ಪೋಸ್ಟ್‌ಗಳು

ಅಜ್ಜಂಪುರದ ಅಧಿದೇವತೆ ಕಿರಾಳಮ್ಮ – ಐತಿಹ್ಯ ಮತ್ತು ಆಚರಣೆಗಳ ಪಕ್ಷಿನೋಟ

ಇಮೇಜ್
ಆತ್ಮೀಯ ಓದುಗರೇ, ಕಳೆದ ಶುಕ್ರವಾರ ದಿನಾಂಕ 22-04-2016ರಂದು ಅಜ್ಜಂಪುರದ ಕಿರಾಳಮ್ಮನ ಜಾತ್ರೆ, ರಥೋತ್ಸವಗಳು ಸಂಪನ್ನಗೊಂಡವು. ನಮ್ಮ ಗ್ರಾಮದೇವತೆಯ ಉತ್ಸವದ ಹಿನ್ನೆಲೆ, ಆಚರಣೆಗಳು ಮತ್ತು ಅದಕ್ಕಿರುವ ಪರಂಪರಾಗತ ಅಂಶಗಳನ್ನು ಗೆಳೆಯ ಅಪೂರ್ವ (ಅಪ್ಪಾಜಿ ಜಿ.ಬಿ.) ಇವರು ಈ ಲೇಖನದಲ್ಲಿ ದಾಖಲಿಸಿದ್ದಾರೆ. ಗ್ರಾಮದೇವತೆಯ ಪರಂಪರೆಯೆನ್ನುವುದು ಪ್ರಾಚೀನವಾದುದು. ಅಂಥ ವಿಷಯದಲ್ಲಿ ತಮಿಳು ಪರಂಪರೆಯ ಸ್ವಾಮೀಜಿಯೋರ್ವರು ತಮ್ಮ ಪ್ರತಿಷ್ಠೆಯನ್ನೋ, ನಂಬಿಕೆಯನ್ನೋ ಊರ ಜನರ ಮೇಲೆ ಹೇರಲು ಹೊರಟು ಅದು ವಿಫಲವಾದ ಪ್ರಸಂಗ ಹೇಗೆ ಪರ್ಯವಸಾನವಾಯಿತೆಂಬುದರ ವಿವರಗಳನ್ನು ಕಾಣಬಹುದು. ಅದೇ ಹೊತ್ತಿಗೆ ನಾಯಕರೆನಿಸಿಕೊಂಡವರು ತಮ್ಮ ಊರ ದೇವತೆಯ ಬಗ್ಗೆ ತಳೆದ ನಿರಭಿಮಾನದಿಂದಾಗಿ ಪೇಚಿಗೆ ಸಿಲುಕಿದ ಘಟನೆಯೂ ನಡೆಯಿತು. ಇದಕ್ಕೆ ಪೂರಕವಾಗಿ, ಈ ಬ್ಲಾಗ್ ನ ಹಿಂದಿನ ಸಂಚಿಕೆಯೊಂದರಲ್ಲಿ ಪ್ರಕಟವಾಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಪತ್ರವನ್ನೂ ನೆನಪಿಸಿಕೊಳ್ಳಬಹುದು. ಅಲ್ಲಿ ಅವರ ಹಠ ಮತ್ತು ಸ್ವಾಭಿಮಾನಗಳು ಪ್ರಕಟವಾಗಿವೆಯಾದರೆ, ಈ ಪ್ರಸಂಗದಲ್ಲಿ ಪರಂಪರೆಯನ್ನು ಕೆದಕಲು ಹೋಗಿದ್ದಕ್ಕೆ ಉಂಟಾದ ಪರಿಣಾಮಗಳು ಗೋಚರಿಸುತ್ತವೆ. ಇವೆಲ್ಲ ಚಿಕ್ಕ ಸಂಗತಿಗಳೇ ಇರಬಹುದು. ಆದರೆ ಒಂದು ಊರಿನ ದೈವದ ವಿಷಯದಲ್ಲಿ ತಳೆಯುವ ಸಾರ್ವಜನಿಕ ನಿಲುವುಗಳು, ಜನರ ಹಿತಾಸಕ್ತಿಗೆ ಪೂರಕವಾಗಿರುವುದು ಅತ್ಯವಶ್ಯ ಎನ್ನುವುದನ್ನಂತೂ ಈ ಘಟನಾವಳಿಗಳು ತಿಳಿಸುತ್ತವೆ. ಜಾತ್ರೆಯ ದೃಶ್ಯಗಳು, ಸಿಡಿ...

