ಪೋಸ್ಟ್‌ಗಳು

ಜುಲೈ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರದಲ್ಲಿ ಕಾರ ಹಬ್ಬದ ಸಂಪ್ರದಾಯ

ಇಮೇಜ್
ಆತ್ಮೀಯರೇ, ನಾನೀಗ ಅಮೆರಿಕೆಗೆ ಬಂದು ತಿಂಗಳಾಯಿತು. ಇನ್ನೂ ಆರು ತಿಂಗಳು ಇಲ್ಲಿಯೇ ಇರುತ್ತೇನೆ.  ಹೀಗೆ ಬರುವ ಮುನ್ನ ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಮಾಹಿತಿಯ ಕೊರತೆಯಿಂದಾಗಿ ನಿಲ್ಲಬಾರದೆಂದು ಅಪೇಕ್ಷಿಸಿ, ಓದುಗರು ತಮ್ಮ ಅನುಭವಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳಲು ಆಗೀಗ ಕೋರುತ್ತಿರುತ್ತೇನೆ. ಕೆಲವರನ್ನು ವೈಯುಕ್ತಿಕವಾಗಿಯೂ ಕೋರಿದ್ದೇನೆ. ನನ್ನ ಉದ್ದೇಶವನ್ನು ಗಮನಿಸಿ, ಬ್ಲಾಗ್ ನಿಲ್ಲಬಾರದೆಂಬ ಪ್ರೀತಿಯೊಂದಿಗೆ ಗೆಳೆಯ ಅಪ್ಪಾಜಿ (ಅಪೂರ್ವ) ಅಜ್ಜಂಪುರದ ಮಿಡಲ್ ಸ್ಕೂಲ್ ಹಿಂಭಾಗದಲ್ಲಿರುವ ಕರಿ ಕಲ್ಲುಗಳ ಬಗ್ಗೆ ಲೇಖನವನ್ನು ಕಳಿಸಿದ್ದಾರೆ. ನಾನು ಬಾಲ್ಯದಲ್ಲಿ ಇವುಗಳನ್ನು ನೋಡಿದಾಗ, ಅವು ನೆಲದಿಂದ ನಾಲ್ಕು ಅಡಿಗಳ ಎತ್ತರವಿರುವಂತೆ ಕಾಣುತ್ತಿದ್ದವು. ಬಾಲ್ಯ ಸಹಜ ಕುತೂಹಲದಿಂದ ಈ ಕಲ್ಲುಗಳನ್ನು ಇಲ್ಲೇಕೆ ನಿಲ್ಲಿಸಿದ್ದಾರೆ ಎಂದು ಕೇಳಿದ್ದಕ್ಕೆ, ಕೆಲವು ಹಿರಿಯರು ಅವು ಊರ ಬಾಗಿಲಿನ ಸಂಕೇತವೆಂದೂ, ಕೋಟೆಯ ಆರಂಭದಲ್ಲೇ ಇರುವದರಿಂದ ಅವಗಳಿಗೆ ಬಲಿ ನೀಡುವ ಪದ್ಧತಿಯೂ ಇದ್ದಿರಬಹುದೆಂದು, ತಮಗೆ ತಿಳಿದ, ತಾವು ಊಹಿಸಿದ ಸಂಗತಿಗಳನ್ನು ತಿಳಿಸಿದ್ದು ನೆನಪಿದೆ. ಆದರೆ ಅವಾವೂ ಅಲ್ಲ, ಅವು ಕೃಷಿ ಚಟುವಟಿಕೆಯ ಆರಂಭಕ್ಕೆ ಪೂಜಿಸಲಾಗುವ ಸಾರ್ವಜನಿಕ ಕುರುಹು ಎಂದೂ, ಅವಕ್ಕೆ ಪ್ರತಿವರ್ಷ ನಡೆಯುವ ಪೂಜಾ ಸಂಪ್ರದಾಯಗಳ ವಿವರಗಳನ್ನು ಇಲ್ಲಿ ನೀಡಿದ್ದಾರೆ.  ಈ ಆಚರಣೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲ...