ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಪರಿಮಳಕ್ಕೆ ಮರುಳಾಗದವರುಂಟೇ ? !

ಇಮೇಜ್
ನನಗೆ ಚೆನ್ನಾಗಿ ನೆನಪಿದೆ. ಅಜ್ಜಂಪುರದ ರೇಲ್ವೇ ಸ್ಟೇಷನ್ ನ ಎದುರಿಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಮನೆಯ ಎದುರು ಬಂಗಾರ ಬಣ್ಣದ ಕೊತ್ತಂಬರಿಯ ರಾಶಿ ಬಿದ್ದಿರುತ್ತಿತ್ತು. ಅಲ್ಲಿ ಹಾದುಹೋಗುವಾಗ ಅದರ ಪರಿಮಳ ಹರಡಿರುತ್ತಿತ್ತು. ಸಮೃದ್ಧಿಯೆಂಬುದು ಮೈವೆತ್ತಿದ್ದಂಥ ದಿನಗಳವು. ಅಜ್ಜಂಪುರದ ಕೃಷಿ ಪದ್ಧತಿಯು ಕಾಲದಿಂದ ಕಾಲಕ್ಕೆ ಬದಲಾದ ಪರಿಯನ್ನು, ಅದರೊಂದಿಗೆ ತನ್ನ ಸ್ವಂತಿಕೆಯನ್ನು ಕಾಯ್ದಿಟ್ಟುಕೊಂಡಿರುವ ಸಂಗತಿಯನ್ನು ಅಪ್ಪಾಜಿ (ಅಪೂರ್ವ) ಇಲ್ಲಿ ದಾಖಲಿಸಿದ್ದಾರೆ. ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಬ್ಲಾಗ್ ಗೆ ಅಪಾರ ಬೆಂಬಲ ದೊರಕಿದೆ. ಇದು ಹೀಗೇ ಮುಂದುವರೆಯಲೆಂದು ಆಶಿಸುತ್ತೇನೆ. ಇಲ್ಲಿಯೇ ಇನ್ನೊಂದು ಮಾತು. ನಾನು ಪ್ರಕಟಪಡಿಸಿರುವ ನನ್ನ ಶಾಲೆಯ ಕುರಿತಾದ ಜಾಲಪುಟ ಎಸ್.ಎಸ್.ಟಿ.ಬಿ. ಹೈಸ್ಕೂಲ್ ವಾರದಿಂದ ವಾರಕ್ಕೆ ಮೆಚ್ಚುಗೆ ಗಳಿಸುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ, ಈ ಶಾಲೆಗೆ ಸೇರಿದ ಹಲವು ವಿದ್ಯಾರ್ಥಿಗಳು ರಾಜ್ಯ, ದೇಶ, ಅಂತರರಾಷ್ಟ್ರೀಯ ಸ್ಥಳಗಳನ್ನು ತಲುಪಿದ್ದಾರೆ. ಅವರಿಂದ ಪ್ರತಿವಾರ ಮೆಚ್ಚುಗೆಯ ಪ್ರತಿಕ್ರಿಯೆಗಳು ಬರುತ್ತಿವೆ. ಅವರೆಲ್ಲರಿಗೆ ನನ್ನ ಮನವಿಯೆಂದರೆ, ಈ ಬ್ಲಾಗ್ ಕೂಡ ಅಜ್ಜಂಪುರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ನಿಮ್ಮ ನೆನಪುಗಳನ್ನು ಇಲ್ಲಿ ಚಿತ್ರಸಹಿತ ದಾಖಲಿಸಲು ಕೋರುತ್ತೇನೆ. - ಶಂಕರ ಅಜ್ಜಂಪುರ ಹಿಂಗಾರು ಕಡಲೆ ಬೆಳೆ ರಾತ್ರಿ 7-8ರ ಸಮಯ. ಮಾಗಿಯ ಕಾಲ. ನಮ್ಮೂರಿನ ಚೌ

