97. ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣ

ಅಜ್ಜಂಪುರದ ಶಿವಾನಂದಾಶ್ರಮವನ್ನು ಕುರಿತಂತೆ ಈ ಹಿಂದ ವಿಸ್ತೃತ, ಚಿತ್ರಸಹಿತ ಲೇಖನವನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. ಇದೀಗ ಗೀತಾ ಪ್ರಸಾರ-ಪ್ರಚಾರದ ಚಟುವಟಿಕೆಯ ಇನ್ನೊಂದು ರೂಪವಾಗಿ, ವ್ಯವಸ್ಥಿತ ಕಾರ್ಯಕ್ರಮದೊಡನೆ ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣವು ಅಜ್ಜಂಪುರದ ಆಧ್ಯಾತ್ಮಿಕ ಮಾಸಪತ್ರಿಕೆ "ಗೀತಾಮಿತ್ರ"ದ ಆಯೋಜಕತ್ವದಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹ.
ಫೇಸ್ ಬುಕ್ ನಲ್ಲಿ ನೋಡುತ್ತಿರುವಾಗ ಅಜ್ಜಂಪುರದಲ್ಲಿ ನಡೆಯುತ್ತಿರುವ ಗೀತಾ ನಿತ್ಯ ಪಾರಾಯಣವನ್ನು ಕುರಿತಂತೆ ಇದ್ದ ಚಿಕ್ಕದೊಂದು ಟಿಪ್ಪಣಿ ಮನಸೆಳೆಯಿತು. ಅದರ ವಿವರಗಳನ್ನು ಅಪೇಕ್ಷಿಸಿ, ಅಜ್ಜಂಪುರದ ಶ್ರೀಮದ್ಭಗವದ್ಗೀತಾ ನಿತ್ಯ ಪಾರಾಯಣ ಸಂಚಾಲಕಿ ಶ್ರೀಮತಿ ವೀಣಾ ನಟರಾಜ್ ಇವರನ್ನು ಸಂಪರ್ಕಿಸಿದೆ. ಒಂದೇ ದಿನದಲ್ಲಿ ಈ ಕಾರ್ಯಕ್ರಮದ ಸವಿವರ ಮಾಹಿತಿ ಹಾಗೂ ಚಿತ್ರಗಳು ದೊರಕಿದವು.
ಅಜ್ಜಂಪುರಕ್ಕೆ ವಿಶಿಷ್ಟವಾದ ಈ ಗೀತಾ ಪಾರಾಯಣದ ಆಯೋಜನೆ, ಅದರ ಅಚ್ಚುಕಟ್ಟುತನ ಹಾಗೂ ಪಾರಂಪರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸುತ್ತಿರುವ "ಗೀತಾಮಿತ್ರ"ದ ಕಾರ್ಯಭಾರವನ್ನು ಬೆಂಬಲಿಸಿ ಪ್ರಕಟವಾಗಿರುವ ಈ ಲೇಖನ ನಿಮ್ಮೆಲ್ಲರಿಗೂ ಮೆಚ್ಚುಗೆಯಾಗುವುದೆಂದು ಆಶಿಸುತ್ತೇನೆ.