ಯಕ್ಷಲೋಕದ ರಸದೌತಣ

ಇಮೇಜ್
ಆತ್ಮೀಯರೇ, ಏಪ್ರಿಲ್  ತಿಂಗಳ ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ ಆಳ್ವಾಸ್ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯಕ್ರಮವನ್ನು ಕುರಿತಂತೆ ಇದೆ. ಅಜ್ಜಂಪುರದ ಜನತೆಗೆ ಈ ಕಾರ್ಯಕ್ರಮ ವಿಶಿಷ್ಟವೆನಿಸಲು ಕಾರಣವಾದ ಅಂಶಗಳನ್ನು ಆಯ್ದು ನೀಡಿದ್ದಾರೆ, ಲೇಖಕ ಮಿತ್ರ ಅಪೂರ್ವ. ಉತ್ತಮ ಛಾಯಾಚಿತ್ರಗಳೊಂದಿಗೆ ಅತ್ಯುತ್ತಮ ನುಡಿಚಿತ್ರವನ್ನೂ ಕಟ್ಟಿಕೊಟ್ಟಿದ್ದಾರೆ. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತಮ ಸಂಸ್ಕಾರ, ಹಿನ್ನೆಲೆಗಳು ಅಜ್ಜಂಪುರದಲ್ಲಿ ಎಂದಿನಿಂದಲೂ ಇರುವುದರಿಂದ ಇಂದಿನ ಪೀಳಿಗೆಯೂ ಅದನ್ನು ಮುಂದುವರೆಸಿಕೊಂಡು ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.    - ಶಂಕರ ಅಜ್ಜಂಪುರ =========================================================================================================================== ಯಕ್ಷಲೋಕದ ಸಂಭ್ರಮ  ಬೃಹತ್ ಜನಸ್ತೋಮ   2 016, ಜನವರಿ 22, ಶುಕ್ರವಾರ ಸಂಧ್ಯಾಸಮಯ. ಅಜ್ಜಂಪುರದ ಶೆಟ್ರು ಸಿದ್ಧಪ್ಪ ಸರಕಾರೀ ಪದವೀಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಸಹಸ್ರಾರು ಜನರು ಕುತೂಹಲದಿಂದ ಮುಂದಿನ ಕ್ಷಣಗಳಿಗೆ ಕಾಯುತ್ತಿದ್ದರು. ಅತ್ತ ಪಡುವಣದಲ್ಲಿ ಸೂರ್ಯ ದಿಗಂತದಲ್ಲಿ ಮರೆಯಾಗುವ ಕ್ಷಣ, ಇತ್ತ ಮೂಡಣ ದಿಕ್ಕಿನಲ್ಲಿ 80 ಅಡಿ 40 ಅಡಿಗಳ ಆಯತಾಕಾರದ ಎತ್ತರದ ಬೃಹತ್ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತ...

