ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಢೀಕೃತ ವರದಿ - ಭಾಗ 2
ಸಚಿವ ಟಿ . ಬಿ. ಜಯಚಂದ್ರರಿಂದ ಪರಿಸ್ಥಿತಿಯ ಪರಿಶೀಲನೆ ಈ ತಳಿ ಅಭಿವೃದ್ಧಿ ಕೇಂದ್ರಕ್ಕೆ ಅತಿ ಜರೂರಾಗಿ ಬೇಕಿರುವ ಹೆಚ್ಚುವರಿ ಸಿಬ್ಬಂದಿ, ವಾಹನಗಳು, ಪಶು ಆಸ್ಪತ್ರೆಗಳ ಆರಂಭ, ಮೇವು ಬೆಳೆಯಲು ವ್ಯವಸ್ಥೆ, ಒತ್ತುವರಿಯಾಗಿರುವ ಜಮೀನುಗಳನ್ನು ಬಿಡಿಸಿಕೊಳ್ಳುವುದು, ವಸತಿ ಗೃಹಗಳ ಪುನರ್ ನಿರ್ಮಾಣ, ಭ್ರಷ್ಟ ಕಾವಲುಗಾರ ಸಿಬ್ಬಂದಿಯ ಸುಧಾರಣೆ, ಘನೀಕೃತ ವೀರ್ಯ ಬ್ಯಾಂಕ್ ಸ್ಥಾಪನೆ ಮುಂತಾದ ಹಲವಾರು ಮುಖ್ಯ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇದಕ್ಕೆ ಸಾರ್ವಜನಿಕರ, ಸಿಬ್ಬಂದಿಯ ಬೆಂಬಲವನ್ನೂ ಕೋರಿದರು. ಇದೆಲ್ಲವೂ ಕಾರ್ಯಗತವಾಗುವವರೆಗೆ ತಾವು ಕಡೂರಿನಲ್ಲಿ ವಾಸಿಸುತ್ತ ಕಾರ್ಯಾಚರಣೆ ನಡೆಸುವುದಾಗಿಯೂ ತಿಳಿಸಿದರು. ಇದೇ ಹಂತದಲ್ಲಿ ನಿವೃತ್ತ ನಿರ್ದೇಶಕರಾದ ಡಾ. ಟಿ.ಎಸ್. ಕೃಷ್ಣಮೂರ್ತಿಯವರನ್ನು ಸಂಪರ್ಕಿಸಿ, ಅವರ ಅನುಭವದ ಬೆಳಕಿನಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಬಗ್ಗೆ ಚರ್ಚಿಸಿದರು. ಅದರಂತೆ ಡಾ. ಕೃಷ್ಣಮೂರ್ತಿಯವರೂ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಸಲಹೆಗಳನ್ನು ನೀಡಿದರು. ಇದೆಲ್ಲ ಆಗಿ ಒಂದು ತಿಂಗಳೂ ಸಂದಿರಲಿಲ್ಲ. ಡಿಸೆಂಬರ್ ವೇಳೆಗೆ, ಹೊಸದಾಗಿ ನಿಯುಕ್ತರಾಗಿದ್ದ ಡಾ. ರಾಮಚಂದ್ರರ ಕಾರ್ಯವೈಖರಿ ಬಯಲಿಗೆ ಬಂದಿತು. ಊದುವುದನ್ನು ಬಿಟ್ಟು ಬಡಿಯುವುದನ್ನು ತೆಗೆದುಕೊಂಡಂತಾಯಿತು ಸಂಸ್ಥೆಯ ಪರಿ. ಹಿಂದಿದ್ದ ಡಾ. ಸುರೇಶ್, ಅಜ್ಜಂಪುರದಲ್ಲಿಯಾದರೂ ಇರುತ್ತಿದ್ದರು. ಡಾ. ರಾಮಚಂದ್ರ ಕಡೂರಿನಿಂದ ಓಡಾಡಿಕೊಂಡು ಕಾರ್ಯ