90. ಹುಳಿಯಾದರೂ ಚೇಣಿಗೂ ಸೇರಬಲ್ಲ ಹುಣಿಸೆ



ಹುಣಿಸೇ ಹಣ್ಣಿನ ಚೇಣಿ, ದೊಂಗರಿ, ಗೊಳಲು, ಕೊಡತಿ - ಇಂಥ ನುಡಿಗಟ್ಟುಗಳು ಈಗ ಹೆಚ್ಚಾಗಿ ಕೇಳಬರುವುದಿಲ್ಲ. ಇವೆಲ್ಲ ತೀರ ಚಿಕ್ಕ ಸಂಗತಿಗಳು ಎನ್ನಿಸಬಹುದು. ಆದರೆ ನಮ್ಮ ಗ್ರಾಮೀಣ ಬದುಕು ನಡೆದು ಬಂದದ್ದು ಇಂಥ ವೃತ್ತಿಗಳಿಂದಲೇ.  ಸೆಪ್ಟೆಂಬರ್ ತಿಂಗಳ ಈ ಸಂಚಿಕೆಯಲ್ಲಿ ಅಜ್ಜಂಪುರದಲ್ಲಿ ಹಿಂದೆ ನಡೆಯುತ್ತಿದ್ದ ಹುಣಿಸೇಹಣ್ಣಿನ ಚೇಣಿಯ ವಿಷಯದಲ್ಲಿ ಶ್ರೀಮತಿ ರೋಹಿಣಿ ಶರ್ಮಾ ಇವರು ದಶಕದ ಹಿಂದೆ ಬರೆದ ಲೇಖನದ ಮೂಲ ಚಿತ್ರಗಳನ್ನು ಲಗತ್ತಿಸಲಾಗಿದೆ. 

60-70ರ ದಶಕಗಳಲ್ಲಿ ಅಜ್ಜಂಪುರದ ಕೋಟೆ ಪ್ರದೇಶದಲ್ಲಿನ ಮುಸ್ಲಿಮರ ಮನೆಯ ಮುಂದೆ ಹುಣಿಸೇಹಣ್ಣಿನ ಬೀಜಗಳನ್ನು ಬೇರ್ಪಡಿಸಿ, ಅವನ್ನು ಸುಂದರವಾಗಿ ಅರಳಿದ ಹೂವಿನ ಹಾಗೆ ಕಾಣುವಂತೆ ಜೋಡಿಸಿಡುತ್ತಿದ್ದ ಅವರ ಪರಿಶ್ರಮ ಮತ್ತು ಕುಶಲತೆಗಳು ಇನ್ನೂ ನೆನಪಿನಲ್ಲಿವೆ. ಕಾಲಮಾನವನ್ನು ಆಧರಿಸಿ ನಡೆಯುವ ಈ ಚಟುವಟಿಕೆ ಪ್ರತಿವರ್ಷ ಅನೇಕರಿಗೆ ಉದ್ಯೋಗ ನೀಡುತ್ತದೆ.

ಮೇಲುನೋಟಕ್ಕೆ ಇವು ಓದಲು ಸ್ಪಷ್ಟವಾಗಿ ಕಾಣುತ್ತಿಲ್ಲದಿರಬಹುದು. ಆದರೆ ಬ್ಲಾಗ್ ನ ಪುಟವನ್ನು ಹಿಗ್ಗಲಿಸಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. ಈಗಲೂ ಚೇಣಿಯ ಚಟುವಟಿಕೆಗಳು ಮುಂದುವರೆಯುತ್ತಿರಬಹುದು. ಈ ವ್ಯವಹಾರದ ಆದ್ಯಂತವನ್ನು ಶ್ರೀಮತಿ ಶರ್ಮಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. 

ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ.

ವಂದನೆಗಳೊಡನೆ, 
ಶಂಕರ ಅಜ್ಜಂಪುರ 
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಮಿಂಚಂಚೆ - shankarajp@gmail.com



ಕೊಡತಿಯಿಂದ ಹುಣಿಸೆ ಬೋಟನ್ನು ಬಿಡಿಸುತ್ತಿರುವುದು. 










ಕಾಮೆಂಟ್‌ಗಳು

  1. tha Gopalakrishna ನಾನೂ ಚಿಕ್ಕಂದಿನಲ್ಲಿ ಹುಣಸೆ ಬಡಿದು ಬೀಜ ನಾರು ಬೇರ್ಪಡಿಸೊದನ್ನು ನೋಡಿದೀನಿ.

    Devuru Ajjampur
    Devuru Ajjampur I would be too happy to go through the magical history of Ajjampur Not to boast we have an intimate connection of more than 300 years of family at Ajjampur almost SIX generations Help me record it


    Shankar Ajjampura replied · 1 Reply
    Appaji Ajjampura
    Appaji Ajjampura ಹುಣಿಸೆ ಹಣ್ಣಿನ ಒಂದು ಸಣ್ಣ ಉದ್ಯಮವೇ ಆಗಿತ್ತು ಆಗ. ಶ್ರೀಮತಿ ರೋಹಿಣಿ ಶರ್ಮಾ ಅವರ ಲೇಖನವು ಅದರ ನೆನಪು ತರುತ್ತಿದೆ ಹುಳಿ ಹುಳಿಯಾಗಿ!

    Keshavamurthy Hathwar ಶಂಕರ, ನಮ್ಮೂರಿನಲ್ಲಿ ಮಂಡಿ ವ್ಯಾಪಾರ ಚಿನ್ನಾಗ ಇದ್ದ ಕಾಲ. ನಮ್ಮೂರ ಧನಿಯಾ ಪ್ರಸಿದ್ದಿ ಪಡೆದ್ದಿತ್ತು. ಬಹೊಷಃ ನೀನು ಇಲ್ಲಿಗೆ ಬರುವುದಕ್ಕಿಂತ ಮುಂಚೆ. ನಾನು ಒಂದು ಸಮಯದಲ್ಲಿ ಶೆಟ್ಟ್ರು ಸಿದ್ದಪ್ಪನವರು ದಾವಣಗೆರೆ ಹೋಗುತ್ತಾರೆ ಎಂದರೆ ಅವರೂ ಬರುವತನಕ ಉಗಿಬಂಡಿ ನಿಲ್ಲಿಸುತ್ತಿದ್ದರು ಎಂದು ಕೇಳಿದ್ದೆ. ಆ ಕಾಲ ನೆನಪಿದ್ದೀಯಾ?

    G T Sreedhara Sharma ಲೇಖನವನ್ನು ಹಿಂದೆಯೇ ನೋಡಿದ್ದೆ, ಇಂದಿಗೂ ಪ್ರಸ್ತುತ. ಆದರೆ ಚಿತ್ರಗಳು ಮಾತ್ರ ಅದ್ಭುತ! ಮತ್ತೊಮ್ಮೆ ಅಜ್ಜಂಪುರಕ್ಕೆ ಹೋಗಿಬಂದಂತಾಯಿತು. ಇದನ್ನು ನನ್ನ ಗೋಡೆಯಮೇಲೆ ಹಂಚಿಕೊಳ್ಳುವುದನ್ನು ದಯಮಾಡಿ ತಿಳಿಸಿ ಶಂಕರ್. ನನ್ನ ವಿದ್ಯಾರ್ಥಿಗಳೂ, ಆತ್ಮೀಯರೂ ಒಮ್ಮೆ ನೋಡಲಿ, ಓದಲಿ ಎಂಬ ಸದುದ್ದೇಶದಿಂದ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