ಪೋಸ್ಟ್‌ಗಳು

ಮೇ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ

ಇಮೇಜ್
ಅತ್ಮೀಯ ಓದುಗರೇ, ಅಜ್ಜಂಪುರದ ಇತ್ತೀಚಿನ ಯುವ ಸಾಧಕರನ್ನು ಕುರಿತು ಪರಿಚಯಿಸುವ ಆಶಯವಿದೆಯಾದರೂ, ಹಿರಿಯರ ಬಗ್ಗೆ ಬರೆಯುವುದು, ತಿಳಿಯಬೇಕಾದುದು ಇನ್ನೂ ಇದೆಯೆನ್ನುವುದು ಕೂಡ ಸಂತಸದ ಸಂಗತಿಯೇ ಸರಿ. ಹೀಗಾಗಿ, ಈ ಸಂಚಿಕೆಯಲ್ಲಿ ಅಜ್ಜಂಪುರದ ಸಭ್ಯ, ಸರಳ ರಾಜಕಾರಣಿ ಮತ್ತು ಶಿಕ್ಷಕರಾದ ಶ್ರೀ ಪಿ. ತಿಪ್ಪಯ್ಯನವರನ್ನು ಕುರಿತ ಲೇಖನವಿದೆ. ಇದನ್ನು ಯುವ ಮಿತ್ರ ಮಲ್ಲಿಕಾರ್ಜುನ ಅಜ್ಜಂಪುರ ಅವರು ತಿಪ್ಪಯ್ಯನವರ ಪುತ್ರ ಶ್ರೀ ಉಮಾಶಂಕರ್ ಅವರನ್ನು ಸಂಪರ್ಕಿಸಿ, ವಿವರಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ. ಅವರ ಆಸಕ್ತಿ ಹೆಚ್ಚಿನದು. ಇದೇ ರೀತಿ ಓದುಗ ಬಳಗದಲ್ಲಿರುವ ಮಿತ್ರರು ತಮ್ಮ ಗಮನಕ್ಕೆ ಬರುವ ವಿಶೇಷ ಸಂಗತಿಗಳನ್ನು. ನೆನಪುಗಳನ್ನು ಹಂಚಿಕೊಳ್ಳಲು ಕೋರುತ್ತೇನೆ.  -ಶಂಕರ ಅಜ್ಜಂಪುರ ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ ಇಂದು ಸಾಹಿತಿಗಳು ರಾಜಕಾರಣಕ್ಕೆ ಬರಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಹಿತಿಗಳು ರಾಜಕೀಯಕ್ಕೆ ಬಂದರೆ , ರಾಜಕಾರಣವು ಕೆಡುವುದಕ್ಕಿಂತ , ಸಾಹಿತಿಗಳು ಕೆಟ್ಟು ಹೋಗುತ್ತಾರೆ ಎಂಬ ಕಾಳಜಿ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಅವರು ದೂರವಿದ್ದರೆ ಒಳಿತು ಎಂಬ ಭಾವ ಸಮಾಜದಲ್ಲಿ ನೆಲೆ ನಿಂತಿದೆ.   ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗುವುದಕ್ಕಿಂತ ಮುಂಚೆ ಉಪನ್ಯಾಸಕ ರಾಗಿದ್ದವರು.   ಶಿಕ್ಷಣ ಕ್ಷೇತ್ರದಲ್ಲಿದ್ದ    ಅವರು ಸಕ್ರಿಯ ರಾಜಕಾರಣದಲ್ಲಿ ಭಾ