ಅಜ್ಜಂಪುರ ಸೀತಾರಾಂ

ಇಮೇಜ್
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು  ! ಪತ್ರಿಕೆಗಳು ರಾಜ್ಯೋತ್ಸವಕ್ಕೆಂದು ವಿಶೇಷ ಸಂಚಿಕೆಗಳನ್ನು ಹೊರತರುತ್ತವೆ. ನಾನು ನನ್ನ ಬ್ಲಾಗ್ ನ ಸಲುವಾಗಿ ಈ ಬಾರಿ ಅಜ್ಜಂಪುರ ಆನಂದರನ್ನು ಕುರಿತಾಗಿನ ವಿಶೇಷ ಲೇಖನ ಪ್ರಕಟಿಸಬೇಕೆಂದುಕೊಂಡಿದ್ದೆ. ಇದಕ್ಕೆಂದು ಸಂಗ್ರಹಿಸಿದ್ದ ಮಾಹಿತಿಗಳು ನಾನು ಅಮೆರಿಕದ ಪ್ರವಾಸದ ಇರುವ ಈ ಹೊತ್ತಿನಲ್ಲಿ ದೊರಕುವಂತಿರಲಿಲ್ಲವೆಂಬ ಯೋಚನೆಯಿತ್ತು. ಆದರೆ ಹೊಯ್ಸಳ ಕರ್ನಾಟಕ ಬಳಗದ ಗೆಳೆಯ ಸುನೀಲ್ ರನ್ನು ಸಂಪರ್ಕಿಸಿದಾಗ ತಮ್ಮ ಮಾಹಿತಿ ಸಂಗ್ರಹದಿಂದ ಕಳಿಸಿಕೊಟ್ಟರು.  ಅವರಿಗೆ ಧನ್ಯವಾದಗಳು. ಅವರನ್ನು ಕುರಿತಾದ  ಸುನೀಲ್ ಹಳೆಯೂರು ಸಂಗ್ರಹಿಸಿ ರು ವ  ವಿಸ್ತೃತ  ಲೇಖನ  ಇಲ್ಲಿದೆ. ಅಂತೆಯೇ ಹೊಯ್ಸಳ ಕರ್ನಾಟಕ ಸಾಧಕರು ಮಾಲೆಯಲ್ಲಿ ಒಂದು ಕಿರುಪುಸ್ತಕವೂ ಪ್ರಕಟವಾಗಿದೆ. ಆನಂದ ರ    ನಿಜವಾದ ಹೆಸರು ಅಜ್ಜಂಪುರ ಸೀತಾರಾಂ. ಇವರ ಸಂಬಂಧಿಗಳೇ ಆದ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಬಗ್ಗೆ ಒಂದು ಲೇಖನ ಬ್ಲಾಗ್ ನಲ್ಲಿ ಪ್ರಕಟವಾಗಿದೆ. ಕೊನೆ ಸಿಡಿ :  ಅಜ್ಜಂಪುರದಲ್ಲಿ ಸೀತಾರಾಂ ಇವರ ಹೆಸರನ್ನು ಒಂದು ರಸ್ತೆಗೆ ಇಡಲಾಗಿದೆಯೆಂದು ತಿಳಿದು ಸಂತೋಷವಾಯಿತು. ಇದಕ್ಕೆಂದು ಅಜ್ಜಂಪುರದಲ್ಲಿರುವ ನನ್ನ ಗೆಳೆಯನಿಗೆ ಈ ಚಿತ್ರವನ್ನು ಕಳಿಸಿಕೊಡಬೇಕೆಂದು ಕೋರಿದೆ. ಈ ಲೇಖನದೊಡನೆ ಚಿತ್ರವನ್ನು ಪ್ರಕಟಿಸಬೇಕೆಂದು ಆಶಿಸಿದೆ. ಅವರು ಅದರಂತೆ ಕಳಿಸಿದರು ಕೂಡ.  ಅವರ ಹೆಸರನ್ನು "ಅಜ್ಜಂ