ಈ ಲೇಖನವನ್ನು ಸಿದ್ಧಪಡಿಸುವಲ್ಲಿ ನೆರವಾದ ಮಿತ್ರ ಅಪೂರ್ವ ಅಜ್ಜಂಪುರ ಇವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಈ ಲೇಖನವನ್ನು ಸಿದ್ಧಪಡಿಸುವಲ್ಲಿ ನೆರವಾದ ಮಿತ್ರ ಅಪೂರ್ವ ಅಜ್ಜಂಪುರ ಇವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ'
ದೂರವಾಣಿ-91485 72483
------------------------------------------------------------------------------------------------------------------------------
ಶ್ರೀಮದ್ ಭಗವದ್ಗೀತಾ ನಿತ್ಯ ಪಾರಾಯಣ
ಅಜ್ಜಂಪುರದ ಶ್ರೀ ಸ್ವಾಮಿ ಶಂಕರಾನಂದರು ಶಿವಾನಂದಾಶ್ರಮದಲ್ಲಿ ವರ್ಷಪೂರ್ತಿ ಗೀತಾ ಪಠಣ, ಪಾರಾಯಣ, ಪ್ರವಚನಗಳನ್ನು ಹಿಂದೆ ನಡೆಸುತ್ತಿದ್ದರು. ಗೀತಾ ಜಯಂತಿಯ ಸಪ್ತಾಹ ಕಾರ್ಯಕ್ರಮವು ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಒಂದು ಹಬ್ಬವಾಗಿತ್ತು. ಗೀತೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಉಪನ್ಯಾಸಕರನ್ನು ಕರೆಸಿ, ಅವರಿಂದ ಜನರಲ್ಲಿ ಗೀತೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ಸ್ವತಃ ಸ್ವಾಮಿ ಶಂಕರಾನಂದರು ಹದಿನೆಂಟು ಅಧ್ಯಾಯಗಳ ಬಗ್ಗೆ ಪ್ರವಚನ ನೀಡುತ್ತಿದ್ದರು. ಹೀಗಾಗಿ ಊರಿನ ಜನರಿಗೆ, ಹತ್ತಿರದ ಗ್ರಾಮಾಂತರ ಪ್ರದೇಶದ ಜನರಿಗೆ, ಮಕ್ಕಳಿಗೆ ಗೀತೆಯ ಬಗ್ಗೆ ಸಹಜ ಶ್ರದ್ಧೆ ಮತ್ತು ಹಾಗೂ ಗೀತಾ ಶ್ಲೋಕಗಳನ್ನು ಪಠಣ ಮಾಡುವ ಅಭ್ಯಾಸವು ಬೆಳೆಯಿತು.
![]() |
ಅಜ್ಜಂಪುರದ ಗೀತಾನಿತ್ಯಪಾರಾಯಣದ ಸದಸ್ಯರು |
ಅಂದಿನ ಗೀತಾ ಜಯಂತಿ ಸಪ್ತಾಹ ಹಾಗೂ ಸ್ವಾಮಿ ಶಂಕರಾನಂದರ ಗೀತಾ ಪ್ರವಚನಗಳಿಂದ ಪ್ರಭಾವಿತರಾದ ಅಜ್ಜಂಪುರದ ಪ್ರಾತಃಸ್ಮರಣೀಯರಾದ ಶ್ರೀ ಎಸ್. ಸುಬ್ರಹ್ಮಣ್ಯಶೆಟ್ಟರು "ಗೀತಾಮಿತ್ರ" ಎಂಬ ಆಧ್ಯಾತ್ಮಿಕ ಮಾಸಪತ್ರಿಕೆಯನ್ನು ಹುಟ್ಟುಹಾಕಿದರು. ಅವರೇ ಸಂಪಾದಕರೂ, ಪ್ರಕಾಶಕರೂ ಆಗಿದ್ದ ಈ ಮಾಸಪತ್ರಿಕೆಯು ನಾಡಿನಾದ್ಯಂತ ಜನಪ್ರಿಯವಾಯಿತು. ಇದೀಗ ಅವರ ಕಿರಿಯ ಪುತ್ರಿ ಶ್ರೀಮತಿ ಶಾರದಾ ಗೋಪಾಲ್ ಅವರ ಸಂಪಾದಕತ್ವದಲ್ಲಿ ಪತ್ರಿಕೆ ಮುನ್ನಡೆದಿದೆ. ಬಾಣಾವರದಲ್ಲಿರುವ ಸುಬ್ರಹ್ಮಣ್ಯಶೆಟ್ಟರ ಇನ್ನೊಬ್ಬ ಪುತ್ರಿ ಶ್ರೀಮತಿ ಸರೋಜಾ ಗೋವಿಂದರಾಜಗುಪ್ತ ಮತ್ತು ಶಾರದಾ ಗೋಪಾಲ್ ಸಹೋದರಿಯರು ಶ್ರೀಮದ್ ಗೀತಾ ನಿತ್ಯ ಪಾರಾಯಣದ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಜ್ಜಂಪುರದಲ್ಲಿರುವ ಮೂರು ಗುಂಪುಗಳೂ ಸೇರಿದಂತೆ ಒಟ್ಟು ರಾಜ್ಯಾದ್ಯಂತ 257 ಗುಂಪುಗಳಿವೆ. ಪ್ರತಿಗುಂಪಿನಲ್ಲೂ 18 ಜನ ಪುರುಷರು, ಮಹಿಳೆಯರನ್ನು ಒಳಗೊಂಡಿರುವ ಸದಸ್ಯರು, ವ್ರತಿಗಳು ಇದ್ದಾರೆ. ಒಟ್ಟು 4626 ಸ್ತ್ರೀ-ಪುರುಷರು ಈ ಮಹಾಯಜ್ಞದಲ್ಲಿ ಪಾಲ್ಗೊಳ್ಳುತ್ತಾರೆ.
