ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲೇಖಕ, ಅನುವಾದಕ, ಸಾಹಿತ್ಯ ಸಂಘಟಕ - ಸೂರಿ

ಇಮೇಜ್
ಇದು ಈ ಬ್ಲಾಗ್ ನಲ್ಲಿ ಪ್ರಕಟವಾಗುತ್ತಿರುವ ಅಜ್ಜಂಪುರ ಜಿ. ಸೂರಿಯವರನ್ನು ಕುರಿತಾದ ಮೂರನೆಯ ಲೇಖನ. ಈ ಮೊದಲೇ ಸೇರಿಸಿರುವ ಅಂಶಗಳಲ್ಲದೆ, ಸೂರಿಯವರ ಸಾಧನೆಗಳನ್ನು ಬಿಂಬಿಸುವ ಚಿತ್ರಮಾಲಿಕೆ, ಅಜ್ಜಂಪುರದ ಸಮೀಪದ ಗ್ರಾಮಕ್ಕೆ ಸೇರಿದವರಾದ ಹಿರಿಯ ಸಾಹಿತಿ ಶ್ರೀ ಗೊ.ರು. ಚನ್ನಬಸಪ್ಪನವರು ಬರೆದಿರುವ ಪರಿಚಯಾತ್ಮಕ ಬರಹ ಹಾಗೂ ಅವರ ಎಲ್ಲ ಕೃತಿಗಳನ್ನು ಕುರಿತಾದ ಮಾಹಿತಿಗಳು ಒಂದೆಡೆಯಲ್ಲಿ  ಲಭ್ಯವಾಗಿದ್ದರಿಂದ ಇದನ್ನು ಪ್ರಕಟಿಸಲಾಗಿದೆ. ಅಜ್ಜಂಪುರದ ಈ ಅನುವಾದಕ, ಲೇಖಕರ ಬಗೆಗಿನ ಪ್ರೀತಿಯಿಂದ ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ ಇದನ್ನು ಸಂಗ್ರಹಿಸಿ ನೀಡಿದ್ದಾರೆ. ಅವರು ಬ್ಲಾಗ್ ನ ಬಗ್ಗೆ ತಳೆದಿರುವ ಆಸ್ಥೆ ಮೆಚ್ಚುವಂಥದು. ಊರಿನ ಬಗ್ಗೆ ಏನೇ ಹೊಸ ಮಾಹಿತಿ ದೊರಕಿದರೂ, ಕೂಡಲೇ ನನಗೆ ಫೋನ್ ಮಾಡಿ ತಿಳಿಸುತ್ತಾರೆ, ಸ್ವತಃ ಮನೆಗೆ ಬಂದು ಮಾಹಿತಿ ಮುಟ್ಟಿಸುತ್ತಾರೆ. ಅವರಿಗೆ ಕೃತಜ್ಞತೆಗಳು.  ಅಜ್ಜಂಪುರದಲ್ಲೂ ಇತ್ತೀಚಿಗೆ ಕಂಪ್ಯೂಟರ್ ಸಾಕ್ಷರತೆ ಹೆಚ್ಚುತ್ತಿರುವುದು ತಿಳಿಯುತ್ತಿದೆ. ವಿಶೇಷತಃ ನಾನು ರಚಿಸಿರುವ ನಮ್ಮೂರಿನ ಎಸ್.ಎಸ್.ಟಿ.ಬಿ. ಪ್ರೌಢಶಾಲೆಯ ಪುಟಕ್ಕೆ ಹರಿದುಬರುತ್ತಿರುವ ಯುವಕರ ಪ್ರತಿಕ್ರಿಯೆಗಳನ್ನು ನೋಡುವಾಗ, ಅದು ತಿಳಿಯುತ್ತಿದೆ. ಹೆಚ್ಚಿನವರು ತಾವು ಪುಟವನ್ನು ಮೆಚ್ಚಿದ್ದರ ಬಗ್ಗೆ ತಿಳಿಸಿರುವರೇ ವಿನಾ, ತಮ್ಮ ನೆನಪುಗಳನ್ನಾಗಲೀ, ಅನುಭವಗಳನ್ನಾಗಲೀ ಹಂಚಿಕೊಳ್ಳುತ್ತಿಲ್ಲ. ಅಂಥ ಕಾರ್ಯ ನಡೆಯ