ಅಜ್ಜಂಪುರ ದೇವರಪ್ಪ ಸೂರ್ಯನಾರಾಯಣ ರಾವ್

ಇಮೇಜ್
ಸಾಹಿತ್ಯ, ಸಂಗೀತಗಳ ಕ್ಷೇತ್ರದಲ್ಲಿ ಅಜ್ಜಂಪುರದ ಜನತೆಗೆ ಎಂದಿನಿಂದಲೂ ಹೆಚ್ಚು ಒಲವು. ಅಂಥ ಪ್ರೀತಿಯನ್ನು ಬೆಳೆಸಿಕೊಂಡು "ಬೆಟ್ಟ ಭೈರವ ದಾಸ" ಮತ್ತು "ಸೂರಣ್ಣ" ನೆಂಬ ಕಾವ್ಯನಾಮಗಳಿಂದ ಕವಿತೆಗಳು ಮತ್ತು ಭಕ್ತಿಗೀತೆಗಳನ್ನು ರಚಿಸುವ ಸೂರ್ಯನಾರಾಯಣ ರಾಯರು ಅಜ್ಜಂಪುರದವರು. ಅವರ ತಂದೆ ದೇವರಪ್ಪನವರೂ ಉಪಾಧ್ಯಾಯರಾಗಿದ್ದವರೇ. ಅವರು ತಮ್ಮ ವಿವಾಹದ ನಂತರ ಆಗಿನ ಕಡೂರು ತಾಲೂಕಿನ ಮಲದೇವಿಹಳ್ಳಿಯಲ್ಲಿ ನೆಲಸಿದ್ದರಿಂದ ಅಜ್ಜಂಪುರದ ಸಂಪರ್ಕ ಕಡಿಮೆಯಾಗಿತ್ತು. ಆದರೂ ಅಜ್ಜಂಪುರದೊಡನೆ ಸೂರ್ಯನಾರಾಯಣ ರಾಯರ ಸಂಪರ್ಕ ಮುಂದುವರೆದಿತ್ತು.  ನಿವೃತ್ತ ಉಪಾಧ್ಯಾಯರಾದ ಅವರು ಇದೀಗ ಬೆಂಗಳೂರಿನಲ್ಲಿ ತಮ್ಮ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ರಾಯರು ತಮ್ಮ ನಿವೃತ್ತಿಯಾದ ನಂತರ ಕೆಲಕಾಲ ಬೆಂಗಳೂರು ಸಮೀಪದ ಕನಕಪುರದಲ್ಲಿ ವಾಸಿಸುತ್ತಿದ್ದರು. ಆ ದಿನಗಳಲ್ಲಿ ಅಲ್ಲಿನ ಸಾಹಿತ್ಯಕ ವಲಯದಲ್ಲಿ ತಮ್ಮ ಛಾಪನ್ನು ಮೂಡಿಸಿ, ಅಜ್ಜಂಪುರದ ಪ್ರಸಿದ್ಧಿಗೆ ಕಾರಣರಾದರು. ಸ್ಥಳೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದರು.  ಅವರಿಗೆ ಶಾಸ್ತ್ರೀಯ ಸಂಗೀತದ ಪ್ರವೇಶವಿದೆ. ಹೀಗಾಗಿ ತಾವು ರಚಿಸಿದ ಭಕ್ತಿಗೀತೆಗಳಿಗೆ ಸೂಕ್ತ ರಾಗ ಸಂಯೋಜನೆ ಮಾಡಿ ಹಾಡುತ್ತಾರೆ. ತಾವು ಭೇಟಿ ನೀಡುವ ಎಡೆಗಳಿಗೆ ತಾವು ಬರೆದಿರುವ ಕೃತಿಗಳನ್ನು ಒಯ್ದು ಆಸಕ್ತರ ಎದುರು ವಾಚಿಸಿ ಸಂತೋಷಪಡುತ್ತಾರೆ. ಕುಮಾರವ್ಯಾಸ ಭಾರತದ ಅಧ್ಯಯನದಲ್ಲಿ ತುಂಬ ಒಲವ