ಶ್ರೀ ಶಂಕರಾನಂದ ಸ್ವಾಮೀಜಿ

ಇಮೇಜ್
ಆತ್ಮೀಯರೇ, ನಿಮ್ಮೆಲ್ಲರ ಸತತ ಪ್ರೋತ್ಸಾಹದಿಂದ ಈ ಬ್ಲಾಗ್ ಐದನೇ ವರ್ಷವನ್ನು ಪೂರೈಸಿದೆ. ಓದುಗರೆಲ್ಲರಿಗೆ ಧನ್ಯವಾದಗಳು. ತಿಂಗಳಿಗೆ ಒಂದು ಲೇಖನದಂತೆ ಮಾತ್ರ ಪ್ರಕಟಿಸಲು ಸಾಧ್ಯವಾಗಿದೆ. ಏಕೆಂದರೆ ಊರಿನ ಬಗ್ಗೆ, ಅಲ್ಲಿನ ಇತಿಹಾಸ, ವಿಶೇಷ ಘಟನೆಗಳ ಬಗ್ಗೆ ಆಸಕ್ತಿ ತಳೆದು ಮಾಹಿತಿಗಳನ್ನು ನೀಡುವಂತಾದರೆ ಇನ್ನಷ್ಟು ಮಾಹಿತಿ ಸಂಗ್ರಹವಾಗುತ್ತಿತ್ತು. ಕೆಲವರಾದರೂ ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿರುವರು. ಅವರೆಲ್ಲರಿಗೂ ಧನ್ಯವಾದಗಳು. ಈಗ ಪ್ರಕಟವಾಗಿರುವ 60ನೆಯ ಲೇಖನವನ್ನು ಸ್ವಪ್ರೇರಣೆಯಿಂದ ರಚಿಸಿ,  ಮಾರ್ಚ್ ತಿಂಗಳ ಈ ಸಂಚಿಕೆಯನ್ನು ವಿಶಿಷ್ಟವಾಗಿಸಿರುವವರು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿಯವರು. ಅವರು ಅಜ್ಜಂಪುರದ ಬ್ಲಾಗ್ ನ ಮೇಲಣ ಅಭಿಮಾನದಿಂದ, ಅಜ್ಜಂಪುರದ ಶಿವಾನಂದಾಶ್ರಮದ ಶಂಕರಾನಂದ ಸ್ವಾಮೀಜಿಯವರನ್ನು ಕುರಿತಂತೆ ತಮ್ಮ ನೆನಪುಗಳನ್ನು ದಾಖಲಿಸಿದ್ದಾರೆ. ನನ್ನ ಈ ಯತ್ನವನ್ನು ಆರಂಭದಿಂದಲೂ ಬೆಂಬಲಿಸಿ, ಸ್ಫೂರ್ತಿಯುತ ನುಡಿಗಳನ್ನಾಡಿ ಹರಸಿರುವ, ಶ್ರೀ ಶ್ರೇಷ್ಠಿಯವರು ಬರೆದಿರುವ ಈ ಬರವಣಿಗೆಯನ್ನು, ಯಥಾವತ್ತಾಗಿ ಹಾಗೆಯೇ ಪ್ರಕಟಿಸಿರುವೆ. ಇದಕ್ಕೆ ಕಾರಣಗಳೆಂದರೆ ಅವರ ಮುದ್ದಾದ, ತಪ್ಪುಗಳಿಲ್ಲದ, ಮುದ್ರಣ ಸದೃಶವಾದ ಬರವಣಿಗೆ, ಭಾಷಾ ಶೈಲಿ ಮತ್ತು ಗೀತಾಕೈಂಕರ್ಯದ ಬಗೆಗಿನ ಅವರ ಶ್ರದ್ಧೆ. 94ರ ವಯಸ್ಸಿನಲ್ಲಿ ಅಪರಿಮಿತ ಜೀವನೋತ್ಸಾಹದಿಂದ ಮುನ್ನಡೆಯುತ್ತಿರುವ ಅವರು ನಮ್ಮೆಲ್ಲರಿಗೂ ಚೈತನ್ಯದಾಯಕರು, ಸ್ಫೂರ್ತಿ...