ಕೇಸರಿಬಾತಿನ ಮೇಲಿನ ತುಪ್ಪ, ಅಬ್ಬ ಸಾಕಾಯ್ತಪ್ಪ

ಇಮೇಜ್
ಅಜ್ಜಂಪುರ ಸೂರಿಯವರ ಬಗ್ಗೆ ಈ ಬ್ಲಾಗ್ ನಲ್ಲಿ ಒಂದು ಲೇಖನ ಪ್ರಕಟವಾಗಿದೆ. ಈ ಲೇಖನವನ್ನು  ಶಿವಮೊಗ್ಗೆಯಿಂದ ಮಾಹಿತಿಗಳನ್ನು ತರಿಸಿ,  ಅಮೆರಿಕದಿಂದ ಪ್ರಕಟಿಸುತ್ತಿರುವೆ.  ಈ ಕುರಿತು ಶ್ರೀಮತಿ ಶಾರದಾ ಅವರನ್ನು ಪ್ರಕಟಣೆಯ ಅನುಮತಿಗಾಗಿ ಕೇಳಿದಾಗ ಸಂತೋಷದಿಂದ ಒಪ್ಪಿದರು. ಅವರಿಗೆ ಕೃತಜ್ಞತೆಗಳು. ಇದನ್ನು ಪ್ರಕಟಿಸಿದ ಶಿವಮೊಗ್ಗದ ಸಂಜೆ ಪತ್ರಿಕೆ ಮಲೆನಾಡು ಮಿತ್ರದ    ಕಾರ್ಯನಿರ್ವಾಹಕ ಸಂಪಾದಕ ಶ್ರೀ ಎಸ್.ಆರ್. ಅನಿರುದ್ಧ ಇವರು ಅನುಮತಿ ನೀಡಿ ಸಹಕರಿಸಿದ್ದಾರೆ. ಅವರಿಗೂ ಕೃತಜ್ಞತೆಗಳು. ನಿನ್ನೆಯಷ್ಟೇ ಮಿತ್ರ ಅಪೂರ್ವ ಬಸು ಅವರನ್ನು ಸಂಪರ್ಕಿಸಿ, ಅಜ್ಜಂಪುರ ಜಿ. ಸೂರಿಯವರ ಚಿತ್ರಗಳು ಇದ್ದಲ್ಲಿ ಕಳಿಸಿಕೊಡಿ ಎಂದು ವಿನಂತಿಸಿದ್ದಕ್ಕೆ, ತಕ್ಷಣವೇ ಚಿತ್ರಗಳನ್ನು ಕಳಿಸಿಕೊಟ್ಟರು. ಅವರಿಗೆ ಧನ್ಯವಾದಗಳು. ಅಜ್ಜಂಪುರ ಸೂರಿ ಹೆಚ್ಚು ಕಾಲ ಕಡೂರಿನಲ್ಲಿ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಕೊಂಡಿದ್ದರು. ಸ್ಥಳೀಯ ಸಾಹಿತ್ಯಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅವರನ್ನು ನಾನು ಮುಖತಃ ಭೇಟಿ ಮಾಡಲಾಗಲಿಲ್ಲ. ಅವರ ಅನುವಾದಿತ ತೆಲುಗು ಕೃತಿಗಳನ್ನು ನೋಡಿದ್ದೆ. ಅಂತೆಯೇ ಅವರ ವ್ಯಕ್ತಿತ್ವವನ್ನು ಬಿಂಬಿಸುವಂಥ ಪರಿಚಯದ ವ್ಯಕ್ತಿಗಳು ಅಜ್ಜಂಪುರದಲ್ಲಿ ನನಗೆ ಭೇಟಿಯಾಗಲಿಲ್ಲ. ಹೀಗಾಗಿ ಅವರ ಬಗ್ಗೆ ಹೆಚ್ಚಿನ ಪರಿಚಯವೇನೂ ಇರದಿದ್ದರೂ, ನಮ್ಮ ಊರಿನವರಾಗಿ ಅವರು ಕೈಗೊಂಡ ಸಾಹಿತ್ಯಕ ಸೇವೆಯಿಂದಾಗಿ ಅಭಿಮಾನವಂತೂ ಇತ್ತು. ಇತ್ತೀಚೆಗೆ ಶಿವಮ