ಅಪರೂಪದ ಸಾಧನೆಯ ಹೆಚ್.ಆರ್.ಇಂದಿರಾ

ಇಮೇಜ್
ಅಜ್ಜಂಪುರದ ಹಿರೇನಲ್ಲೂರು ರಾಮಸ್ವಾಮಿಯವರ ಪುತ್ರಿ  ಇಂದಿರಾ,   1960ರ ದಶಕದಲ್ಲಿ ಬೆಂಗಳೂರಿನ ಕಾಫೀ ಬೋರ್ಡ್ ನಲ್ಲಿ ಉದ್ಯೋಗಿಯಾಗಿದ್ದರು.  ಅವರಿಗೆ ಆಕಾಶವಾಣಿಯ ಸಂಪರ್ಕ ಚೆನ್ನಾಗಿತ್ತು. ಅವರಲ್ಲಿದ್ದ ಸಾಹಿತ್ಯ, ಸಂಗೀತಗಳ ಸದಭಿರುಚಿಯ ಪರಿಣಾಮವಾಗಿ, ಎಚ್. ವಿ. ನಾರಾಯಣ್ ಅವರ ಸಲಹೆ-ಸಹಕಾರಗಳೊಂದಿಗೆ ಕನ್ನಡ ಲೇಖಕಿಯರ ಸಂಘವನ್ನು ಸ್ಥಾಪಿಸಿದರು. ಅದುವರೆಗೂ ಲೇಖಕಿಯಾಗಿ ಪರಿಚಿತರಿದ್ದ ಎಚ್. ಎಸ್. ಪಾರ್ವತಿಯವರನ್ನು ಹುರಿದುಂಬಿಸಿ ಭಾಷಣಕಾರ್ತಿಯನ್ನಾಗಿ ರೂಪಿಸಿದರು.  ಅಜ್ಜಂಪುರದಂಥ ಸಣ್ಣ ಊರಿನಿಂದ ಬೆಂಗಳೂರು ತಲುಪಿ, ಅಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದು ಅವರ ಹೆಚ್ಚುಗಾರಿಕೆಯಾಗಿರುವಂತೆಯೇ, ಬೆಂಗಳೂರಿನಲ್ಲಿ ಆ ದಿನಗಳಲ್ಲಿ ಅಂಥ ವಾತಾವರಣ ಇದ್ದಿತೆನ್ನುವುದೂ ಸ್ಮರಣಾರ್ಹ.    ಸಾಹಿತ್ಯ, ಸದಭಿರುಚಿ, ಸಂಘಟನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸದಾ ಚಟುವಟಿಕೆ, ಕ್ರಿಯಾಶೀಲತೆಯ ಸ್ವಭಾವ ಹೊಂದಿದ್ದ ಇಂದಿರಾ ನಮ್ಮ ಊರಿನವರೆಂಬುದು ಹೆಮ್ಮೆಯ ಸಂಗತಿ. ಶ್ರೀಮತಿ ಮಾಲಾ ಮಂಜುನಾಥ್    ಇಂಥ ಸಾಧಕಿಯ ಸೋದರಿ, ಶ್ರೀಮತಿ ಮಾಲಾ ಮಂಜುನಾಥ್ ಕೂಡ ಸಾಹಿತ್ಯದ ಅಭಿರುಚಿಯುಳ್ಳವರು. ನಾಡಿನ ಹಲವು ಕನ್ನಡ ಪತ್ರಿಕೆಗಳಲ್ಲಿ   ಅವರ ಕಿರುಗತೆಗಳು, ಕವಿತೆಗಳು  ಪ್ರಕಟಗೊಳ್ಳುತ್ತಿರುತ್ತವೆ. ತಮ್ಮ ಪ್ರೀತಿಯ ಸೋದರಿಯ ಕುರಿತಾದ ನೆನಪುಗಳನ್ನು ಆತ್ಮೀಯವಾಗಿ ಇಲ್ಲಿ ಹಿಡಿದಿಟ್ಟಿದ್ದಾರೆ.  ================================

ಅಜ್ಜಂಪುರ - ಪಟ್ಟಣದಿಂದ ಗ್ರಾಮವಾದ ಪರಿ !

