76. ಭಾರತ ಬಿಟ್ಟು ತೊಲಗಿ - ಗೌ.ರು. ಓಂಕಾರಯ್ಯನವರ ನೆನಪುಗಳು




ಆತ್ಮೀಯ ಓದುಗರೇ,

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಕಳೆದ ಆರು ವರ್ಷಗಳ ಈ ಬ್ಲಾಗಿನ ಸಂಚಿಕೆಗಳಲ್ಲಿ ಮಧ್ಯಂತರ ಲೇಖನವನ್ನು ಪ್ರಕಟಿಸಿಲ್ಲ ಎನ್ನಬಹುದು. ಆದರೆ ಈ ವರ್ಷ, ಹಿರಿಯರೂ, ವಿದ್ಯಾಭಿಮಾನಿ ಶಿಕ್ಷಕರು, ಲೇಖಕರು, ಪುಸ್ತಕಗಳ ಪ್ರಕಾಶಕರು ಮುಂತಾಗಿ ಹಲವು ವಿಶೇಷಣಗಳಿಗೆ ನಿಜವಾಗಿ ಅರ್ಹರಾಗಿರುವ ನಮ್ಮ ತಲೆಮಾರಿನ ಗುರುಗಳಾದ ಶ್ರೀ ಗೌ.ರು. ಓಂಕಾರಯ್ಯನವರ ಲೇಖನ ನಿಮಗಾಗಿ ಇಲ್ಲಿದೆ. ಅವರು ಪ್ರಕಟಿಸಿರುವ ಎರಡು ಪುಸ್ತಕಗಳ ಚಿತ್ರಗಳಿವೆ. ವಿಶೇಷವೆಂದರೆ ಇವುಗಳಲ್ಲಿ ಒಂದಕ್ಕೆ ಅಜ್ಜಂಪುರದಲ್ಲಿದ್ದ ಗೀತಾ ಪ್ರಿಂಟರ್ಸ್ ಮಾಲೀಕರು ಹಾಗೂ ಸಾಹಿತ್ಯಾಭಿಮಾನಿ ಶ್ರೀ ಎ.ಪಿ. ನಾಗರಾಜಶೆಟ್ಟರು ಬರೆದಿರುವ ಹಿನ್ನುಡಿಯೂ ಇದೆ. ಹಾಗಾಗಿ ಇದು ಸ್ವಾತಂತ್ರ್ಯೋತ್ಸವದ ವಿಶೇಷ ಸಂಚಿಕೆ.

ಸದಾ ಹಸನ್ಮುಖ, ವಿದ್ಯಾರ್ಥಿಗಳನ್ನು ಕಂಡರೆ ಅಪರಿಮಿತ ಪ್ರೀತಿ, ದಯಾಗುಣಗಳ ಸಾಕಾರವಾಗಿರುವ ಈ ಗುರುಗಳು ಇಂದಿಗೂ ಬದಲಾಗದೇ ಹಾಗೆಯೇ ಇದ್ದಾರೆ. ಅರ್ಧ ಶತಮಾನಗಳ ನಂತರ ಮಿತ್ರ ಅಪೂರ್ವ ಬಸು ಅವರ ಮೂಲಕ ಫೋನ್ ನಲ್ಲಿ ಅವರ ಸಂಪರ್ಕ ಸಾಧ್ಯವಾದುದಕ್ಕೆ, ನನಗೆ ಅತೀವ ಸಂತೋಷವಿದೆ. 

ಇತ್ತೀಚೆಗೆ ಪ್ರಧಾನಿ ಮೋದಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಮ್ಮ ನೆನಪುಗಳನ್ನು ದಾಖಲಿಸಲು ನೀಡಿದ ಕರೆಗೆ ಸಕ್ರಿಯರಾಗಿ ಸ್ಪಂದಿಸಿರುವ ಗೌ.ರು. ಓಂಕಾರಯ್ಯನವರ ಅಮಿತ ಉತ್ಸಾಹವನ್ನು ಎಲ್ಲರೂ ಮೆಚ್ಚುತ್ತಾರೆ. ಅವರು ಈ ಸಂದರ್ಭಕ್ಕೆಂದು ಬರೆದ ಲೇಖನವನ್ನು ಅವರ ಹಸ್ತಾಕ್ಷರದಲ್ಲಿರುವಂತೆಯೇ ಪ್ರಕಟಿಸಲಾಗಿದೆ.

ಅವರನ್ನು ಸಂದರ್ಶಿಸಿ, ಚಿತ್ರ-ಮಾಹಿತಿಗಳನ್ನು ಒದಗಿಸಿದವರು ಮಿತ್ರ ಅಪೂರ್ವ ಬಸು ಅವರಿಗೆ ಕೃತಜ್ಞತೆಗಳು. 

