ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

90. ಹುಳಿಯಾದರೂ ಚೇಣಿಗೂ ಸೇರಬಲ್ಲ ಹುಣಿಸೆ

ಇಮೇಜ್
ಹುಣಿಸೇ ಹಣ್ಣಿನ ಚೇಣಿ, ದೊಂಗರಿ, ಗೊಳಲು, ಕೊಡತಿ - ಇಂಥ ನುಡಿಗಟ್ಟುಗಳು ಈಗ ಹೆಚ್ಚಾಗಿ ಕೇಳಬರುವುದಿಲ್ಲ. ಇವೆಲ್ಲ ತೀರ ಚಿಕ್ಕ ಸಂಗತಿಗಳು ಎನ್ನಿಸಬಹುದು. ಆದರೆ ನಮ್ಮ ಗ್ರಾಮೀಣ ಬದುಕು ನಡೆದು ಬಂದದ್ದು ಇಂಥ ವೃತ್ತಿಗಳಿಂದಲೇ.  ಸೆಪ್ಟೆಂಬರ್ ತಿಂಗಳ ಈ ಸಂಚಿಕೆಯಲ್ಲಿ ಅಜ್ಜಂಪುರದಲ್ಲಿ ಹಿಂದೆ ನಡೆಯುತ್ತಿದ್ದ ಹುಣಿಸೇಹಣ್ಣಿನ ಚೇಣಿಯ ವಿಷಯದಲ್ಲಿ ಶ್ರೀಮತಿ ರೋಹಿಣಿ ಶರ್ಮಾ ಇವರು ದಶಕದ ಹಿಂದೆ ಬರೆದ ಲೇಖನದ ಮೂಲ ಚಿತ್ರಗಳನ್ನು ಲಗತ್ತಿಸಲಾಗಿದೆ. 

60-70ರ ದಶಕಗಳಲ್ಲಿ ಅಜ್ಜಂಪುರದ ಕೋಟೆ ಪ್ರದೇಶದಲ್ಲಿನ ಮುಸ್ಲಿಮರ ಮನೆಯ ಮುಂದೆ ಹುಣಿಸೇಹಣ್ಣಿನ ಬೀಜಗಳನ್ನು ಬೇರ್ಪಡಿಸಿ, ಅವನ್ನು ಸುಂದರವಾಗಿ ಅರಳಿದ ಹೂವಿನ ಹಾಗೆ ಕಾಣುವಂತೆ ಜೋಡಿಸಿಡುತ್ತಿದ್ದ ಅವರ ಪರಿಶ್ರಮ ಮತ್ತು ಕುಶಲತೆಗಳು ಇನ್ನೂ ನೆನಪಿನಲ್ಲಿವೆ. ಕಾಲಮಾನವನ್ನು ಆಧರಿಸಿ ನಡೆಯುವ ಈ ಚಟುವಟಿಕೆ ಪ್ರತಿವರ್ಷ ಅನೇಕರಿಗೆ ಉದ್ಯೋಗ ನೀಡುತ್ತದೆ.
ಮೇಲುನೋಟಕ್ಕೆ ಇವು ಓದಲು ಸ್ಪಷ್ಟವಾಗಿ ಕಾಣುತ್ತಿಲ್ಲದಿರಬಹುದು. ಆದರೆ ಬ್ಲಾಗ್ ನ ಪುಟವನ್ನು ಹಿಗ್ಗಲಿಸಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. ಈಗಲೂ ಚೇಣಿಯ ಚಟುವಟಿಕೆಗಳು ಮುಂದುವರೆಯುತ್ತಿರಬಹುದು. ಈ ವ್ಯವಹಾರದ ಆದ್ಯಂತವನ್ನು ಶ್ರೀಮತಿ ಶರ್ಮಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 
ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ.
ವಂದನೆಗಳೊಡನೆ,  ಶಂಕರ ಅಜ್ಜಂಪುರ  ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಮಿಂಚಂಚೆ - shankarajp@gma…

89. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೊಂದು ನುಡಿನಮನ

ಇಮೇಜ್
ಹಣ್ಣೆ – ಅಜ್ಜಂಪುರ ಸಮೀಪದ ಪುಟ್ಟ ಗ್ರಾಮ. ಅಲ್ಲೊಂದು ವೀರಶೈವ ಪರಂಪರೆಯ ಮಠ ಹಾಗೂ ಹೊಯ್ಸಳ ನಿರ್ಮಿತ ಮಂದಿರಗಳಿವೆಯೆನ್ನುವುದೇ ಅದರ ಹೆಚ್ಚುಗಾರಿಕೆ. ನಾನು ಅಜ್ಜಂಪುರದಲ್ಲಿ ನನ್ನ ಬಾಲ್ಯವನ್ನು ಕಳೆದು 1968ರ ನಂತರ ವಿದ್ಯಾಭ್ಯಾಸ, ಉದ್ಯೋಗಗಳಿಗಾಗಿ ಊರನ್ನು ಬಿಡುವವರೆಗೂ ಹಣ್ಣೆ ಗ್ರಾಮದ ಬಗ್ಗೆ ನನಗೇನೂ ತಿಳಿದಿರಲಿಲ್ಲ ಮತ್ತು ಅಲ್ಲಿಗೆ ಹೋಗಿದ್ದೂ ಇಲ್ಲ. ಆಗೆಲ್ಲ ಆಗದ ಸಂಗತಿಗಳು ವಯಸ್ಸು 64ನ್ನು ತಲುಪುವಾಗ ಸಂಭವಿಸಿತೆನ್ನುವುದು ನಿಜವಾದರೂ, ಹಣ್ಣೆ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿಯಾಗುವುದು ಸಾಧ್ಯವೇ ಆಗಲಿಲ್ಲವೆಂಬ ವಿಷಾದ ಇನ್ನೂ ಆವರಿಸಿದೆ. 

ಅವರ ಬಗ್ಗೆ ಅಲ್ಪಸ್ವಲ್ಪ ಕೇಳಿ ತಿಳಿದಿದ್ದೆನಾದರೂ,ಅವರನ್ನು 2007ರಲ್ಲಿ ನಡೆದ, ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಸಂದರ್ಭದಲ್ಲಿ ನೋಡಿ, ಮಾತನಾಡಿಸಿದ್ದೆ. ಅವರೊಬ್ಬ ಪರಿಸರಪ್ರೇಮಿ, ಸಾಹಿತ್ಯದಲ್ಲಿ ಅಭಿರುಚಿಯಿದ್ದವರು ಹಾಗೂ ಮತಧರ್ಮಕ್ಕೆ ಸಂಬಂಧಿಸಿದಂತೆ ಜಿಗುಟು ನಿಲುವು ಹೊಂದಿದವರಲ್ಲ ಎಂಬ ಕಾರಣಗಳಿಗೆ ಅವರ ಬಗ್ಗೆ ಅಭಿಮಾನ. ಕುಂಭಾಭಿಷೇಕದ ಸಂದರ್ಭದಲ್ಲಿ 'ವರ್ಣ ಮಾತ್ರ ಕಲಿಸಿದಾತಂ ಗುರು' ಎಂದು ಅವರು ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರನ್ನು ನೆನಪಿಸಿಕೊಂಡರು. 'ಅವರ ಮಗ ಬಂದಿದ್ದಾರೆಂದು ಕೇಳಿದೆ' ಎಂದು ನನ್ನನ್ನು ಕುರಿತು ಹೇಳಿ ವೇದಿಕೆಗೆ ಆಹ್ವಾನಿಸಿದ್ದರು.  ಅವರ ಸ್ನೇಹಭಾವ ಮತ್ತು ವೈಜ್…

