೆವಾರ್ತೆಯ ಸಂಪಾದಕ ಶ್ರೀ ಅಂಚೆ ನಾಗಭೂಷಣರನ್ನು ಭೇಟಿಮಾಡಿದ್ದಾಗ ಅವರೊಂದು ವಿಷಯ ಪ್ರಸ್ತಾಪಿಸಿದ್ದರು. ಅದು ನಾನು ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಸಂದರ್ಭ. ಆಗ ನಾನು ಈ ದೇವಾಲಯ ಬೆಳೆದು ಬಂದ ಹಾದಿಯನ್ನು ಚಿತ್ರ ಮತ್ತು ಮಾಹಿತಿಗಳ ಸಹಿತವಾದ ಒಂದು ಗಣಕ ಪ್ರಾತ್ಯಕ್ಷಿಕೆಯನ್ನು ನೀಡಿದ್ದೆ. ಆ ಯತ್ನವನ್ನು ಗುರುತಿಸಿ, ಬೆಂಬಲಿಸಿ ಅಂಚೆ ನಾಗಭೂಷಣರು ಹೀಗೆ ಹೇಳಿದ್ದರು: "ಒಂದು ಊರಿನ ಇತಿಹಾಸವನ್ನು ದಾಖಲಿಸುವಲ್ಲಿ ಇಂತಹ ಪ್ರಯತ್ನಗಳು ಸ್ವಾಗತಾರ್ಹ. ಇದೇ ರೀತಿ ನೀವು ಅಜ್ಜಂಪುರದಲ್ಲಿ ಬಾಳಿ ಬದುಕಿದ ಹಿರಿಯರ ಚಿತ್ರ-ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವಂತಾದರೆ ಅದಕ್ಕೆ ಮಹತ್ವ ಬರುತ್ತದೆ. ಈ ಕೆಲಸವನ್ನು ಸ್ಥಳೀಕರು ಮಾಡಿದಲ್ಲಿ ಅದಕ್ಕೆ ಹೆಚ್ಚಿನ ವಜನು ಬರುತ್ತದೆ". ಇದಲ್ಲದೆ ನಾನು ಸಂಪಾದಿಸುತ್ತಿರುವ ನಮ್ಮ ಕುಲದೇವತೆ ಶ್ರೀ ಕಾಲಭೈರವನ ಬ್ಲಾಗ್ (Link : kalabhiaravablogspot.com) ನಲ್ಲಿ ಅಜ್ಜಂಪುರದ ಹಿರಿಯರಾದ ಶ್ರೀ ಭೈರಾಭಟ್ಟರ ಭಾವಚಿತ್ರ ಸಹಿತ ಒಂದು ಲೇಖನವನ್ನು ಪ್ರಕಟಿಸಿದ್ದೆ. ಅದನ್ನು ನೋಡಿದ ನನ್ನ ಮಿತ್ರ ಅಜ್ಜಂಪುರ ಮಂಜುನಾಥ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅಜ್ಜಂಪುರದ ನೆನಪಿನ ಮೆರವಣಿಗೆಯಿದು ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಇದು ಕೂಡ ಅಜ್ಜಂಪುರವನ್ನು ಅಂತರಜಾಲದಲ್ಲಿ ವಿನಿಮ…