124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ
ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಗೆ ಉದಾಹರಣೆಯಾಗಿ ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದರೆ ಅದು ಅಮೂಲ್ಯ ಮದ್ದು ಹೌದು ಎಂದು ತಿಳಿಯಲು, ತಿಳಿಸಲು ಸಹೃದಯತೆ ಬೇಕಾಗುತ್ತದೆ. ಅಂಥ ಸಹೃದಯ ಮನೋಭಾವದ ಮಿತ್ರ ಅಪೂರ್ವ ಅಜ್ಜಂಪುರ ಅವರು ಈ ಸಂಚಿಕೆಯಲ್ಲಿ ಅಪರೂಪದ ವಿದ್ವಾಂಸರನ್ನು ಸೂಕ್ತ ಮತ್ತು ಆಕರ್ಷಕ ಶೀರ್ಷಿಕೆಯೊಡನೆ ಪರಿಚಯಿಸಿದ್ದಾರೆ. ಅವರೇ ಅಜ್ಜಂಪುರ ಸಮೀಪದ ಗೌರಾಪುರದ. ಶ್ರೀ ಗೌ.ಮ. ಉಮಾಪತಿ ಶಾಸ್ತ್ರೀ. ಪ್ರಾಚೀನ ಗ್ರಂಥ ಸಂಪಾದನೆಯು ವಿದ್ವತ್ತನ್ನು ಬೇಡುತ್ತದೆ, ನಿಜ. ಅದೇ ಹೊತ್ತಿಗೆ ಅಂಥ ಸಾಹಿತ್ಯದಲ್ಲಿ ಆಸಕ್ತಿಯಿರುವವರಿಗೆ, ಉಮಾಪತಿಯವರಿದ್ದ ಕಾಲದಲ್ಲಿ ಈಗಿನ ಸೌಲಭ್ಯಗಳು ಇರಲಿಲ್ಲ. ಆದರೆ ಗ್ರಂಥ ಸಂಪಾದನೆಯಂಥ ಕ್ಲಿಷ್ಟಕಾರ್ಯದ ಬಗ್ಗೆ ಸಂಶೋಧಕರು ಇರುತ್ತಿದ್ದರು. ಅವರ ನೆರವು, ಮಾರ್ಗದರ್ಶನಗಳು ದೊರೆಯುತ್ತಿದ್ದ ದಿನಗಳು ಅವು. ಅದೇ ಪ್ರವೃತ್ತಿಯು ಇಂದಿಗೂ ಮುಂದುವರೆದಿರುವುದು ಅಭಿನಂದನೀಯ, ಶಾಸ್ತ್ರಿಗಳನ್ನು ಕುರಿತು ಅಧ್ಯಯನ ಮಾಡಿ ಪಿ.ಎಚ್.ಡಿ. ಪ್ರಬಂಧ ಮಂಡಿಸಿರುವ ಡಾ. ಕಾವ್ಯರ ಕೊಡುಗೆಯೂ ದೊಡ್ಡದು. ಉಮಾಪತಿ ಶಾಸ್ತ್ರಿಗಳ ಬದುಕು-ಬರಹಗಳನ್ನು ದಾಖಲಿಸುವ ಉಪಯುಕ್ತ ಕಾರ್ಯಮಾಡಿದ್ದಾರೆ. ಅವರ ಶ್ರಮ, ಆಸಕ್ತಿಗಳು ಅಭಿನಂದನೀಯ. ಅವರು ಅಜ್ಜಂಪುರ ಸಮೀಪದ ಹೊಸದುರ್ಗ ತಾಲೂಕಿನ ಜೋಡಿಶ್ರೀರಂಗಾಪುರ ಗ್ರಾಮಕ್ಕೆ ಸೇರಿದವರು. ಉಮಾಪತಿ ಶಾಸ್ತ್ರಿಗಳು ಗೌರಾಪುರದವರಾದರೂ ಅವರ ಕರ್ಮಭೂಮಿ ಉತ್ತರ ಕರ್ನಾಟಕ, ಕರ