ಪೋಸ್ಟ್‌ಗಳು

ಏಪ್ರಿಲ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜ್ಞಾನ ಭಂಡಾರ

ಇಮೇಜ್
ಅಜ್ಜಂಪುರದ ಶ್ರೀ ಸತ್ಯನಾರಾಯಣ ಶೆಟ್ಟರ ಬಗೆಗೆ ಅನೇಕ ವಿವರಗಳು ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಇಲ್ಲಿ ಅವರ ಕೃತಿ "ಜ್ಞಾನ ಭಂಡಾರ" ದ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದಕ್ಕೆ ಕಾರಣವೆಂದರೆ ಶ್ರೀ ಶೆಟ್ಟರು ಪುಸ್ತಕ ಪ್ರಕಾಶನದಲ್ಲಿ ಬಹುಶಃ ಹೆಚ್ಚು ಜನ ಯೋಚಿಸಿರಲಾರದ ಉಪಾಯವೊಂದನ್ನು ಕಾರ್ಯಗತಗೊಳಿಸುವುದಷ್ಟೇ ಅಲ್ಲದೆ, ಪ್ರಕಾಶನ ತಂತ್ರಕ್ಕೆ ಹೊಸ ಆಯಾಮವೊಂದನ್ನು ನೀಡಿದ್ದಾರೆ. ಅದೂ ಈ ಶತಮಾನದಲ್ಲಿ ಎನ್ನುವುದು ಆಶ್ಚರ್ಯಕಾರಿಯಾದುದು. ಹಿಂದೆಲ್ಲ ಶಾಲಾ ಪತ್ರಿಕೆಗಳನ್ನು ಕೈಬರಹದಲ್ಲೇ ತರುವ ಪದ್ಧತಿಯಿತ್ತು. ಅಂಥ ಕೈ ಬರಹದ ಶಾಲಾ ವಾರ್ಷಿಕ ಪತ್ರವನ್ನು ಹಿಂದಿನ ಶತಮಾನದ 60ರ ದಶಕದಲ್ಲಿ ಅಜ್ಜಂಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಎನ್. ಎಸ್. ಅನಂತರಾವ್ ಸಂಪಾದಿಸಿದ್ದರು. ಅವರು ಹಾಗೆ ಮಾಡುವಲ್ಲಿ ಅನೇಕ ಅಂಶಗಳನ್ನು ಗಮನದಲ್ಲಿರಿಸಿಕೊಂಡಿರುತ್ತಿದ್ದರು. ಮೊದಲನೆಯದು ಮುದ್ರಣ ವೆಚ್ಚವನ್ನು ಭರಿಸುವುದು ಅಂದಿನ ದಿನಗಳಲ್ಲಿ ಕಷ್ಟಕರವಾಗಿರುತ್ತಿತ್ತು. ಎರಡನೆಯದು, ಶಾಲಾ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯವನ್ನು ಚೆನ್ನಾಗಿ ಅಧ್ಯಯನ ಮಾಡಿ ಬರೆಯಬೇಕಾದ ಜವಾಬ್ದಾರಿಯನ್ನು ಹೊರಬೇಕಾಗಿದಿದ್ದುದರಿಂದ, ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಂತೆ ಇರುತ್ತಿರಲಿಲ್ಲ. ಮೂರನೆಯದಾಗಿ ಉತ್ತಮ ಹಸ್ತಾಕ್ಷರ ಹೊಂದಿಲ್ಲದ ವಿದ್ಯಾರ್ಥಿಗಳು ಕೂಡ, ಈ ಕಾರಣಕ್ಕೆಂದು ತಮ್ಮ ಬರವಣಿಗೆಯನ್ನು ಸುಧಾರಿಸಿಕೊಳ್ಳುವ ಅಗತ್ಯವ