88. ಅಜ್ಜಂಪುರದಲ್ಲಿ ಕೃಷಿ ಸ್ಥಿತ್ಯಂತರಗಳು – ಒಂದು ಸ್ಥೂಲ ನೋಟ

ಇಮೇಜ್
ಊರಿನ ಬೆಳವಣಿಗೆಯಲ್ಲಿ ಬೇಸಾಯದ ಪಾತ್ರವೂ ಪ್ರಮುಖವಾದುದೇ. ಈ ವಿಷಯವನ್ನು ಕುರಿತಂತೆ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಅಜ್ಜಂಪುರದಲ್ಲೇ ನೆಲೆಸಿರುವ ಮಿತ್ರ ಅಪೂರ್ವ ಅಜ್ಜಂಪುರ ಅವರು ಜುಲೈ ತಿಂಗಳ ಈ ಸಂಚಿಕೆಯನ್ನು ಸಿದ್ಧಪಡಿಸಿರುವವರು ಮಿತ್ರ ಅಪೂರ್ವ ಅಜ್ಜಂಪುರ. ಅವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.  ತಮ್ಮ ವೃತ್ತಿಜೀವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ, ರೈತರಿಗೆ ಸರ್ಕಾರ ನೀಡಿದ ಸವಲತ್ತುಗಳನ್ನು ಒದಗಿಸುವುದರ ಜತೆಗೇ, ಕೃಷಿಯ ಏರಿಳಿತಗಳನ್ನು, ಬದಲಾವಣೆಗಳನ್ನು ಕಂಡವರು. ನಾನು ಆಗೀಗ ಅಜ್ಜಂಪುರಕ್ಕೆ ಹೋದಾಗ ಅವರೊಂದಿಗೆ ಸುತ್ತಮುತ್ತಣ ಗ್ರಾಮಗಳಿಗೆ ಹೋಗುವುದುಂಟು. ಅಲ್ಲೆಲ್ಲ ಅವರನ್ನು ಆತ್ಮೀಯತೆಯಿಂದ ಮಾತನಾಡಿಸುವ ಜನರ ಅಭಿಮಾನವನ್ನು ಕಂಡಿದ್ದೇನೆ. ರೈತರೊಂದಿಗಿನ ಘನಿಷ್ಠ ಸಂಪರ್ಕದಿಂದಾಗಿ ರೈತರು ಅವರನ್ನು ಮೆಚ್ಚಿರುವುದು ವ್ಯಕ್ತವಾಗುತ್ತದೆ.
ಅಜ್ಜಂಪುರದ ಕೃಷಿ ಕಾಲಾಂತರದಲ್ಲಿ ಬದಲಾವಣೆಗೊಂಡ ಬಗೆ ಹಾಗೂ ರೈತರ ಬದಲಾದ ಆರ್ಥಿಕ ಪರಿಸ್ಥಿತಿಯನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಇದು ಅಜ್ಜಂಪುರದ ಸ್ಥಿತಿಯನ್ನು ಮಾತ್ರ ಹೇಳದೆ, ವ್ಯವಸಾಯ ಕ್ಷೇತ್ರವು ಯಾಂತ್ರೀಕರಣಗೊಂಡ ಪರಿಯನ್ನು ವಿವರಿಸಿದ್ದಾರೆ. ಇದಕ್ಕೆಂದು ಚಿತ್ರಗಳನ್ನೂ ಒದಗಿಸಿದ್ದಾರೆ.
ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಈ-ಮೈಲ್ - shankarajjampura@gmail.com
-----…