ಇಮೇಜ್
ಆತ್ಮೀಯರೇ, ಬೆಳವಣಿಗೆಯೆನ್ನುವುದು ಯಾವಾಗಲೂ ಊರ್ಧ್ವಮುಖವಾಗಿದ್ದು, ಅವನತಿಯೆನ್ನುವುದ ಕೆಳಮುಖವೆಂದು ವಾಡಿಕೆಯಲ್ಲಿದ್ದರೆ, ಅಜ್ಜಂಪುರದ ಪುರಸಭೆಯ ಪರಿಸ್ಥಿತಿಯನ್ನು ಹೀಗೆ ವಿವೇಚಿಸಲಾಗದಂಥ ವಿಚಿತ್ರ ಸಂದರ್ಭವಿದೆ. ಇದಕ್ಕೆ ಉದಾಹರಣೆಯಾಗಿ ಈ ಸಂಚಿಕೆಯಲ್ಲಿ ಅಜ್ಜಂಪುರದ ಪುರಸಭೆಯು ಗ್ರಾಮಪಂಚಾಯಿತಿಯಾಗಿ ಪರಿವರ್ತಿತವಾದ ವಿಚಿತ್ರ ಆದರೂ ಸತ್ಯವಾದ ಸಂಗತಿಯ ಬಗ್ಗೆ ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ) ಇವರು ಬರೆದ ಲೇಖನವಿದೆ. ಇಂಥ ಪರಿಸ್ಥಿತಿಗೆ ಬದಲಾದ ಸರಕಾರದ ನೀತಿಯೇ ಕಾರಣವೆನ್ನಬಹುದಾದರೂ, ಅದು ಪ್ರಗತಿಗೆ ಮಾರಕವೆನ್ನುವಂತಾದರೆ ಒಪ್ಪುವುದಾದರೂ ಹೇಗೆ. ಇದನ್ನು ವಿರೋಧಿಸುವ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಇನ್ನಾದರೂ ಮೂಡಿಬರಲೆನ್ನುವ ಆಶಯ ಇಲ್ಲಿದೆ. - ಶಂಕರ ಅಜ್ಜಂಪುರ  ---------------------------------------------------------------------------------------------------------------------------------------------------------------------------------------------------------------------------------------------------- ಅಜ್ಜಂಪುರ ಪುರಸಭೆಯು ಪೌರಸಭಾ ಆಡಳಿತ ವ್ಯವಸ್ಥೆಯಿಂದ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಟು ಹೊಂದಿದ್ದು ವಿಚಿತ್ರವೇ ಆದರೂ ವಾಸ್ತವ ಸಂಗತಿಯಾಗಿದೆ. ಇದನ್ನು ಆಡಳಿತಾತ್ಮಕ ತೊಡಕು ಎಂದು ಸುಲಭವಾಗಿ ತಳ್ಳಿಹಾಕುವಂಥದಲ್ಲ. ಏಕೆಂದರೆ ಗ್ರಾಮ ಪಂಚಾಯ

