ಪೋಸ್ಟ್‌ಗಳು

April, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

69. ಪೆನ್ ರಿಪೇರಿಯ ಉಮ್ಮರ್ ಸಾಹೇಬರು

ಇಮೇಜ್
ಆತ್ಮೀಯರೇ, 
ಫೆಬ್ರವರಿ ತಿಂಗಳ ಈ ಸಂಚಿಕೆಯಲ್ಲಿ ಹಳೆಯ ನೆನಪು ಮತ್ತು ಮರೆತುಹೋಗಿರುವ ಒಂದು ವೃತ್ತಿಯ ಬಗೆಗಿನ ವಿವರಗಳಿವೆ. ನಿಜ, ಕಳೆದುಹೋದ ಕಾಲ ಮತ್ತು ನಡೆಸಿದ ಜೀವನಕ್ರಮಗಳು ಇಂದು ಮರಳಿ ಬಾರದಿರಬಹುದು. ಆದರೆ ಸಾಗಿಬಂದ ದಾರಿಯನ್ನು ತಿರುಗಿನೋಡುವ ಪರಿಪಾಠ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ. ಪೆನ್ ರಿಪೇರಿಯಂಥ ಚಿಕ್ಕ ಕೌಶಲವನ್ನೇ ವೃತ್ತಿಯನ್ನಾಗಿಸಿ ಜೀವನ ನಡೆಸಿದ, ಅಜ್ಜಂಪುರದ ಪೇಟೆ ಬೀದಿಯಲ್ಲಿ ತುಂಬ ಪರಿಚಿತರಿದ್ದ ವ್ಯಕ್ತಿ ಶೇಖ್ ಉಮ್ಮರ್ ಸಾಬ್ ರನ್ನು ನೆನಪಿಸಿಕೊಂಡು ಮಿತ್ರ ಅಪೂರ್ವ ಬಸು ತಮ್ಮ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಂಥ ನೆನಪುಗಳ ಸಂಗ್ರಹ ಊರಿನಲ್ಲಿರುವವರ, ಅಜ್ಜಂಪುರದ ಸ್ಥಳೀಕರ ಸಂಗ್ರಹಗಳಲ್ಲಿ ಇರಬಹುದು. ಅವನ್ನು ಲೇಖನ ರೂಪದಲ್ಲಿ ಇಲ್ಲಿ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ. ಹಾಗೆ ಮಾಡುವಿರೆಂದು ಆಶಿಸುತ್ತೇನೆ.
- ಶಂಕರ ಅಜ್ಜಂಪುರ -----------------------------------------------------------------------------------------------------------------------------------------------------------------------------------------------
ಚಿತ್ರಗಳು, ಲೇಖನ  ಅಪೂರ್ವ ಬಸು, ಅಜ್ಜಂಪುರ


ಅಜ್ಜಂಪುರದ ಪೇಟೆ ಭಾಗವು ಊರು ಬೆಳೆದಂತೆಲ್ಲ ಅದರ ಕುರುಹೂ ಉಳಿಯದಂತೆ ಬದಲಾಗಿಹೋಗಿರುವುದನ್ನು ಕಾಲಧರ್ಮ ಎಂದು ಕರೆಯಬೇಕಲ್ಲದೆ, ಬೇರೆ ಯಾವ ವಿವರಣೆಯೂ ಹೊಂದಲಾರದು. ಇದ್ದರೂ ಒಂದ…

71. ಅಜ್ಜಂಪುರದ ಶ್ರೀ ಕನ್ಯಕಾಪರಮೇಶ್ವರೀ ದೇವಾಲಯ

ಇಮೇಜ್
ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಬರೆಯುತ್ತ ಸಾಗಿದಂತೆ, ಇದುವರೆಗೆ ಏಳೆಂಟು ದೇವಾಲಯಗಳನ್ನು ಈ ಬ್ಲಾಗ್ ನಲ್ಲಿ ಪರಿಚಯಿಸಲಾಗಿದೆ. ಈ ಸಂಚಿಕೆಯಲ್ಲಿ ಅಜ್ಜಂಪುರದ ಶ್ರೀ ಕನ್ಯಕಾ ಪರಮೇಶ್ವರೀ ದೇವಾಲಯದ ಬಗ್ಗೆ ಮಾಹಿತಿಗಳಿವೆ.   ಗೆಳೆಯ ಅಪೂರ್ವ ಬಸು ಅವರೊಂದಿಗೆ, ದೇವಾಲಯದ ಅಧ್ಯಕ್ಷ ಶ್ರೀ ಸತ್ಯನಾರಾಯಣ ಶೆಟ್ಟರನ್ನು ಸಂದರ್ಶಿಸಿ ಪಡೆದ ಮಾಹಿತಿಗಳ ಆಧಾರದಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ. ಅಜ್ಜಂಪುರದ ಶ್ರೀ ಸುಬ್ರಹ್ಮಣ್ಯ ಶೆಟ್ಟರ ನೇತೃತ್ವದಲ್ಲಿ ಪೇಟೆಯ ಬೀದಿಯಲ್ಲಿದ್ದ ಚಿಕ್ಕ ಮಳಿಗೆಯೊಂದರಲ್ಲಿ ಶ್ರೀರಾಮಮಂದಿರ ಆರಂಭವಾಯಿತು. ಶೆಟ್ಟರಿಗೆ ಹಾರ್ಮೋನಿಯಂ, ತಬಲಾ ವಾದನಗಳ ಪರಿಣತಿ ಮತ್ತು ಕಲಾಸಕ್ತಿಗಳಿದ್ದುದರಿಂದ, ಅವರು ಪ್ರತಿ ಶನಿವಾರ ಭಜನೆಯ ಏರ್ಪಾಡನ್ನು ಮಾಡಿದ್ದರು.  ಇದು ಕೆಲವು ಕಾಲ ನಡೆದುಬಂದಿತು. ಆಗಲೂ ವೈಶ್ಯರ ಕುಲದೇವತಾ ಮಂದಿರವನ್ನು ಸ್ಥಾಪಿಸುವ ಆಲೋಚನೆಯೇನೂ ಇರಲಿಲ್ಲ. ಏಕೆಂದರೆ ಅಜ್ಜಂಪುರದಲ್ಲಿ ಆರ್ಯವೈಶ್ಯ ಜನಾಂಗದ ಕುಟುಂಬಗಳ  ಸಂಖ್ಯೆ 20 ನ್ನು ಮೀರಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ದೊಡ್ಡ ಯೋಜನೆಯಾದಇದನ್ನು ಕೈಗೆತ್ತಿಕೊಳ್ಳುವುದು ಕಠಿಣವಾಗಿತ್ತು. ಆದರೆ ಪೇಟೆಯಲ್ಲಿದ್ದ ಶ್ರೀ ರಾಮ ಮಂದಿರವನ್ನು ಆಧರಿಸಿ ಶ್ರೀ ಕನ್ಯಕಾ ಪರಮೇಶ್ವರೀ ದೇವಾಲಯದ ಹೊಳಹು ಮೂಡಲುಆರಂಭವಾಯಿತು. ಇದಕ್ಕೆಂದು ದೇವಾಲಯ ನಿರ್ಮಾಣ ಸಮಿತಿಯನ್ನು 1966ರಲ್ಲಿ ಆರಂಭಿಸಲಾಯಿತು. ಹೀಗಾಗಿ 2016ನೇ ಇಸವಿಯು ದೇವಾಲಯದ ಸ್ವರ್ಣಮಹೋತ್ಸವವರ್ಷ.