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

ಇಮೇಜ್
87ನೇ ಲೇಖನವಾಗಿ ಹೊರಬರುತ್ತಿರುವ ಜೂನ್ ತಿಂಗಳ ಈ ಸಂಚಿಕೆಯನ್ನು ಅಮೆರಿಕಾದಿಂದ ಪ್ರಕಟಿಸುತ್ತಿದ್ದೇನೆ. ನಾನು ಊರಿನಲ್ಲಿರುವಾಗ ಬ್ಲಾಗ್ ಗೆಂದು ಮಾಹಿತಿ ಸಂಗ್ರಹಿಸುವುದು ಸುಲಭವಾಗಿರುವಂತೆಯೇ, ಅಮೆರಿಕಾದಲ್ಲಿ ಕುಳಿತೂ ಆ ಕೆಲಸ ಮಾಡಬಹುದು. ಮುಂದುವರೆದ ತಂತ್ರಜ್ಞಾನದ ನೆರವಿನಿಂದ, ಮಿತ್ರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಹಾಗೆ ನೆರವಾದವರು ಆರ್ಯಮಿತ್ರ. ಭಾರತದಲ್ಲಿ ನನ್ನ ಅನುಪಸ್ಥಿತಿಯ ಕಾಲಕ್ಕೆ ಮಾಹಿತಿ-ಚಿತ್ರಗಳನ್ನು ಒದಗಿಸಿ, ಈ ಲೇಖನ ಮಾಲೆ ಮುಂದುವರೆಯಲು ನೆರವಾಗಬೇಕು ಎಂಬ ಕೋರಿಕೆಗೆ ಸ್ಪಂದಿಸಿ, ಮೂರು-ನಾಲ್ಕು ಲೇಖನಗಳನ್ನು ಕಳಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ನಿಮ್ಮಲ್ಲಿ ಯಾರಿಗಾದರೂ ಈ ಬಗೆಯಲ್ಲಿ ನೆರವು ನೀಡಬಹುದೆಂದರೆ,  ಕೈಬರವಣಿಗೆಯಲ್ಲಿ ಲೇಖನ ಬರೆದು, ಅದರ ಚಿತ್ರ ತೆಗೆದು, ಲೇಖನಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಅದನ್ನು ನನ್ನ ವಾಟ್ಸಾಪ್ ನಂಬರಿಗೆ ಕಳಿಸಲು ವಿನಂತಿ.
ಕೆಲವು ತಿಂಗಳ ಹಿಂದೆ ಈ ಬ್ಲಾಗ್ ನಲ್ಲಿ ಅಜ್ಜಂಪುರದ ಸಮೀಪವಿರುವ ಪುಟ್ಟ ಗ್ರಾಮ ಹಣ್ಣೆಯಲ್ಲಿರುವ ಹೊಯ್ಸಳ ದೇಗುಲದ ಬಗ್ಗೆ ಪರಿಚಯಿಸಲಾಗಿತ್ತು. ಈ ಗ್ರಾಮದ ಸಮೀಪವೇ ಇರುವ ಗುಡ್ಡಕ್ಕೆ ಹಣ್ಣೆಗುಡ್ಡವೆಂಬ ಹೆಸರಿದೆ. 
ಅಜ್ಜಂಪುರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಈ ಗುಡ್ಡದೊಂದಿಗೆ ನಂಟು ಇದೆ. ಪ್ರತಿವರ್ಷ ನಡೆಯುವ ಪರೇವು, ಮಳೆಗೆಂದು ಪ್ರಾರ್ಥನೆ ಸಲ್ಲಿಸುವಾಗ ನಡೆಸುವ ಪೂಜಾರಾಧನೆಗಳ ಸ್ಥಳ ಹಣ್ಣೆ ಗುಡ್ಡ. ಅಲ್ಲಿಗೆ ಸೊಲ್ಲಾಪುರದ ಮಳೆದೇವರು ಎಂದು …

86. ರಂಗಭೂಮಿಯೇ ಉಸಿರಾದ ಟಿ. ಕೃಷ್ಣೋಜಿರಾವ್ ಚವ್ಹಾಣ್

ಇಮೇಜ್
ಲೇಖಕಿ ಶ್ರೀಮತಿ ಎಸ್. ರೋಹಿಣಿ ಶರ್ಮಾ ಇವರು ಈ ಬ್ಲಾಗ್ ನ ಓದುಗರಿಗೆ ಪರಿಚಿತರು. ಅವರು ಅಜ್ಜಂಪುರದಲ್ಲೇ ನೆಲೆಸಿದ್ದವರು. ಊರಿನ ಹಬ್ಬ-ಹರಿದಿನಗಳನ್ನು ಹತ್ತಿರದಿಂದ ಅವಲೋಕಿಸಿ, ಅವುಗಳ ಮಹತ್ವ, ಆಚರಣೆಯ ಸೌಂದರ್ಯ ಮುಂತಾದವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ಅವರ ಕಲಾ ಆಸಕ್ತಿಯ ಪರಿಣಾಮವಾಗಿ, ಎರಡು-ಮೂರು ದಶಕಗಳ ಹಿಂದಿನ ಚಿತ್ರಗಳಿಂದಾಗಿ  ಈ ಲೇಖನ ಇನ್ನಷ್ಟು ಮಾಹಿತಿಪೂರ್ಣವಾಗಿದೆ. ಇದಕ್ಕೆಂದು ಶ್ರಮಿಸಿದ ಅವರ ಪುತ್ರ ಶ್ರೀ ಆರ್ಯಮಿತ್ರ ಹಾಗೂ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿರುವುದಕ್ಕೆ ಲೇಖಕಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. -0-0-0-0-0-0-0-0-0-0-0-0-0-
ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಈ-ಮೈಲ್ - shankarajjampura@gmail.com
85. ಅಜ್ಜಂಪುರ ರಾಮರಾವ್