ಅಜ್ಜಂಪುರದಲ್ಲಿ ಕಾರ ಹಬ್ಬದ ಸಂಪ್ರದಾಯ

ಇಮೇಜ್
ಆತ್ಮೀಯರೇ, ನಾನೀಗ ಅಮೆರಿಕೆಗೆ ಬಂದು ತಿಂಗಳಾಯಿತು. ಇನ್ನೂ ಆರು ತಿಂಗಳು ಇಲ್ಲಿಯೇ ಇರುತ್ತೇನೆ.  ಹೀಗೆ ಬರುವ ಮುನ್ನ ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಮಾಹಿತಿಯ ಕೊರತೆಯಿಂದಾಗಿ ನಿಲ್ಲಬಾರದೆಂದು ಅಪೇಕ್ಷಿಸಿ, ಓದುಗರು ತಮ್ಮ ಅನುಭವಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳಲು ಆಗೀಗ ಕೋರುತ್ತಿರುತ್ತೇನೆ. ಕೆಲವರನ್ನು ವೈಯುಕ್ತಿಕವಾಗಿಯೂ ಕೋರಿದ್ದೇನೆ. ನನ್ನ ಉದ್ದೇಶವನ್ನು ಗಮನಿಸಿ, ಬ್ಲಾಗ್ ನಿಲ್ಲಬಾರದೆಂಬ ಪ್ರೀತಿಯೊಂದಿಗೆ ಗೆಳೆಯ ಅಪ್ಪಾಜಿ (ಅಪೂರ್ವ) ಅಜ್ಜಂಪುರದ ಮಿಡಲ್ ಸ್ಕೂಲ್ ಹಿಂಭಾಗದಲ್ಲಿರುವ ಕರಿ ಕಲ್ಲುಗಳ ಬಗ್ಗೆ ಲೇಖನವನ್ನು ಕಳಿಸಿದ್ದಾರೆ. ನಾನು ಬಾಲ್ಯದಲ್ಲಿ ಇವುಗಳನ್ನು ನೋಡಿದಾಗ, ಅವು ನೆಲದಿಂದ ನಾಲ್ಕು ಅಡಿಗಳ ಎತ್ತರವಿರುವಂತೆ ಕಾಣುತ್ತಿದ್ದವು. ಬಾಲ್ಯ ಸಹಜ ಕುತೂಹಲದಿಂದ ಈ ಕಲ್ಲುಗಳನ್ನು ಇಲ್ಲೇಕೆ ನಿಲ್ಲಿಸಿದ್ದಾರೆ ಎಂದು ಕೇಳಿದ್ದಕ್ಕೆ, ಕೆಲವು ಹಿರಿಯರು ಅವು ಊರ ಬಾಗಿಲಿನ ಸಂಕೇತವೆಂದೂ, ಕೋಟೆಯ ಆರಂಭದಲ್ಲೇ ಇರುವದರಿಂದ ಅವಗಳಿಗೆ ಬಲಿ ನೀಡುವ ಪದ್ಧತಿಯೂ ಇದ್ದಿರಬಹುದೆಂದು, ತಮಗೆ ತಿಳಿದ, ತಾವು ಊಹಿಸಿದ ಸಂಗತಿಗಳನ್ನು ತಿಳಿಸಿದ್ದು ನೆನಪಿದೆ. ಆದರೆ ಅವಾವೂ ಅಲ್ಲ, ಅವು ಕೃಷಿ ಚಟುವಟಿಕೆಯ ಆರಂಭಕ್ಕೆ ಪೂಜಿಸಲಾಗುವ ಸಾರ್ವಜನಿಕ ಕುರುಹು ಎಂದೂ, ಅವಕ್ಕೆ ಪ್ರತಿವರ್ಷ ನಡೆಯುವ ಪೂಜಾ ಸಂಪ್ರದಾಯಗಳ ವಿವರಗಳನ್ನು ಇಲ್ಲಿ ನೀಡಿದ್ದಾರೆ.  ಈ ಆಚರಣೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾ

ಪ್ರತಿಷ್ಠೆಯ ಪ್ರಶ್ನೆಯಾದ ಪ್ರತಿಷ್ಠಾಪನಾ ಪ್ರಸಂಗ !

