ಪೋಸ್ಟ್‌ಗಳು

ಜೂನ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

87. ಬಂಗಾರದ ಭರವಸೆ ಹುಟ್ಟಿಸುವ ಹಣ್ಣೆ ಗುಡ್ಡ

ಇಮೇಜ್
ಪರ್ವತರಾಯನ ಕೆರೆಯ ದಂಡೆಯ ಮೇಲಿನಿಂದ ಕಾಣುವ ಹಣ್ಣೆಗುಡ್ಡದ ದೃಶ್ಯ 87ನೇ ಲೇಖನವಾಗಿ ಹೊರಬರುತ್ತಿರುವ ಜೂನ್ ತಿಂಗಳ ಈ ಸಂಚಿಕೆಯನ್ನು ಅಮೆರಿಕಾದಿಂದ ಪ್ರಕಟಿಸುತ್ತಿದ್ದೇನೆ. ನಾನು ಊರಿನಲ್ಲಿರುವಾಗ ಬ್ಲಾಗ್ ಗೆಂದು ಮಾಹಿತಿ ಸಂಗ್ರಹಿಸುವುದು ಸುಲಭವಾಗಿರುವಂತೆಯೇ, ಅಮೆರಿಕಾದಲ್ಲಿ ಕುಳಿತೂ ಆ ಕೆಲಸ ಮಾಡಬಹುದು. ಮುಂದುವರೆದ ತಂತ್ರಜ್ಞಾನದ ನೆರವಿನಿಂದ, ಮಿತ್ರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಹಾಗೆ ನೆರವಾದವರು ಆರ್ಯಮಿತ್ರ. ಭಾರತದಲ್ಲಿ ನನ್ನ ಅನುಪಸ್ಥಿತಿಯ ಕಾಲಕ್ಕೆ ಮಾಹಿತಿ-ಚಿತ್ರಗಳನ್ನು ಒದಗಿಸಿ, ಈ ಲೇಖನ ಮಾಲೆ ಮುಂದುವರೆಯಲು ನೆರವಾಗಬೇಕು ಎಂಬ ಕೋರಿಕೆಗೆ ಸ್ಪಂದಿಸಿ, ಮೂರು-ನಾಲ್ಕು ಲೇಖನಗಳನ್ನು ಕಳಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ನಿಮ್ಮಲ್ಲಿ ಯಾರಿಗಾದರೂ ಈ ಬಗೆಯಲ್ಲಿ ನೆರವು ನೀಡಬಹುದೆಂದರೆ,  ಕೈಬರವಣಿಗೆಯಲ್ಲಿ ಲೇಖನ ಬರೆದು, ಅದರ ಚಿತ್ರ ತೆಗೆದು, ಲೇಖನಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಅದನ್ನು  ನನ್ನ ವಾಟ್ಸಾಪ್ ನಂಬರಿಗೆ ಕಳಿಸಲು ವಿನಂತಿ. ಕೆಲವು ತಿಂಗಳ ಹಿಂದೆ ಈ ಬ್ಲಾಗ್ ನಲ್ಲಿ ಅಜ್ಜಂಪುರದ ಸಮೀಪವಿರುವ ಪುಟ್ಟ ಗ್ರಾಮ ಹಣ್ಣೆಯಲ್ಲಿರುವ ಹೊಯ್ಸಳ ದೇಗುಲದ ಬಗ್ಗೆ ಪರಿಚಯಿಸಲಾಗಿತ್ತು. ಈ ಗ್ರಾಮದ ಸಮೀಪವೇ ಇರುವ ಗುಡ್ಡಕ್ಕೆ ಹಣ್ಣೆಗುಡ್ಡವೆಂಬ ಹೆಸರಿದೆ.  ಅಜ್ಜಂಪುರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಈ ಗುಡ್ಡದೊಂದಿಗೆ ನಂಟು ಇದೆ. ಪ್ರತಿವರ್ಷ ನಡೆಯುವ ಪರೇವು, ಮಳೆಗೆಂದು ಪ್ರಾರ್ಥನೆ ಸಲ್ಲಿಸುವಾಗ ನ