ಶಂಕರ ಅಜ್ಜಂಪುರ
ಸಂಪಾದಕ
ಸಂಪರ್ಕ - ದೂರವಾಣಿ - 99866 72483
ಈ ಮೇಲ್ - shankarajp@gmail.com
------------------------------------------------------------------------------------------------------------------------------------------------------------------


 ಗೌ.ರು. ಓಂಕಾರಯ್ಯ
ಶ್ರೀ ಗೌ.ರು. ಓಂಕಾರಯ್ಯನವರು ನಮ್ಮೂರಿನ ಸರ್ಕಾರಿ ಕನ್ನಡ ಬಾಲಕರ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇದೇ ಕಾಲದಲ್ಲಿ ಗಿರಿಯಾಪುರದ ಗುರುಶಾಂತಪ್ಪನವರು ನಮ್ಮ ಊರಿನವರೇ ಆದ ಕ್ಷೇತ್ರಪಾಲಯ್ಯನವರು, ಎಂ.ಚಂದ್ರಪ್ಪ ಕೂಡ ನಮಗೆ ಶಿಕ್ಷಕರಾಗಿದ್ದರು. ಗೌ.ರು. ಓಂಕಾರಯ್ಯ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಇಂದಿಗೆ ೭೫ ವರ್ಷಗಳ ಹಿಂದೆ ಆ ಚಳುವಳಿ ನಡೆದದ್ದು. ಅಂಥದೊಂದು ನೆನಪನ್ನು ಹಳೆಯ ಶಿಷ್ಯರೊಡನೆ ಅವರು ಹಂಚಿಕೊಂಡರು. ಅವರಿಗೆ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮಾಣ ಪತ್ರ ಪಡೆಯುವುದೇನು ಕಷ್ಟವಿರಲಿಲ್ಲ. ತತ್ಸಂಬಂಧಿತ ಎಲ್ಲ ಸೌಲಭ್ಯಗಳನ್ನು ಪಡೆಯಬಹುದಿತ್ತು. ಆ ವಿಚಾರ ಅಂದಿಗೂ, ಇಂದಿಗೂ ಅವರ ಮನದಲ್ಲಿ ಸುಳಿದಿಲ್ಲ. ಸ್ವಪ್ರಯತ್ನ, ಸತತ ಪರಿಶ್ರಮದಿಂದ ಎಂ.ಎ., ಬಿ.ಎಡ್. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಪಿಯು ಕಾಲೇಜಿನ ಉಪನ್ಯಾಸಕರೂ ಆಗಿ ನಿವೃತ್ತರಾದರು. ಈಗ ಎಂಭತ್ತೆಂಟು ವರ್ಷ ವಯಸ್ಸು. 

ಕ್ವಿಟ್ ಚಳವಳಿ ಆಗಿ ಎಪ್ಪತ್ತೈದು ವರ್ಷಗಳಾಗಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆ ದಿನಗಳನ್ನು ನೆನಪು ಮಾಡಿಕೊಳ್ಳಲು ಕರೆಕೊಟ್ಟದ್ದರಿಂದ ಗೌ.ರು. ಓಂಕಾರಯ್ಯ ಈ ಬಗ್ಗೆ ಮೆಲುಕು ಹಾಕಿದ್ದು ಪತ್ರಿಕೆಯಲ್ಲಿ ಸುದ್ದಿಯಾಗಿದೆ. ಆ ದಿನಗಳಲ್ಲಿ ಶಾಲಾಕಿರಣ ಎಂಬ ಕೈಬರಹದ ಪತ್ರಿಕೆ ಪ್ರಕಟವಾಗುತ್ತಿತ್ತು. ಅದನ್ನು ಇಂಡಿಯನ್ ಇಂಕ್ ನಲ್ಲಿ ಬರೆಯಲಾಗುತ್ತಿತ್ತು. ನಂತರ ಗೀತಾ ಪ್ರಿಂಟರ್ಸ್ ನಲ್ಲಿ ಮುದ್ರಣವಾದಾಗ ಚೆನ್ನಾಗಿ ಮೂಡಿಬಂದಿತ್ತು. 










ಕಾಮೆಂಟ್‌ಗಳು

  1. Chandrashekar Hs ಅನುಭವಾಮೃತ ಮೆಲುಕು ಅಧ್ಬುತಾನುಭವ.

    Appaji Ajjampura
    Appaji Ajjampura fine! good coverage. Both the two appreciations were written by APN Sreshty G.R. onkarayya's books. APN's pen name was P.N. Gowtama!

    Shankar Ajjampura
    Shankar Ajjampura Great, I was wondering who this Gowtama is? You solved, great to to know!!