ಇಮೇಜ್
ಇವರನ್ನು ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಬರೆದಿರುವ ಲೇಖನ ನಮ್ಮ ಅಧ್ಯಾಪಕರು ಮಾಲಿಕೆಯಲ್ಲೇ ಸ್ಮರಿಸಬೇಕಿತ್ತಾದರೂ, ಮಾಹಿತಿಗಳ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. 1960ರ ರಾಮರಾಯರಿಗೂ, ಈಗಿರುವ ಅವರ ಚಹರೆಗೂ ಅಜಗಜಾಂತರ ವ್ಯತ್ಯಾಸವಾದರೂ, ಆಗಿನ ವಿದ್ಯಾರ್ಥಿಗಳಾದ ನಮ್ಮ ಕಣ್ಣಲ್ಲಿ ಅವರ ದೊಡ್ಡ ಮೀಸೆ, ಎತ್ತರದ ನಿಲುವುಗಳೇ ಸ್ಥಾಯಿಯಾಗಿ ನಿಂತಿವೆ. ನಾನು ಅಜ್ಜಂಪುರವನ್ನು 1968-69ರಲ್ಲಿ ಬಿಟ್ಟ ನಂತರ ಅವರನ್ನು ಭೇಟಿಯಾಗುವುದು ಸಾಧ್ಯವಾಗಲೇ ಇಲ್ಲ. ಇಷ್ಟಾಗಿ ಅವರು ಬೆಂಗಳೂರಿನಲ್ಲೇ ಇರುತ್ತಿದ್ದರೂ, ಹೆಚ್ಚಿನ ವಿವರಗಳಾಗಲೀ, ಸಂದರ್ಭಗಳಾಗಲೀ ಒದಗದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಒಂದೊಮ್ಮೆ ಫೇಸ್ ಬುಕ್ ನೋಡುತ್ತಿರುವಾಗ ಅಲ್ಲಿ ಕಂಡು ಬಂದ ಹೆಸರು ಮೇಘನಾ ಅಜ್ಜಂಪುರ ಎಂದಿತ್ತು. ಅಜ್ಜಂಪುರವೆಂಬ ಉಲ್ಲೇಖ ಎಲ್ಲಿ ಕಂಡುಬಂದರೂ ಅದನ್ನು ಅನುಸರಿಸಿ ಹೋಗಿ, ಅವರು ಯಾರೆಂಬುದನ್ನು ತಿಳಿಯುವ ಉಮೇದಿನಿಂದಾಗಿಯೇ ಇಷ್ಟು ಲೇಖನಗಳನ್ನು ಬರೆಯಲು, ಬರೆಸಲು ಸಾಧ್ಯವಾಯಿತು. ಅದರಂತೆ ನಾನು ಆ ಹೆಸರನ್ನು ಅನುಸರಿಸಿ ಹೋದಾಗ ಅಮೆರಿಕಾದಲ್ಲಿರುವ ಮೇಘನಾ ಎ.ಆರ್.ಆರ್. ಎಂದೇ ವಿದ್ಯಾರ್ಥಿವೃಂದದಲ್ಲಿ ಖ್ಯಾತರಾಗಿದ್ದ ನಮ್ಮ ಉಪಾಧ್ಯಾಯರಾಗಿದ್ದ ಎ. ರಾಮರಾಯರ ಪುತ್ರಿ ಎಂದು ತಿಳಿಯಿತು.  ನಂತರ ಅವರಿಂದ ಫೋನ್ ನಂಬರು ತಿಳಿದು ರಾಮರಾಯರೊಂದಿಗೆ ಸಾಧಿಸಿದ ಸಂಪರ್ಕ ಅವರನ್ನು ಇನ್ನಷ್ಟು ಹತ್ತಿರ ತಂದಿತು. ಕಳೆದ ವರ್ಷ ಅವರು ಶಿವಮೊಗ್ಗದಲ್ಲಿ ಮದುವೆಯೊಂದಕ್ಕೆ ಬಂದಿದ್ದರ…

