ಪೋಸ್ಟ್‌ಗಳು

ಫೆಬ್ರವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

14. ಹವ್ಯಾಸಿ ರಂಗಭೂಮಿ ಕಲಾವಿದ

ಇಮೇಜ್
ಬಿ. ಎಸ್.ರಾಜಾರಾವ್ ಈ ಬ್ಲಾಗ್‌ನ್ನು ಆರಂಭಿಸುವಾಗ ಮನಸ್ಸಿನಲ್ಲಿದ್ದುದು, ಇದು ಅಜ್ಜಂಪುರದವರನ್ನು ಕುರಿತಾಗಿ ಮಾತ್ರ ಇರಬೇಕು. ಈ ನಿಲುವು ಸಂಸ್ಥೆಗಳ ಮಟ್ಟಿಗೆ ಅನ್ವಯವಾದೀತೇ ವಿನಾ ವ್ಯಕ್ತಿಗಳಿಗಲ್ಲವೆನ್ನುವುದು, ಬ್ಲಾಗ್ ಆರಂಭವಾದ  ಸ್ವಲ್ಪ ದಿನಗಳಲ್ಲೇ ಮನವರಿಕೆಯಾಯಿತು. ಏಕೆಂದರೆ, ಕೇವಲ ಸ್ಥಳೀಕರನ್ನು ಮಾತ್ರ ಪ್ರಸ್ತಾಪಿಸುತ್ತೇನೆಂದುಕೊಂಡರೆ, ಅದು ತೀರ ಪರಿಮಿತಿಗೆ ಒಳಪಟ್ಟೀತು.  ಸರ್ಕಾರಿ ನೌಕರಿ, ಉದ್ಯಮಗಳಿಗೆಂದು ಬಂದು ಸೇರಿದವರು ಕಾಲಾಂತರದಲ್ಲಿ ಸ್ಥಳೀಕರೇ ಆಗಿಹೋಗುತ್ತಾರೆ. ಇದು ಎಲ್ಲ ಊರುಗಳಲ್ಲೂ ನಡೆಯುವ ವಾಸ್ತವ. ಇದು ಈ ಕೆಳಗೆ ಪ್ರಸ್ತಾಪಿಸಿರುವ ಶ್ರೀ ರಾಜಾರಾಯರ ವಿಷಯಕ್ಕೂ ಅನ್ವಯಿಸುತ್ತದೆ. ಅವರು ಅಜ್ಜಂಪುರದ ಕೋಟೆಯ ನಿವಾಸಿಯಾಗಿದ್ದರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಮೇಸ್ತ್ರಿಯಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರು ಸೇರಿ, ಅಲ್ಲಿಯೂ ಕೆಲಸಮಾಡುತ್ತಿದ್ದರು. ರಾಜಾರಾಯರದು ಎತ್ತರದ ತೆಳುವಾದ ನಿಲುವು, ಆಕಾರಕ್ಕೂ ಧ್ವನಿಗೂ ಸಂಬಂಧವೇ ಇಲ್ಲದಂಥ ದಪ್ಪವಾದ ಗಂಡು ದನಿ, ಗುಳಿಬಿದ್ದ ಕಣ್ಣುಗಳು , ಬಡತನವೇ ಮೂರ್ತಿವೆತ್ತಂತಿದ್ದರೂ, ಉತ್ಸಾಹದಲ್ಲಿ ಕೊರತೆಯಿರಲಿಲ್ಲ. ಅದೇ ರೀತಿ ಪರೋಪಕಾರದ ಗುಣ ಕೂಡ. ೧೯೬೦ರ ದಶಕದ ಕೊನೆಯಲ್ಲಿ ನಾವು ನಾಲ್ಕಾರು ಗೆಳೆಯರು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸಿದ್ದೆವು. ಅದು ಡಿಸೆಂಬರ್ ತಿಂಗಳು. ಅದೇ ಸಮಯದಲ್ಲಿ ಅವರ ಇಲಾಖೆಯು ರಸ್ತೆಯನ್ನು ಉಪಯೋಗಿಸುವ ವಾಹನಗಳನ್ನು