    Chandru Karekitte
    Chandru Karekitte ಈಗಿನ ಅಜ್ಜಂಪುರ ಹೇಗಿದೆ ನೋಡಿ

    ಪ್ರತ್ಯುತ್ತರಅಳಿಸಿ
  2. ಸ್ವಾತಂತ್ರ್ಯ ಹೋರಾಟಗಾರರೂ, ಉತ್ತಮ ಶಿಕ್ಷಕರೂ ಆದ ಗೌ.ರು.ಓಂಕಾರಯ್ಯನವರು (ಗೌರಾಪುರ ರುದ್ರಯ್ಯ ಓಂಕಾರಯ್ಯ) ನನ್ನ - ನಮ್ಮೆಲ್ಲ ಸಹಪಾಠಿಗಳ ನೆಚ್ಚಿನ ಅಧ್ಯಾಪಕರು. ಅಧ್ಯಾಪನದೊಂದಿಗೆ ಬರವಣಿಗೆ - ಸಾಹಿತ್ಯ ಪ್ರೀತಿಗಳು ಅವರ ವ್ಯಕ್ತಿತ್ವದಲ್ಲಿಯೇ ಇವೆ. ೧೯೬೩ರಲ್ಲಿ ಅವರು ಗಿ.ಪು.ಗುರುಶಾಂತಪ್ಪನವರೊಂದಿಗೆ ಸಂಪಾದಿಸಿದ, ನಮ್ಮ ಮಾಧ್ಯಮಿಕ ಶಾಲಾ-ಪತ್ರಿಕೆ "ಶಾಲಾ ಕಿರಣ" ಒಂದು ಮೈಲಿಗಲ್ಲು. ಅಪ್ಪಾಜಿ, ಮುರಳಿ ಮತ್ತು ನಮ್ಮ ಬಹುತೇಕ ಸ್ನೇಹಿತರ ಚೊಚ್ಚಲ ಬರಹಗಳು ಮತ್ತು ನಮ್ಮ ಪ್ರೀತಿಯ ಇನ್ನೋರ್ವ ಅಧ್ಯಾಪಕರಾದ ಎಂ.ಚಂದ್ರಪ್ಪನವರ ಕವಿತೆ ಎಲ್ಲ ಅಲ್ಲಿ ಅಚ್ಚಾಗಿವೆ. ಅತ್ಯಮೂಲ್ಯವಾದ ಆ "ಶಾಲಾ ಕಿರಣ" ನನ್ನ ಸಂಗ್ರಹದಲ್ಲಿದೆ. ಕೈಗೆತ್ತಿಕೊಂಡರೆ ಸಾಕು, ನೆನಪಿನ ಆ "ನಾಕ"ಕ್ಕೆ ಹೋಗಿಬಿಡುತ್ತೇವೆ.

    ನಮ್ಮ ತಂದೆ ಎ.ಪಿ.ನಾಗರಾಜ ಶ್ರೇಷ್ಠಿಯವರು, ಗೌ.ರು.ಓಂಕಾರಯ್ಯನವರ ಸಾಹಿತ್ಯದ ಅಭಿಮಾನಿಯಾಗಿದ್ದರು. ಸ್ವಾತಂತ್ರ್ಯ, ಸಮಾನತೆ, ಗಾಂಧೀವಾದಗಳ ಆದರ್ಶಲೋಕದ ಸಕಾರಾತ್ಮಕ ಮೌಲ್ಯಗಳನ್ನು ಅವರ ಸಾಹಿತ್ಯವು ಪ್ರತಿನಿಧಿಸುತ್ತದೆ, ಎನ್ನುತ್ತಿದ್ದರು.

    ನನ್ನ ಜೀವನದಲ್ಲಿ, ಗೌ.ರು.ಓಂಕಾರಯ್ಯನವರ ಇನ್ನೊಂದು "ಪಾತ್ರ" ವಿಚಿತ್ರವಾದುದು. ೧೯೬೩ರಲ್ಲಿ, ತರಗತಿಯಲ್ಲಿ ಪಾಠ ಮಾಡುವಾಗ ಕೆಫೀನ್‌ನಿಂದ - ಕಾಫಿ ಕುಡಿಯುವುದರಿಂದ ಆಗುವ ಅನಾಹುತಗಳನ್ನು ವಿವರಿಸಿದರು. ಅವರು ಕಾಫಿ ಬಿಟ್ಟು ಅದಾಗಲೇ ೧೨ ವರ್ಷಗಳಾಗಿದ್ದವು. ಓಂಕಾರಯ್ಯನವರ ಮಾತುಗಳು ಅದೆಷ್ಟು ಪರಿಣಾಮ ಬೀರಿದವೆಂದರೆ, ನಾವೆಲ್ಲ ಸಹಪಾಠಿಗಳು ಅಂದಿನಿಂದಲೇ ಕಾಫಿ ಬಿಟ್ಟುಬಿಟ್ಟೆವು. ಕಾಫಿ ಪ್ರಿಯನಾಗಿದ್ದ ನಾನೂ ಬಿಟ್ಟೆ. ಕೆಲವರೆಲ್ಲಾ ನಿಧಾನವಾಗಿ ಪ್ರಾರಂಭಿಸಿದರಾದರೂ, ನಾನು ಈಗಲೂ ಕಾಫಿ ಕುಡಿಯುವುದಿಲ್ಲ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