84. ರಾಜಕಾರಣಿ, ಕ್ರೀಡಾಪಟು ಶ್ರೀ ಬಿ.ವಿ. ಗುರುಶಾಂತಪ್ಪ

ಇಮೇಜ್
ಆತ್ಮೀಯ ಓದುಗರೇ,
ಮಾರ್ಚ್ ತಿಂಗಳ ಈ ಸಂಚಿಕೆಯಲ್ಲಿ ಅಜ್ಜಂಪುರದ ಹಿರಿಯರಾದ ಮಾಜಿ ಪುರಸಭಾಧ್ಯಕ್ಷ ಬಿ.ವಿ. ಗುರುಶಾಂತಪ್ಪನವರನ್ನು ಕುರಿತಂತೆ ಕಿರುಲೇಖನವಿದೆ. ಇದನ್ನು ಅಲ್ಪಸಮಯದಲ್ಲಿ ಆಸ್ಥೆಯಿಂದ ಸಿದ್ಧಪಡಿಸಿ, ಛಾಯಾಚಿತ್ರಗಳನ್ನು ಮಿತ್ರ ಅಪೂರ್ವ  ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ನಿಮ್ಮ ಅಭಿಪ್ರಾಯಗಳನ್ನು ನಮೂದಿಸಲು ವಿನಂತಿ. ಅಜ್ಜಂಪುರದ ದೇವಾಲಯಗಳ ಬಗ್ಗೆ, ಸಾರ್ವಜನಿಕ ಸಂಸ್ಥೆಗಳು, ವ್ಯಕ್ತಿಗಳ ಬಗ್ಗೆ ಚಿತ್ರ-ಬರಹಗಳನ್ನು shankarajp@gmail.com ಈ ವಿಳಾಸಕ್ಕೆ ಕಳಿಸಲು ಕೋರುತ್ತೇನೆ.

ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ – 99866 72483


ಶ್ರೀ ಬಿ.ವಿ. ಗುರುಶಾಂತಪ್ಪನವರದು ಎತ್ತರದ ನಿಲುವು, 80ರ ಮೇಲ್ಪಟ್ಟ ವಯಸ್ಸಿನಲ್ಲಿಯೂ ದಟ್ಟ ತಲೆಗೂದಲು ಹೊಂದಿರುವ, ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದ ಅಜ್ಜಂಪುರದ ರಾಜಕೀಯ ಹಾಗೂ ಕಲಾ ರಂಗಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರನ್ನು ಇತ್ತೀಚೆಗೆ ಅಜ್ಜಂಪುರದಲ್ಲಿ ಸನ್ಮಾನಿಸಲಾಯಿತು.
ಶ್ರೀ ಜೋಗಿ ತಿಮ್ಮಯ್ಯ ರಂಗಪ್ರಶಸ್ತಿ ಪ್ರದಾನ ಸಮಾರಂಭ
1948ರಲ್ಲಿ ಕೆಲವು ಸಂಸ್ಥಾನಗಳು ಭಾರತದಲ್ಲಿ ವಿಲೀನವಾಗಿರಲಿಲ್ಲ. ನಮ್ಮ ಮೈಸೂರು ಸಂಸ್ಥಾನವೂ ಅವುಗಳಲ್ಲಿ ಒಂದು. ಆಗ ನಾಡಿನ ಸ್ವಾತಂತ್ರ್ಯ ಹೋರಾಟಗಾರರು ಮೈಸೂರು ಚಲೋ ಎಂಬ ಚಳುವಳಿಯನ್ನು ಹಮ್ಮಿಕೊಂಡರು. ಆ ಹೋರಾಟದಲ್ಲಿ ಗುರುಶಾಂತಪ್ಪನವರೂ ಭಾಗವಹಿಸಿದ್ದರು. ಕಳೆದ ಶತಮಾನದ ಎಪ್ಪತ್ತರ ದಶಕದ ಪೂರ್ವಾರ್ಧದಲ್ಲಿ ಅಜ್ಜಂಪುರದ ಪುರಸಭೆ…

