ದಯಾಮರಣ ಬೇಡುತ್ತಿರುವ ಅಮೃತಮಹಲ್ ರಾಸುಗಳು
![ಇಮೇಜ್](https://blogger.googleusercontent.com/img/b/R29vZ2xl/AVvXsEiUsy5QKKB-mh2tKU0Eos2OMoHtWhLTKhwTeFAiG0K9XJ7cLgB8rOFYiUXdprEP3zyWBHCZ0q1_SnlUzW4Jc5suBDQBwbbkPj8_zMAIrcC8te3E58DB6Vto6RE4su6tbipq73BHDjLYA9E/s640/01A.jpg)
ಆತ್ಮೀಯರೇ, ಈ ಸಂಚಿಕೆಯಲ್ಲಿ ಪ್ರಕಟವಾಗಿರುವುದು ಅಜ್ಜಂಪುರದ ಅಮೃತಮಹಲ್ ಪಶುಸಂವರ್ಧನಾ ಕೇಂದ್ರದ ಪ್ರಸ್ತುತ ಸ್ಥಿತಿ-ಗತಿ. ಇದು ಛಾಯಾಚಿತ್ರದ ನಕಲು. ಹೀಗಾಗಿ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲದಿರುವುದಕ್ಕೆ ವಿಷಾದಿಸುತ್ತೇನೆ. ಸ್ಪಷ್ಟ ಓದಿಗೆಂದು ಚಿತ್ರವನ್ನು ಸೂಕ್ತವಾಗಿ ಹಿಗ್ಗಲಿಸಿಕೊಂಡು ನೋಡಿದರೆ ಸ್ಫುಟವಾಗಿ ಕಾಣುತ್ತದೆ. ಈ ವಿಸ್ತೃತ ವರದಿಯನ್ನು ದಿನಾಂಕ 15-09-2013ರಂದು ಶ್ರೀ ಆರಗ ರವಿಯವರು ವಿಜಯ ಕರ್ನಾಟಕ ದಿನಪತ್ರಿಕೆಯ ಶಿವಮೊಗ್ಗದ ಆವೃತ್ತಿಯಲ್ಲಿ ಪ್ರಕಟಿಸಿದರು. ಈ ಕೇಂದ್ರದ ಕುರಿತಾಗಿ ಜುಲೈ 2012ರಲ್ಲಿ ಸವಿಸ್ತಾರ ವರದಿಯನ್ನು ಈ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. ಐತಿಹಾಸಿಕ ಮಹತ್ವವುಳ್ಳ ಈ ಕೇಂದ್ರದ ಹದಗೆಟ್ಟಿರುವ ಪರಿಸ್ಥಿತಿಯ ಸುಧಾರಣೆಗೆ ಸರಕಾರದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಪ್ರಯತ್ನ ಕೈಗೊಳ್ಳುವ ಆಲೋಚನೆ ಅಜ್ಜಂಪುರದಲ್ಲಿ ಬಂದಂತಿದೆ. ಜತೆಗೇ ಈ ಕೇಂದ್ರದ ಮೇಲೆ ಲೋಕಾಯುಕ್ತರು ಕ್ರಮಕ್ಕೆ ಮುಂದಾಗಿರುವ ವರದಿಗಳೂ ಬರುತ್ತಿವೆ. ಈ ಲೇಖನದ ಪುನರ್ ಪ್ರಕಟಣೆಯ ಅನುಮತಿಗೆಂದು ಮೂಲ ಲೇಖಕ ಶ್ರೀ ಆರಗ ರವಿಯವರನ್ನು ಸಂಪರ್ಕಿಸಿದ್ದಾಯಿತು. ಅವರಿಂದ ಉತ್ತರ ಬರಲಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಈ ವರದಿಯನ್ನು ಕೃಪೆ : ಚಿತ್ರ : ಶ್ರೀ ಎ.ಎನ್. ಪ್ರಸನ್ನ, ಲೇಖನ : ಶ್ರೀ ಆರಗ ರವಿ ...