ಒಂದೇ ಸೂರಿನಡಿ ಮೂರು ತಲೆಮಾರಿನ ರಂಗ ಕಲಾವಿದರು

ಇಮೇಜ್
ಸಂಚಿಕೆ-64 ಆತ್ಮೀಯ ಓದುಗರೇ, ಅಮೆರಿಕಕ್ಕೆ ಇದು ನನ್ನ ಎರಡನೆಯ ಭೇಟಿ. ಇಲ್ಲಿ ಬಂದ ನಂತರವೂ ನನ್ನ ಈ ಬ್ಲಾಗ್ ಸಂಪಾದನೆಯ ಕೆಲಸ ನಿರುಮ್ಮಳವಾಗಿ ನಡೆಯುತ್ತಿದೆಯೆಂದರೆ, ಅದಕ್ಕೆ ಕಾರಣ ನನ್ನಂತೆಯೇ ಯೋಚಿಸಿ, ಕೆಲಸ ಮಾಡಬಲ್ಲ ಮಿತ್ರರ ತಂಡ. ನಾನು "ಅಮೆರಿಕದಲ್ಲಿ ಅಜ್ಜಂಪುರ" ಎಂಬ ಲೇಖನಮಾಲೆಯನ್ನು ಆರಂಭಿಸಿದೆನಾದರೂ, ಅದರಲ್ಲಿ ಅಜ್ಜಂಪುರದ ಬಗ್ಗೆ ಬರೆದದ್ದು ಕಡಿಮೆಯೇ ಎನ್ನಬೇಕು. ಆದರೆ ಅಮೆರಿಕದಲ್ಲಿ ಕುಳಿತು ಅಜ್ಜಂಪುರಕ್ಕೆ ಸಂಬಂಧಿಸಿದ ವ್ಯಕ್ತಿ, ವಿಷಯಗಳ ಮಾಹಿತಿಗಳನ್ನು ಪ್ರಕಟಿಸಲು ಈಗ ಸಾಧ್ಯವಾಗಿರುವುದು ನನ್ನ ಪ್ರೀತಿಯ ಮಿತ್ರ ಅಪೂರ್ವ ಬಸು ಅವರ ಸಹಕಾರದಿಂದ. ಅಜ್ಜಂಪುರ ಕೃಷಿಕರ ಊರಾಗಿರುವಂತೆ ಕಲಾವಿದರ ನೆಲೆಯೂ ಹೌದು. ಕಲಾ ಸೇವಾ ಸಂಘದ ಕಾರ್ಯ ಚಟುವಟಿಕೆಗಳನ್ನು ಕುರಿತಂತೆ ವಿಸ್ತಾರವಾದ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಿಂದ ಆರಂಭಿಸಿ, ಆಧುನಿಕ ರಂಗಭೂಮಿಯ ಎಲ್ಲ ಪ್ರಯೋಗಗಳೂ ಅಜ್ಜಂಪುರದಲ್ಲಿ ನಡೆಯುತ್ತವೆ. ಈ  ಸಂಚಿಕೆಯಲ್ಲಿ ಅಜ್ಜಂಪುರದ ಹೆಮ್ಮೆಯ ಕಲಾವಿದ ಶ್ರೀ ಶಿವಾಜಿರಾವ್ ಮತ್ತು ಅವರ ಮಗ ಮೋಹನರಾವ್ ಹಾಗೂ ಅವರ ಮೊಮ್ಮಗ ಉಲ್ಲಾಸ್ ಜಾಧವ್ ಇವರನ್ನು ಕುರಿತಂತೆ ವಿಸ್ತೃತ ಲೇಖನವನ್ನು ಅಪೂರ್ವ ಬಸು, ಉತ್ತಮ ಚಿತ್ರ ಸಂಗ್ರಹದೊಂದಿಗೆ ನಿಮ್ಮ ಓದಿಗೆಂದು ಇಲ್ಲಿ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಈ ಚಿತ್ರಮಾಲಿಕೆಯಲ್ಲಿ ಅಜ್ಜಂಪುರದ ಅನೇಕ ಹಿರಿಯರು ಭದ್ರಾ ನದಿಯಲ್ಲಿ ಜಳಕ ಮಾಡ

