79. ಗ್ರಾಮದೇವತೆಯ ಆಪ್ತ ಕಾರ್ಯದರ್ಶಿ - ಅಸಾದಿ
ಆತ್ಮೀಯ ಓದುಗರೇ, ಎಲ್ಲರಿಗೂ ದೀಪಾವಳೀ ಹಬ್ಬದ ಶುಭಾಶಯಗಳು. ನವರಾತ್ರಿ ಮುಗಿದಿದೆ, ದೀಪಾವಳೀ ಆರಂಭವಾಗಲಿದೆ. ನಾಡಿನ ಎರಡು ಈ ಮಹಾಪರ್ವಗಳಲ್ಲಿ ದೇವಿಯ ಆರಾಧನೆಯದೇ ಸಿಂಹಪಾಲು. ಅಕ್ಟೋಬರ್ ತಿಂಗಳ ಈ ಸಂಚಿಕೆಯಲ್ಲಿ ಶ್ರೀಮತಿ ರೋಹಿಣೀ ಶರ್ಮಾ ಇವರು ಬಹಳ ಹಿಂದೆಯೇ ದಾಖಲಿಸಿದ ಲೇಖನ ಗ್ರಾಮದೇವತೆಯ ಆಪ್ತಕಾರ್ಯದರ್ಶಿ ಅಸಾದಿ ಯನ್ನು ಪ್ರಕಟಿಸಲಾಗಿದೆ. ಮರೆಯಾದ ಒಂದು ಸಂಸ್ಕೃತಿಯ ಭಾಗವನ್ನು ಇಲ್ಲಿ ಲೇಖಕಿ ನೆನಪು ಮಾಡಿಕೊಂಡಿದ್ದಾರೆ. ಅಜ್ಜಂಪುರದಲ್ಲಿ ಅಸಾದಿಯ ಮಾತುಗಳನ್ನು ಕೇಳಿದವರು, ದೇವಿಯನ್ನು ನಿಂದಾಸ್ತುತಿಯ ಮೂಲಕ ಅರ್ಚಿಸುತ್ತಿದ್ದ ಆತನ ಭಕ್ತಿಯ ಪರಾಕಾಷ್ಠತೆಯನ್ನು ಕಂಡವರು ಇನ್ನೂ ಇದ್ದಾರೆ. ಜಾನಪದ ಸಂಪ್ರದಾಯದ ಪೂಜಾ ಪದ್ಧತಿಗಳಲ್ಲಿ ಬೈಗುಳವೇ ಅರ್ಚನೆಯ ಮಂತ್ರದಂತೆ ಇರುತ್ತಿದ್ದ ದಿನಗಳಿದ್ದವು. ಚರ್ಮದ ತಮಟೆ, ಹಲಗೆ ವಾದ್ಯಗಳನ್ನು ರಸ್ತೆಬದಿಯಲ್ಲಿ ಒಣಹುಲ್ಲಿಗೆ ಬೆಂಕಿ ಹಚ್ಚಿ ಕಾಯಿಸಿ ಬಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗ ಸಿಂಥೆಟಿಕ್ ಪ್ಲಾಸ್ಟಿಕ್ ಹಾಳೆಯ ಹೊದಿಕೆಯುಳ್ಳ ಡ್ರಮ್ ಗಳು ಬಂದಿವೆ. ಅವೂ ಅಬ್ಬರದ ನಾದವನ್ನು ಮೂಡಿಸುತ್ತವೆಯಾದರೂ, ಚರ್ಮದ ವಾದ್ಯಗಳ ಹದವಾದ ಶಬ್ದ ಮೂಡಿಬರುವುದಿಲ್ಲ. ಇದೆಲ್ಲ ಕಾಲದ ಬದಲಾವಣೆ ಮತ್ತು ಅಗತ್ಯಗಳಿರಬಹುದು. ಅವುಗಳ ನೆನಪನ್ನು ದಾಖಲಿಸಿಡಲು ಇರುವ ಈ ವೇದಿಕೆಯಲ್ಲಿ ನಿಮ್ಮ ನೆನಪುಗಳನ್ನು ಹಂಚಿಕೊಳ್ಳಬಹುದು. ಅಂಥ ಕಾರ್ಯಗಳು ನಡೆಯಲಿ ಎಂದು ಆಶಿಸುತ್ತ, ಅಜ್ಜಂಪುರದ ...