![]() |
ಭಗವದ್ಗೀತಾ ಪಾರಾಯಣ ಮಂಡಲ |
ಅಜ್ಜಂಪುರದ 97ರ ಹಿರಿಯ ಚೇತನ, ಗೀತಾಮಿತ್ರ ಪತ್ರಿಕೆಯ ಮಾಜಿ ಸಂಪಾದಕ ಶ್ರೀ ಎಸ್. ಸತ್ಯನಾರಾಯಣ ಶ್ರೇಷ್ಠಿಯವರ ಮಾರ್ಗದರ್ಶನ, ಆಶೀರ್ವಾದಗಳು ಈ ಮಹಾಯಜ್ಞ ಕಾರ್ಯಕ್ಕೆ ಇದೆ. ಮಹಾಯಜ್ಞಕ್ಕೆ ಮತ್ತಷ್ಟು ಜನರು ಆಸಕ್ತಿ ಹೊಂದಿ ಸೇರುತ್ತಿದ್ದಾರೆ. ಹದಿನೆಂಟು ಗುಂಪುಗಳ ಹೊರತಾಗಿಯೂ ಸಾಧನೆಯಲ್ಲಿ ತೊಡಗಿದ್ದಾರೆ. ಅವರಿಗೂ ಸಹ ಯಜ್ಞದ ಸಂಘಟಕಿ ಶ್ರೀಮತಿ ಸರೋಜಾ ಗೋವಿಂದರಾಜ ಗುಪ್ತ ಅವಕಾಶ ಕಲ್ಪಿಸಿದ್ದಾರೆ.

![]() |
ಪಾರಾಯಣದ ಮಾತೃಕೆ |
ಈ ವಿಧಾನದಲ್ಲಿ ಒಂದು ಸುತ್ತು (18 ದಿನಗಳಲ್ಲಿ) ಪಾರಾಯಣ ಮುಗಿಸಿದಂತೆ ಆಗುತ್ತದೆ. ಹೀಗೆ 18 ದಿನಗಳು ಒಂದು ಸುತ್ತಿನ ವ್ರತದಂತೆ 18 ಸುತ್ತುಗಳ ಪಾರಾಯಣ ಮಾಡಬೇಕು. ಹಾಗಾಗಿ ಪ್ರತಿ ಗುಂಪಿನ ಸದಸ್ಯರು ಗೀತೆಯ ಎಲ್ಲ 18 ಅಧ್ಯಾಯಗಳನ್ನು ಹದಿನೆಂಟು ಸುತ್ತು ಪಾರಾಯಣ ಮಾಡಿದಂತೆ ಆಗುತ್ತದೆ. ಈ ಪಾರಾಯಣ ವಿಧಾನದ ಮಾತೃಕೆಯ ಚಿತ್ರವನ್ನು ಲೇಖನದೊಂದಿಗೆ ಪ್ರಕಟಿಸಲಾಗಿದೆ. 324ದಿನಗಳ ಸುದೀರ್ಘ, ಅಖಂಡ, ನಿರಂತರ ವ್ರತದಂತೆ ನಡೆಯುವ ಈ ಯಜ್ಞವನ್ನು ಮಹಾಯಜ್ಞ ಎಂದು ಹೆಸರಿಸಿರುವುದು ಅನ್ವರ್ಥಕವಾಗಿದೆ.