ನಮ್ಮ ಪ್ರೀತಿಯ ಲಚ್ಚು ಮಾಸ್ತರರು

ಇಮೇಜ್
ನಾನೀಗ ಅಮೆರಿಕದ ಕೊಲಂಬಸ್ ನಲ್ಲಿ ಇರುವಾಗ ನನ್ನ ಪ್ರೀತಿಯ ಹಿರಿಯ ಮಿತ್ರರಾದ ಲಚ್ಚು ಮಾಸ್ತರರು ನಿಧನರಾದ ವಿಷಯ ತಿಳಿಯಿತು. ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ  ಅವರನ್ನು ಸಂದರ್ಶಿಸದೇ ಬರುತ್ತಿರಲಿಲ್ಲ. ಆದರೆ ಇಲ್ಲಿಗೆ ಬರುವ ಮುನ್ನ ಈ ಬಾರಿ ಜೂನ್ ನಲ್ಲಿ ಅಜ್ಜಂಪುರಕ್ಕೆ ತೆರಳಿದಾಗ ಅವರನ್ನು ಭೇಟಿಮಾಡಲು ಸಾಧ್ಯವಾಗಿರಲಿಲ್ಲ. ಪ್ರತಿ ಭೇಟಿಯಲ್ಲೂ ಹೊಸ ಸಂಗತಿಗಳ ಬಗ್ಗೆ ಆಸ್ಥೆಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಅವರ ಆಸಕ್ತಿ ಮತ್ತು ಜೀವನೋತ್ಸಾಹಗಳನ್ನು ಮರೆಯಲಾಗದು. ಅವರ ಒಡನಾಟದಲ್ಲಿ ನಾನು ಕಂಡಂತೆ ಅವರನ್ನು ಇಲ್ಲಿ ಚಿತ್ರಿಸಿದ್ದೇನೆ. ಶಂಕರ ಅಜ್ಜಂಪುರ ಈ-ಮೇಲ್ : shankarajp@gmail.com ----------------------------------------------------------------------------------------------------------------------------------- ಬಂಕನಕಟ್ಟೆ ಜೋಡೀದಾರ್ ಲಕ್ಷ್ಮೀಪತಯ್ಯ ಲಕ್ಷ್ಮೀನರಸಿಂಹಯ್ಯ. ಇದು ಅವರ ಪೂರ್ಣ ಹೆಸರು. ಆದರೆ ಅವರು ಕುಟುಂಬ ವಲಯದಲ್ಲಿ “ ಲಚ್ಚು ” ಹಾಗೂ ವೃತ್ತಿ ಜೀವನದಲ್ಲಿ “ ಲಚ್ಚು ಮಾಸ್ತರ ” ರೆಂದೇ ಗುರುತಿಸಲ್ಪಟ್ಟವರು. ಅವರದು ಒಂದು ಕಾಲಕ್ಕೆ ಶ್ರೀಮಂತ ಕುಟುಂಬ. ಅವರ ಹಿರಿಯರು ತುಂಬ ಆಢ್ಯತೆಯಿಂದ ಬಾಳಿ ಬದುಕಿದವರು. ಕಾಲಾಂತರದಲ್ಲಿ ಆ ಶ್ರೀಮಂತಿಕೆಯೇನೂ ಉಳಿಯಲಿಲ್ಲವಾದರೂ, ಲಚ್ಚು ಮಾಸ್ತರರ ಜೀವನದ ಶ್ರೀಮಂತಿಕೆ ಅವರು ಬದುಕಿದ ಪರಿಯಲ್ಲಿ ಅಡಗಿತ್ತು. ಅವರೆ

