ಪೋಸ್ಟ್‌ಗಳು

June, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರತಿಷ್ಠೆಯ ಪ್ರಶ್ನೆಯಾದ ಪ್ರತಿಷ್ಠಾಪನಾ ಪ್ರಸಂಗ !

ಇಮೇಜ್
ಈ ಹಿಂದೆ ಅಜ್ಜಂಪುರದ ಬಸವೇಶ್ವರ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಅದರಲ್ಲಿ ನಮೂದಿಸಿರುವಂತೆ ದೇವಾಲಯದ ಪ್ರತಿಷ್ಠಾಪನೆಯ ಕಾರ್ಯ ೧೯೩೨ರಲ್ಲಿ ನಡೆಯಿತು. ಈ ಕಾರ್ಯವು ನಡೆಯಬೇಕಾದ ಸಂದರ್ಭದಲ್ಲಿ ಉಂಟಾದ ಚಿಕ್ಕ ಗೊಂದಲದ ಮಾಹಿತಿ ಇತ್ತೀಚೆಗೆ ದೊರೆಯಿತು. ಎಲ್ಲೆಡೆಯೂ ಇದೆಲ್ಲ ಸಾಮಾನ್ಯವೇ ಸರಿ. ಅಜ್ಜಂಪುರದ ಬೆಳವಣಿಗೆಗೆ ಕಾರಣರಾದ ಹಿರಿಯರು ಶ್ರೀ ಶೆಟ್ಟರ ಶಿದ್ದಪ್ಪನವರು.  ಅವರ ಬರವಣಿಗೆಯ ಶೈಲಿಯನ್ನು ಆನಂದಿಸುವ ಜತೆಗೆ, ವಿಷಯ ಪ್ರತಿಪಾದನೆಯಲ್ಲಿ ಖಾಚಿತ್ಯದ ದೃಷ್ಟಿಯಿಂದ ೧೯೩೨ ಅವರ ಪತ್ರ ಮಹತ್ವದ್ದೆನ್ನಿಸಿ, ಅದನ್ನಿಲ್ಲಿ ನೀಡಲಾಗಿದೆ. ಗೆಳೆಯ, ಲೇಖಕ ಮಿತ್ರ ಅಪೂರ್ವ ಇವರ ಸಂಗ್ರಹದಲ್ಲಿ ದೊರೆತ ಶ್ರೀ ಶೆಟ್ಟರ ಶಿದ್ದಪ್ಪನವರ ಪತ್ರದ ಯಥಾ ನಕಲನ್ನು ಹಾಗೆಯೇ ಪ್ರಸ್ತುತಪಡಿಸಲಾಗಿದೆ. ಧರ್ಮಸಂಮಂಧಿ ಶ್ರೀ ಬಸವೇಶ್ವರ ವೀರಭದ್ರ ಸ್ವಾಮಿಯವರ ಪ್ರತಿಷ್ಠಾಪನ ಆಮಂತ್ರಣ ಪತ್ರಿಕಾ ಪ್ರಿಂಟು ಮಾಡಿ ಹಂಚಿರುವ ವ್ಯವಸ್ಥಾಪಕರು ಕಾರ್ಯದರ್ಶಿಗಳು ಇವರಿಗೆ – ಈ ಕೆಳಗೆ ಸಹಿ ಮಾಡಿರುವವರು ಸೂಚಿಸುವುದೇನೆಂದರೆ – ತಾ ೮-೧೧-೩೨ರಿಂದ ತಾ. ೧೧-೧೧-೩೨ರವರೆಗೆ ಶ್ರೀಮನ್ ಮಹಾರಾಜ ನಿರಂಜನ  ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಆಗಮನ ಮಹೋತ್ಸವದ ಅಧ್ಯಕ್ಷತೆಯಲ್ಲಿ ನೆರವೇರಿಸುವ ಕಾರ್ಯಕ್ರಮದ ಸದರಿ ಆಹವಾನಪತ್ರಿಕೆಯು ಶ್ರೀ ಕಂನ್ಯಕಾಪರಮೇಶ್ವರಿ ಪ್ರಿಂಟಿಸುವವರ ಚಿತ್ರದುರ್ಗದಲ್ಲಿ ಪ್ರೆಸ್ಸಿನಲ್ಲಿ ಪ್ರಿಂಟಾಗಿ ಹೊರಟಿರುವ ಪತ್ರಿಕೆ ಪರಸ್ಪರ ಹ…