83. ಅಪರೂಪದ ಕಲಾವಿದ ದಂಪತಿ – ಉರುಮೆ ವಾದ್ಯ ಕಲಾವಿದ ರಾಮದಾಸಪ್ಪ, ಜಾನಪದ ಗಾಯಕಿ ಕಮಲಮ್ಮ

ಇಮೇಜ್
ಆತ್ಮೀಯ ಓದುಗರೇ,
ಅಜ್ಜಂಪುರದ ಹಿಂದುಳಿದ ವರ್ಗದ ಸಮಾಜವೊಂದರ ಸಾಧನೆಗಳು, ಕಲೆ ಮತ್ತು ಸಂಸ್ಕೃತಿಗಳಿಗೆ ನೀಡಿರುವ ದೇಣಿಗೆಯ ವಿವರಗಳು ಈ ಸಂಚಿಕೆಯಲ್ಲಿದೆ. ಈ ಬರಹವನ್ನು ಆಪ್ತವಾಗಿ ನಮಗೆ ಸಂಗ್ರಹಿಸಿಕೊಟ್ಟವರು ಪ್ರೀತಿಯ ಮಿತ್ರ ಅಪೂರ್ವ ಬಸು. 
ಅವರು ಲೇಖನದಲ್ಲಿ ಹೇಳಿರುವಂತೆ ಚೆಲುವಾದಿಗರ ಬೀದಿಯೆಂದರೆ ಚೆಲುವಿನ ಬೀದಿಯೆನ್ನಿಸುವಂತಿದ್ದುದು ದಿಟವೇ ಸರಿ. ಸಾರಿಸಿದ ಕಪ್ಪು ನೆಲದ ಮೇಲಿನ ಬಿಳಿಯ ರಂಗೋಲಿ, ಬೀದಿಯುದ್ದಕ್ಕು ಎದ್ದು ಕಾಣುವಂತಿದ್ದ ಸ್ವಚ್ಛತೆ ಇಂದಿಗೂ ನೆನಪಿನಿಂದ ಮರೆಯಾಗಿಲ್ಲ. ಸ್ವಯಂ ಪ್ರೇರಿತರಾಗಿ ಶಿಸ್ತು, ವಿದ್ಯಾಭ್ಯಾಸಕ್ಕೆ ಗೌರವ, ಪರಿಶ್ರಮಗಳ ಮೌಲ್ಯದಿಂದ ಮೇಲೆದ್ದುಬಂದ ಈ ಸಮಾಜದ ಹಿರಿಯರ ಕೊಡುಗೆ ನಾಡಿಗೆ ಸಾಕಷ್ಟಿದೆ. 
ಇದರಲ್ಲಿ ಶಾಸಕ ಶ್ರೀ ತಿಪ್ಪಯ್ಯನವರ ಕೊಡುಗೆಯನ್ನು ಈಗಾಗಲೇ ಸ್ಮರಿಸಿದ್ದಿದೆ. ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಶ್ರೀ ಘನಶ್ಯಾಮರ ಸಾಹಸವನ್ನು ಹಿಂದಿನ ಸಂಚಿಕೆಯಲ್ಲಿ ದಾಖಲಿಸಲಾಗಿದೆ. ಶ್ರೀ ಪುಟ್ಟರಂಗಪ್ಪ ಎಂಬ ಹಿರಿಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರರಾಗಿದ್ದವರು. ಅವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಯತ್ನಿಸಿದಲೂ, ಅದಿನ್ನೂ ಸಫಲವಾಗಿಲ್ಲ. ಈ ಸಂಚಿಕೆಯನ್ನು ಓದಿದವರಲ್ಲಿ ಯಾರಿಗಾದರೂ, ಅವರ ಸಾಧನೆಗಳ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸಲು ಕೋರುತ್ತೇನೆ. ಅಜ್ಜಂಪುರದಲ್ಲೇ ಇದ್ದುಕೊಂಡು ಕಲೆ ಮತ್ತು ಸಂಸ್ಕೃತಿಗಳಿಗೆ ಕೊಡುಗೆ ನೀಡುತ್ತಿರುವ ದಂಪತಿಗಳಾದ ಶ್ರೀ ರ…