ಈ ಲೇಖನದ ಪ್ರಕಟಣೆಯ ವೇಳೆಗೆ 6ನೇ ಸುತ್ತು ಮುಗಿದಂತಾಗಿರುತ್ತದೆ. ಅಜ್ಜಂಪುರದಲ್ಲಿ, ಲೇಖಕಿಯ ನೇತೃತ್ವದಲ್ಲಿ ಪ್ರಸ್ತುತ 18 ಸದಸ್ಯರಿರುವ ವಿಶ್ವಂಬರಾ-151 ಎಂಬ ಹೆಸರಿನ ಒಂದು ಗುಂಪು ಇದೆ. ಹೀಗೆ ಪ್ರತಿ ಗುಂಪಿಗೂ ಹೆಸರು, ಸಂಖ್ಯೆಗಳ ನಿರ್ದೇಶನವಿದೆ. ಅಜ್ಜಂಪುರದಲ್ಲಿರುವ ಇನ್ನೆರಡು ಗುಂಪುಗಳ ನೇತೃತ್ವವನ್ನು ಶ್ರೀಮತಿ ಜಯಾ ರುದ್ರೇಶ್ ಮತ್ತು ಶ್ರೀಮತಿ ಅನಸೂಯಾ ನಾರಾಯಣರಾವ್ ವಹಿಸಿರುತ್ತಾರೆ.
ಈ ಮಹಾಯಜ್ಞಕ್ಕೆ ದಿನಾಂಕ 18-12-2018 ರಿಂದ ಚಾಲನೆ ದೊರೆತಿದೆ. ನಿರಂತರವಾಗಿ 324 ದಿನಗಳ ಗೀತಾ ಪಾರಾಯಣದ ಮಹಾಯಜ್ಞವು ನಡೆಯಲಿದೆ. ಇದರಿಂದ ಲೋಕಕಲ್ಯಾಣ ಮತ್ತು ಗೀತಾ ಪ್ರಚಾರಗಳ ಉದ್ದೇಶದಿಂದ ಮನೆ ಮನೆಗಳಲ್ಲಿ ವ್ರತದಂತೆ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಪೀಳಿಗೆಯ ಮಕ್ಕಳಿಗೆ, ಯುವಜನರಿಗೆ ಗೀತೆಯ ಪರಿಚಯ ಪ್ರತ್ಯಕ್ಷವಾಗಿ ಆಗುತ್ತದೆ ಎಂಬ ನಂಬಿಕೆ ನಮ್ಮದು. ಹಾಗೆಯೇ ವ್ರತಿಗಳಿಗೂ ಭಗವದ್ಗೀತೆಯ ವಿರಾಟ್ ದರ್ಶನವಾಗಲಿದೆ.
ನಿತ್ಯ ಪಾರಾಯಣ ಮಾಡಿದ ನಂತರ ಪ್ರತಿಯೊಬ್ಬ ಸದಸ್ಯರು ಒಂದು ರೂಪಾಯಿಯಂತೆ ಕಾಣಿಕೆ ಅರ್ಪಿಸಬೇಕು. ಹೀಗೆ ಒಟ್ಟು ಹದಿನೆಂಟು ಸುತ್ತು ಮುಗಿಯುವ ಹೊತ್ತಿಗೆ ಒಟ್ಟು ರೂ. 324 ಸಂಗ್ರಹವಾಗುತ್ತದೆ. 2019ರ ನವೆಂಬರ್ 17 ಕ್ಕೆ ಶಿವಮೊಗ್ಗದಲ್ಲಿ ಎಲ್ಲಾ 18 ಗುಂಪುಗಳ 4626 ಸದಸ್ಯರು ಕೃಷ್ಣಾರ್ಪಣ ಕಾರ್ಯಕ್ರಮದ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಿ, ತಮ್ಮ ಗುಂಪಿನ ಕಾಣಿಕೆ ಅರ್ಪಿಸಲಿರುವರು. ಅಂದಿನ ಸಮಾವೇಶದಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಕುರಿತು, ವಿಚಾರಮಂಥನವೂ ನಡೆಯಲಿದೆ.