ಮರೆಯಾದ ಗ್ರಾಮೀಣ ಕಸುಬು - ಹಲ್ಲೆ ಹೊಡೆಯುವವರು ಹೋದರೆಲ್ಲಿ ?

ಇಮೇಜ್
ಆತ್ಮೀಯ ಓದುಗರೇ, ಬಾಲ್ಯದ ನೆನಪುಗಳು ಯಾವಾಗಲೂ ಗಾಢ ಮತ್ತು ತೀವ್ರ. ಅದು ನೆನಪಿನ ಸಂಗ್ರಹದಿಂದ ಸುಲಭವಾಗಿ ಮಸಳಿಹೋಗದು. ನನ್ನ ಬಾಲ್ಯದಲ್ಲಿ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಗಂಟೆಗಟ್ಟಲೆ ನೋಡುತ್ತ ನಿಲ್ಲುತ್ತಿದ್ದೆ. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಈ ಕಸುಬು ಕೊನೆಯುಸಿರು ಎಳೆಯುತ್ತಿರುವ ಈ ದಿನಗಳಲ್ಲಿ  ಸ್ಮರಣೆಗೆ ಬಂದಿತು.  ನನ್ನ ಸಮಕಾಲೀನರು, ಹಿರಿಯರಿಗೆ ಇದೊಂದು ನೆನಪು ಮಾತ್ರವಾದರೆ, ಹಿಂದೆ ಹೀಗಿತ್ತು ಎಂಬ ಮಾಹಿತಿಯಾದರೂ ಕಿರಿಯರಿಗೆ ದೊರಕಲಿ ಎಂಬ ಉದ್ದೇಶದ ಈ ಬರಹ ನಿಮಗೆ ಇಷ್ಟವಾಯಿತೇ, ಬರೆದು ತಿಳಿಸಿ.  ವಂದನೆಗಳೊಡನೆ,   ಶಂಕರ ಅಜ್ಜಂಪುರ ಇ-ಮೇಲ್ - shankarajp@gmail.com --------------------------------------------------------------------------------------------------------------------------------------------------------------------------------------------- ಹಲ್ಲೆ ಅಥವಾ ಲಾಳ - ಎತ್ತುಗಳ ಪಾದರಕ್ಷೆ ಅಜ್ಜಂಪುರದಲ್ಲಿ ಮುಸಲ್ಮಾನರ ವಸತಿ ಪ್ರದೇಶವು ಹಿಂದೆ ಬ್ರಾಹ್ಮಣರು ಹೆಚ್ಚಾಗಿ ಇರುತ್ತಿದ್ದ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಪ್ರಗತಿಯ ದೃಷ್ಟಿಯಿಂದ ಹೇಳುವುದಾದರೆ, ಮುಸಲ್ಮಾನರದೇ ಹೆಚ್ಚು ಎನ್ನಬಹುದು. ಇದನ್ನೇನೂ ಅಸೂಯೆಯಿಂದ ಹೇಳುತ್ತಿಲ್ಲ. ತಮ್ಮ ಶ್ರಮ ಜೀವನ ಮತ್ತು ಸರಕಾರಗಳ ಬೆಂಬಲದ ಫಲವಾಗಿ ಅವರು ಹೊಂದಿರುವ ಅಭ