ಇಮೇಜ್
ಈ ಹಿಂದೆ ಅಜ್ಜಂಪುರದ ಬಸವೇಶ್ವರ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಅದರಲ್ಲಿ ನಮೂದಿಸಿರುವಂತೆ ದೇವಾಲಯದ ಪ್ರತಿಷ್ಠಾಪನೆಯ ಕಾರ್ಯ ೧೯೩೨ರಲ್ಲಿ ನಡೆಯಿತು. ಈ ಕಾರ್ಯವು ನಡೆಯಬೇಕಾದ ಸಂದರ್ಭದಲ್ಲಿ ಉಂಟಾದ ಚಿಕ್ಕ ಗೊಂದಲದ ಮಾಹಿತಿ ಇತ್ತೀಚೆಗೆ ದೊರೆಯಿತು. ಎಲ್ಲೆಡೆಯೂ ಇದೆಲ್ಲ ಸಾಮಾನ್ಯವೇ ಸರಿ. ಅಜ್ಜಂಪುರದ ಬೆಳವಣಿಗೆಗೆ ಕಾರಣರಾದ ಹಿರಿಯರು ಶ್ರೀ ಶೆಟ್ಟರ ಶಿದ್ದಪ್ಪನವರು.  ಅವರ ಬರವಣಿಗೆಯ ಶೈಲಿಯನ್ನು ಆನಂದಿಸುವ ಜತೆಗೆ, ವಿಷಯ ಪ್ರತಿಪಾದನೆಯಲ್ಲಿ ಖಾಚಿತ್ಯದ ದೃಷ್ಟಿಯಿಂದ ೧೯೩೨ ರ  ಅವರ ಪತ್ರ ಮಹತ್ವದ್ದೆನ್ನಿಸಿ, ಅದನ್ನಿಲ್ಲಿ ನೀಡಲಾಗಿದೆ. ಗೆಳೆಯ, ಲೇಖಕ ಮಿತ್ರ ಅಪೂರ್ವ ಇವರ ಸಂಗ್ರಹದಲ್ಲಿ ದೊರೆತ ಶ್ರೀ ಶೆಟ್ಟರ ಶಿದ್ದಪ್ಪನವರ ಪತ್ರದ ಯಥಾ ನಕಲನ್ನು ಹಾಗೆಯೇ ಪ್ರಸ್ತುತಪಡಿಸಲಾಗಿದೆ. “ ಧರ್ಮಸಂಮಂಧಿ ಶ್ರೀ ಬಸವೇಶ್ವರ ವೀರಭದ್ರ ಸ್ವಾಮಿಯವರ ಪ್ರತಿಷ್ಠಾಪನ ಆಮಂತ್ರಣ ಪತ್ರಿಕಾ ಪ್ರಿಂಟು ಮಾಡಿ ಹಂಚಿರುವ ವ್ಯವಸ್ಥಾಪಕರು ಕಾರ್ಯದರ್ಶಿಗಳು ಇವರಿಗೆ – ಈ ಕೆಳಗೆ ಸಹಿ ಮಾಡಿರುವವರು ಸೂಚಿಸುವುದೇನೆಂದರೆ – ತಾ ೮-೧೧-೩೨ರಿಂದ ತಾ. ೧೧-೧೧-೩೨ರವರೆಗೆ ಶ್ರೀಮನ್ ಮಹಾರಾಜ ನಿರಂಜನ  ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಆಗಮನ ಮಹೋತ್ಸವದ ಅಧ್ಯಕ್ಷತೆಯಲ್ಲಿ ನೆರವೇರಿಸುವ ಕಾರ್ಯಕ್ರಮದ ಸದರಿ ಆಹವಾನಪತ್ರಿಕೆಯು ಶ್ರೀ ಕಂನ್ಯಕಾಪರಮೇಶ್ವರಿ ಪ್ರಿಂಟಿಸುವವರ ಚಿತ್ರದುರ್ಗದಲ್ಲಿ ಪ್ರೆಸ್ಸಿನಲ್ಲಿ ಪ್ರಿಂಟಾಗಿ ಹೊರಟಿರುವ ಪತ

7 ಹಳ್ಳಿ, 18 ಮಾಗಣಿ, ಅಜ್ಜಂಪುರ ಸೀಮೆ !

