101. ಅಜ್ಜಂಪುರದಲ್ಲಿ ಋಗ್ವೇದ ಪಾರಾಯಣ

ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲಾಗದು ಎನ್ನುವುದೊಂದು ವಾಡಿಕೆ. ಇದಕ್ಕೆ ಹಲವು ಕಾರಣಗಳನ್ನು ನೀಡುವರು. ಕೃಷಿ ಚಟುವಟಿಕೆಗಳಿಲ್ಲದ ವಿರಾಮದ ಕಾಲವಿದು. ಅಂತೆಯೇ ವೇದಾಧ್ಯಯನಕ್ಕೂ ಬಿಡುವು ಎನ್ನುವುದು ಮತ್ತೊಂದು ಕಾರಣ. ಇದೇ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಲಕ್ಕವಳ್ಳಿಯ ಸಮೀಪದ ಸೋಮಪುರದಲ್ಲಿರುವ ದತ್ತಾಶ್ರಮದ ಆಯೋಜಕರೂ, ವೇದವಿದರೂ ಆದ ಶ್ರೀ ಸೋ.ತಿ. ನಾಗರಾಜರು ಈ ಅವಧಿಯಲ್ಲಿ ವೇದಪಾರಾಯಣದ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸುತ್ತಿದ್ದಾರೆ.



ಇಂದು ಮೂಲ ವಿಜ್ಞಾನವನ್ನು ಮರೆತಿದ್ದರೂ, ಅದರ ಸತ್ವವೇನೂ ಕುಂದಿಲ್ಲ. ಅದರ ಆಧಾರದ ಮೇಲೆಯೇ ಇತರ ಎಲ್ಲ ಸಂಶೋಧನೆಗಳೂ, ಆನ್ವಯಿಕ ವಿಧಿ-ವಿಧಾನಗಳು ಜರುಗುತ್ತಿವೆ. ವೇದಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿದೆ. ಹಿಂದೊಮ್ಮೆ ಬರಗಾಲ ಬಂದಾಗ, ನಿತ್ಯ ಜೀವನವೂ ನಡೆಯುವುದೇ ಕಷ್ಟವಾಗಿದ್ದ ಹಂತಗಳನ್ನೆಲ್ಲ ದಾಟಿಕೊಂಡು ಬಂದದ್ದು ಇದೆ. ಈಗ ಇಷ್ಟೆಲ್ಲ ಅನುಕೂಲಗಳು, ವ್ಯವಸ್ಥೆಗಳು ಇರುವ ಕಾಲದಲ್ಲಿ ಇದು ಚೆನ್ನಾಗಿಯೇ ನಡೆಯಬೇಕು. ಆದರೆ ಅದಕ್ಕೆ ಬೇಕಿರುವ ಶ್ರದ್ಧೆ, ವಿಶ್ವಾಸಗಳ ಕೊರತೆಯಿರುವಂತೆ ಭಾಸವಾಗುತ್ತದೆ. ಆದರೆ ಅದೇ ನಿಜವಲ್ಲ. ಇದೇ ಸಾಮತಿಯು ವೇದಗಳ ಪ್ರಾಚುರ್ಯಕ್ಕೂ ಹೊಂದಿಕೆಯಾಗುತ್ತದೆ ಎಂದು ವಿವರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