ಪರೇವು – ಉತ್ಸವಗಳ ಪರ್ವಕಾಲ

ಇಮೇಜ್
ಆತ್ಮೀಯ ಓದುಗರೇ, ಈ ಸಂಚಿಕೆಯನ್ನು ಅಮೆರಿಕದಿಂದ ಪ್ರಕಟಿಸುತ್ತಿದ್ದೇನೆ.  ಪ್ರತಿ ತಿಂಗಳು ಒಂದನೇ ದಿನಾಂಕದಂದು ಅಜ್ಜಂಪುರವನ್ನು ಕುರಿತಂತೆ ಒಂದು ಲೇಖನವನ್ನು ಪ್ರಕಟಿಸುವುದು ಕಳೆದ ಐದು ವರ್ಷಗಳ ಪರಿಪಾಠ. ನಾನು ಇಲ್ಲಿಗೆ ಬಂದು ಕೆಲವೇ ದಿನಗಳಾಗಿವೆ. ಇಲ್ಲಿ ನನ್ನೂರನ್ನು ಕುರಿತಂತೆ ಬರವಣಿಗೆಯ ಸಾಮಗ್ರಿ ಇಲ್ಲಿ ಲಭ್ಯವಾಗುವುದು ಕಷ್ಟವೇ ಸರಿ. ಹಾಗಾಗಿ ಈ ಸಂಚಿಕೆ ಎರಡು ವಾರಗಳಷ್ಟು ತಡವಾಗಿ ಪ್ರಕಟವಾಗುತ್ತಿದೆ. ಇದರಿಂದ ವ್ಯತ್ಯಾಸವೇನೂ ಆಗದು.  ಆದರೆ  ಸಾಧ್ಯವಾದ ಮಟ್ಟಿಗೂ ನಾನು ಸಂಕಲ್ಪಿಸಿದಂತೆ ಮಾಡಿಕೊಂಡು ಬಂದಿರುವೆನೆಂಬ ಸಮಾಧಾನ ನನ್ನದು. ನನ್ನಂತೆಯೇ ಈ ವಿಷಯದಲ್ಲಿ ಆಸಕ್ತಿ ತಳೆದು, ನನ್ನೊಂದಿಗೆ ಸಹಕರಿಸುತ್ತಿರುವ ಅಜ್ಜಂಪುರದ ಗೆಳೆಯರು ತಮ್ಮ ಬರಹಗಳ ಮೂಲಕ ಸಹಕಾರ ನೀಡುತ್ತಿದ್ದಾರೆ. ಅವರಲ್ಲಿ ಅಜ್ಜಂಪುರದಲ್ಲೇ ನೆಲೆಸಿರುವ ಅಪೂರ್ವ ಬಸು ಅವರನ್ನು ನಾನು ತುಂಬ ಆಶ್ರಯಿಸಿದ್ದೇನೆ. ನನಗೆ ಲೇಖನ ಸಿದ್ಧಪಡಿಸುವುದು ಸಾಧ್ಯವಾಗದ ಸಂದರ್ಭಗಳಲ್ಲಿ  ನನ್ನ ಕೋರಿಕೆಯನ್ನು ಮನ್ನಿಸಿ, ಸಾಮಯಿಕ ಸುದ್ದಿಗಳನ್ನು, ವರದಿಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವರಿಗೆ ವಂದನೆಗಳನ್ನು ತಿಳಿಸುವುದು  ಔಪಚಾರಿಕ ಮಾತ್ರ.  1960ರ ದಶಕದಲ್ಲಿ ನಡೆದ ಪರೇವಿನ ಚಿತ್ರ ನನ್ನ ಮನಃಪಟಲದಲ್ಲಿ ಮಾಸದಂತೆ ಉಳಿದಿದೆ. ಇದನ್ನು ಕುರಿತು ದಾಖಲಿಸಬೇಕೆಂಬ ಹಂಬಲ ತುಂಬ ದಿನಗಳಿಂದ ನನಗೆ ಇತ್ತು.  ಅದೀಗ ಪೂರೈಸಿದೆ. ಕೆಳಗಿನ ಸಚಿತ್ರ ವರದಿಯನ್ನು ಅಪೂರ್ವ ಬಸು