ಇಮೇಜ್
ಶೀರ್ಷಿಕೆ ಸೇರಿಸಿ ಏಪ್ರಿಲ್ 23 ರಿಂದ ಮೇ 1ರವರೆಗೆ ಅಜ್ಜಂಪುರಕ್ಕೆ ಏಳು ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಸೊಲ್ಲಾಪುರದಲ್ಲಿ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಸಂಭ್ರಮ. ನನ್ನ 18-20 ವಯಸ್ಸಿನ ವರೆಗೂ ಅಜ್ಜಂಪುರದಲ್ಲೇ ಇದ್ದೆನಾದರೂ, ಒಮ್ಮೆಯೂ ಇಲ್ಲಿಗೆ ಹೋಗಲಾಗಿರಲಿಲ್ಲ. ಆದರೆ ಪ್ರತಿ 12 ವರ್ಷಕ್ಕೆ ನಡೆಯುವ ಈ ಜಾತ್ರೆಗೆ ಅಜ್ಜಂಪುರವೇ ಸೀಮೆಯೆಂಬ ಅಂಶ ತಿಳಿದದ್ದು ಇತ್ತೀಚೆಗೆ. ನನ್ನ ಗುರುಗಳಾದ ಚಂದ್ರಪ್ಪ ಮಾಸ್ತರರು ದೂರದ ಕುಶಾಲನಗರದಿಂದ ಫೋನ್ ಮಾಡಿ ಈ ಜಾತ್ರೆಯ ವಿವರಗಳನ್ನು ತಿಳಿಸಿ, ನೀನು ಅಲ್ಲಿಗೆ ಹೋಗಿ ನೋಡಿಕೊಂಡು ಬಾ ಎಂದಿದ್ದರು. ಹೀಗಾಗಿ ಗೆಳೆಯ ಅಪ್ಪಾಜಿಯೊಡನೆ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿನ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿದ ವಿವರಗಳನ್ನು ಇಲ್ಲಿ ನೀಡಿದ್ದೇನೆ.  ಉಯ್ಯಾಲೆ ಮಂಟಪ ಅಜ್ಜಂಪುರ ಮೂಲತಃ ಕೃಷಿ ಪ್ರಧಾನ ಜೀವನಶೈಲಿಯನ್ನು ಹೊಂದಿರುವಂಥದು. ಸ್ವಾಭಾವಿಕವಾಗಿ ಇಲ್ಲಿನ ಕೃಷಿ ಸಂಬಂಧಿತ ಆಚರಣೆಗಳ, ಕಲೆಗಳ ಮೂಲಸತ್ವ ಹಾಗೆಯೇ ಉಳಿದುಬಂದಿದೆ. ಮನುಷ್ಯರಿಗೆ ಇರುವ ಸಾಮುದಾಯಿಕ ಸಂಬಂಧಗಳಂತೆಯೇ, ಇಂಥ ಆಚರಣೆಗಳ ಮೂಲಕ ಸಾಂಪ್ರದಾಯಿಕ ಸಂಬಂಧಗಳ ಕಾರಣದಿಂದ ಊರುಗಳ ನಡುವೆಯೂ ಬಂಧುತ್ವ, ಹೊಂದಾಣಿಕೆಗಳನ್ನು ಸಿದ್ಧರಾಮಣ್ಣನು ರೂಢಿಸಿರುವುದು ಆತನ ವಿಶಾಲ ದೃಷ್ಟಿಗೆ ಸಾಕ್ಷಿಯಾಗಿದೆ. ಇದಕ್ಕೆ ಉದಾಹರಣೆಯಾಗಿ, ಸೊಲ್ಲಾಪುರದ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಆಚರಣೆಯಲ್ಲಿಯೂ ಈ ಅಂಶಗಳು ಗೋಚರಿಸುತ್