ಪರ್ವತರಾಯನ ಕೆರೆ

ಇಮೇಜ್
ಆತ್ಮೀಯರೇ, ಈ ಬಾರಿಯ ಸಂಚಿಕೆಯಲ್ಲಿ ಅಜ್ಜಂಪುರದ ಪರ್ವತರಾಯನ ಕೆರೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಕೆರೆಗೆ ಈ ಹೆಸರು ಬರಲು ಕಾರಣವಾದ ಬಗ್ಗೆ ನಾನು ಮತ್ತು ನನ್ನ ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ) ದೂರವಾಣಿಯಲ್ಲಿ ಚರ್ಚಿಸುತ್ತಿದ್ದೆವು. ಅಜ್ಜಂಪುರ ಸಮೀಪದ ಬುಕ್ಕಾಂಬುಧಿಗೆ ವಿಜಯನಗರದ ಸಂಪರ್ಕದ ಬಗ್ಗೆ ಒಂದು ಹಂತದಲ್ಲಿ ಅವರು ಪ್ರಸ್ತಾಪಿಸಿದರು. ಹೊಯ್ಸಳೋತ್ತರ ದೇವಾಲಯಗಳನ್ನು ವಿಜಯನಗರದ ಅರಸರು ಜೀರ್ಣೋದ್ಧಾರ ಮಾಡಿರುವ ಕುರುಹುಗಳು ಅಜ್ಜಂಪುರದಲ್ಲೂ ಕಂಡುಬರುತ್ತದೆಯಾಗಿ ನಮ್ಮೂರ ಕೆರೆಯನ್ನು ಅಭಿವೃದ್ಧಿಪಡಿಸಿದಾತನು ವಿಜಯನಗರಕ್ಕೆ ಸಂಬಂಧಿಸಿದ ಪರ್ವತರಾಯನೆಂಬ ಊಹೆಗೆ ತಲುಪಿದೆವು. ಓದುಗರಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿದ್ದಲ್ಲಿ ಹಂಚಿಕೊಳ್ಳಲು ಕೋರುತ್ತೇನೆ. (ಚಿತ್ರಕೃಪೆ - ಮಂಜುನಾಥ ಅಜ್ಜಂಪುರ ಮತ್ತು ಜಿ.ಬಿ. ಅಪ್ಪಾಜಿ) ಪರ್ವತರಾಯನ ಕೆರೆ ಎಲ್ಲ ಊರುಗಳಿಗಿರುವಂತೆ ಅಜ್ಜಂಪುರಕ್ಕೂ ಒಂದು ಕೆರೆ ಇದೆ. ಅದಕ್ಕೆ ಅದ್ಭುತವಾದ ಹೆಸರೂ ಇದೆ. ಅದರ ಹೆಸರು ಪರ್ವತರಾಯನ ಕೆರೆ. ಈ ಪರ್ವತರಾಯ ವಿಜಯನಗರ ಕಾಲಕ್ಕೆ ಸೇರಿದವನಿರಬೇಕು. ಅಜ್ಜಂಪುರದ ಸಮೀಪದ ಬುಕ್ಕಾಂಬುಧಿ, ವಿಜಯನಗರದ ಇತಿಹಾಸದೊಂದಿಗೆ ತಳುಕುಹಾಕಿಕೊಂಡಿರುವ ದಾಖಲೆಗಳಿವೆ. ಅದೇ ರೀತಿ, ಅಜ್ಜಂಪುರದ ಕೋಟೆಯಲ್ಲಿರುವ  ಕೆರೆಹಿಂದಿನ ಶಂಕರಲಿಂಗೇಶ್ವರ ದೇವಾಲಯ ಶ್ರೀ ಪ್ರಸನ್ನ ಸೋಮೇಶ್ವರ ದೇಗುಲದ ಲಿಂಗ ಶಿಲ್ಪ ಮತ್ತು ಎದುರಿನ ಬಸವನ ಮಂಟಪಗಳ...

