ಪೋಸ್ಟ್‌ಗಳು

ನವೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

20. ನಮ್ಮ ಅಧ್ಯಾಪಕರು

ಇಮೇಜ್
ಗುರು ಸ್ಮರಣೆ  ಆತ್ಮೀಯ ಓದುಗರೇ, ಎಲ್ಲರಿಗೂ ಐವತ್ತೇಳನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಕಳೆದ ತಿಂಗಳು ಒಂದು ಲೇಖನ ಪ್ರಕಟವಾಗಿದೆ. ಇದೇ ಸರಣಿಯಲ್ಲಿ ಮುಂದುವರೆಯುತ್ತ, ೧೯೬೭-೬೯ ಸುಮಾರಿನಲ್ಲಿ ಆ ಶಾಲೆಯಲ್ಲಿದ್ದ ಕೆಲ ಅಧ್ಯಾಪಕರು ಮತ್ತು ಅವರ ವಿಶೇಷತೆಗಳ ಬಗ್ಗೆ ಒಂದು ಚಿಕ್ಕ ನೆನಪು ಇಲ್ಲಿದೆ.  ಅಜ್ಜಂಪುರದ ಪ್ರೌಢಶಾಲೆಗೆ ಆಗಿದ್ದ ಹೆಸರು ಶೆಟ್ರ ಸಿದ್ಧಪ್ಪ ತಾಲೂಕ್ ಬೋರ್ಡ್ ಹೈಸ್ಕೂಲ್. ಇದನ್ನು ಸಂಕ್ಷಿಪ್ತವಾಗಿ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು. ಈ ಶಾಲೆಗೆ ಆಧಾರವಾಗಿ ನಿಂತ ಶೆಟ್ರ ಸಿದ್ಧಪ್ಪನವರ ಬಗೆಗೂ ಈ ಹಿಂದೆ ಈ ಬ್ಲಾಗ್‌ನಲ್ಲಿ ಲೇಖನವೊಂದು ಪ್ರಕಟವಾಗಿದೆ. ಅಂತೆಯೇ ಶಾಲೆಯ ತಮ್ಮ ಸೇವಾವಧಿಯನ್ನು ಇಲ್ಲಿಯೇ ಪೂರ್ಣಗೊಳಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯರಾಗಿದ್ದ ಎನ್. ಎಸ್. ಅನಂತರಾಯರ ಕುರಿತಾದ ಲೇಖನವೂ ಪ್ರಕಟಗೊಂಡಿದೆ. ಹಿಂದಿನ ಸಂಚಿಕೆಗಳನ್ನು ಗಮನಿಸಿರದ ಓದುಗರಿಗೆಂದು ಈ ಮಾಹಿತಿ. ಈ ಕಾಲಘಟ್ಟದಲ್ಲಿ ಅನಂತರಾಯರ ಸಹೋಪಾಧ್ಯಾಯ ರಾಗಿದ್ದವರ ಕುರಿತಾದ ನೆನಪುಗಳು ಇಲ್ಲಿದೆ.  ಕನ್ನಡ ಪಂಡಿತರೆಂಬ ಪ್ರತ್ಯೇಕ ಭಾಷಾ ಅಧ್ಯಾಪಕರು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾಗಿದ್ದಾರೆ . ಆಗ ಕನ್ನಡದ ಬೋಧನೆಗೆಂದು ಇದ್ದವರು ಎಂ.ಬಿ. ಪಾರ್ಥಸಾರಥಿ ಅಯ್ಯಂಗಾರ್ಯರು. ನಾವು ಈ ಶಾಲೆಯಲ್ಲಿ ಓದುತ್ತಿದ್ದಾಗ, ಬಿ.ಎಂ.ಶ್ರೀ. ಪ್ರೊ.ಹಿರಿಯಣ್ಣ, ಪ್ರೊ. ಎ.ಎನ್. ಮ