-0-0-0-0-0-0-0-0-0-0-0-0-0-0-0-
ಗೀತಾಮಿತ್ರ ನಿತ್ಯ ಪಾರಾಯಣ ಮಹಾಯಜ್ಞಕ್ಕೆ ಚಾಲನೆ ದೊರೆತ ದಿನಾಂಕ 18 - 12 - 2018
ಪ್ರತ್ಯುತ್ತರಅಳಿಸಿRajeshwari D
ಪ್ರತ್ಯುತ್ತರಅಳಿಸಿDelete or hide this
1
Like
· Reply · 23h
Gayathri Manjunath
Gayathri Manjunath Geethea kalitu oduvudu ondu Tara Santosh yaganadalli bagavahsi admine leave
Sikkirodu sahabahala
Santosh januma…See More
1
Delete or hide this
Like
· Reply · 23h
Pranitha Sagar
Pranitha Sagar We should take forward our culture and believes but now a days youths are not aware of our culture we should take initiative to guide others and spread the awareness about religious and cultural aspects
AM HAPPY AND BLESSED TO BE A PART OF THIS
1
Delete or hide this
Like
· Reply · 23h
Annapurna Annapurna
Annapurna Annapurna
Delete or hide this
Like
· Reply · 23h
Nagalakshmi Gopal
Nagalakshmi Gopal Super
1
Delete or hide this
Like
· Reply · 22h
Geetha Sreekanth
Geetha Sreekanth
Delete or hide this
Like
· Reply · 22h
Rashmi Karidhi
Rashmi Karidhi
🙏🙏
1
Delete or hide this
Like
· Reply · 22h
Rajeshwari D
Rajeshwari D ನಮ್ಮ ಅಜ್ಜಂಪುರ ಶಂಕರ್ ರವರಿಗೆ ಮೊದಲ ವಂದನೆಗಳು, ಜಿ.ಬಿ.ಅಪ್ಪಾಜಿ ರವರಿಗೂ ವಂದನೆಗಳು, ನಾನು ರಾಜೇಶ್ವರಿ ಕೃಷ್ಣಮೂರ್ತಿ, ಪಾಂಡುರಂಗಪ್ಪ ತೋಟ, ಭದ್ರಾವತಿ, ನಮಗೆಲ್ಲಾ ಈ ಕಾರ್ಯದಲ್ಲಿ ಭಾಗಿಗಳಾಗುವ ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ, ನಮಸ್ಕಾರಗಳು.
1
Delete or hide this
Like
· Reply · 21h
Hema Umakanth
Hema Umakanth ವಸುದೇವಸುತಂ ದೇವಂ , ಕಂಸಚಾಣೂರಮರ್ದನಂ , ದೇವಕೀ ಪರಮಾನಂದಂ , ಕೃಷ್ಣಂ ವಂದೇ ಜಗದ್ಗುರುಂ...
ಓಂ ಶ್ರೀ ಸದ್ಗುರುಭ್ಯೋ ನಮಃ...
1
Delete or hide this
Like
· Reply · 13h
Manikya Hemanth
Manikya Hemanth Super
Delete or hide this
Like
· Reply · 10h
Veena Natrj Veena Natraj
Veena Natrj Veena Natraj Nice Article 🙏
Delete or hide this
Momma lekana tumba Chennai bandied
ಪ್ರತ್ಯುತ್ತರಅಳಿಸಿ