ಆ ಪರಿಮಳಕ್ಕೆ ಮರುಳಾಗದವರುಂಟೇ ? !

ಇಮೇಜ್
ನನಗೆ ಚೆನ್ನಾಗಿ ನೆನಪಿದೆ. ಅಜ್ಜಂಪುರದ ರೇಲ್ವೇ ಸ್ಟೇಷನ್ ನ ಎದುರಿಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಮನೆಯ ಎದುರು ಬಂಗಾರ ಬಣ್ಣದ ಕೊತ್ತಂಬರಿಯ ರಾಶಿ ಬಿದ್ದಿರುತ್ತಿತ್ತು. ಅಲ್ಲಿ ಹಾದುಹೋಗುವಾಗ ಅದರ ಪರಿಮಳ ಹರಡಿರುತ್ತಿತ್ತು. ಸಮೃದ್ಧಿಯೆಂಬುದು ಮೈವೆತ್ತಿದ್ದಂಥ ದಿನಗಳವು. ಅಜ್ಜಂಪುರದ ಕೃಷಿ ಪದ್ಧತಿಯು ಕಾಲದಿಂದ ಕಾಲಕ್ಕೆ ಬದಲಾದ ಪರಿಯನ್ನು, ಅದರೊಂದಿಗೆ ತನ್ನ ಸ್ವಂತಿಕೆಯನ್ನು ಕಾಯ್ದಿಟ್ಟುಕೊಂಡಿರುವ ಸಂಗತಿಯನ್ನು ಅಪ್ಪಾಜಿ (ಅಪೂರ್ವ) ಇಲ್ಲಿ ದಾಖಲಿಸಿದ್ದಾರೆ. ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಬ್ಲಾಗ್ ಗೆ ಅಪಾರ ಬೆಂಬಲ ದೊರಕಿದೆ. ಇದು ಹೀಗೇ ಮುಂದುವರೆಯಲೆಂದು ಆಶಿಸುತ್ತೇನೆ. ಇಲ್ಲಿಯೇ ಇನ್ನೊಂದು ಮಾತು. ನಾನು ಪ್ರಕಟಪಡಿಸಿರುವ ನನ್ನ ಶಾಲೆಯ ಕುರಿತಾದ ಜಾಲಪುಟ ಎಸ್.ಎಸ್.ಟಿ.ಬಿ. ಹೈಸ್ಕೂಲ್ ವಾರದಿಂದ ವಾರಕ್ಕೆ ಮೆಚ್ಚುಗೆ ಗಳಿಸುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ, ಈ ಶಾಲೆಗೆ ಸೇರಿದ ಹಲವು ವಿದ್ಯಾರ್ಥಿಗಳು ರಾಜ್ಯ, ದೇಶ, ಅಂತರರಾಷ್ಟ್ರೀಯ ಸ್ಥಳಗಳನ್ನು ತಲುಪಿದ್ದಾರೆ. ಅವರಿಂದ ಪ್ರತಿವಾರ ಮೆಚ್ಚುಗೆಯ ಪ್ರತಿಕ್ರಿಯೆಗಳು ಬರುತ್ತಿವೆ. ಅವರೆಲ್ಲರಿಗೆ ನನ್ನ ಮನವಿಯೆಂದರೆ, ಈ ಬ್ಲಾಗ್ ಕೂಡ ಅಜ್ಜಂಪುರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ನಿಮ್ಮ ನೆನಪುಗಳನ್ನು ಇಲ್ಲಿ ಚಿತ್ರಸಹಿತ ದಾಖಲಿಸಲು ಕೋರುತ್ತೇನೆ. - ಶಂಕರ ಅಜ್ಜಂಪುರ ಹಿಂಗಾರು ಕಡಲೆ ಬೆಳೆ ರಾತ್ರಿ 7-8ರ ಸಮಯ. ಮಾಗಿಯ ಕಾಲ. ನಮ್ಮೂರಿನ ಚೌ...