ಪೋಸ್ಟ್‌ಗಳು

ಜನವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಂದಹಾರ್ ವಿಮಾನ ಅಪಹರಣ : ಎ. ಆರ್ . ಘನಶ್ಯಾಮ್ ರ ಕಾರ್ಯ ಚಟುವಟಿಕೆಯ ರೋಚಕ ವಿವರಗಳು

ಇಮೇಜ್
" ಆತ್ಮೀಯ ಓದುಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು "  ೧೯೯೯ರ ಡಿಸೆಂಬರ್ ನಲ್ಲಿ ಕಂದಹಾರ್ ನ ವಿಮಾನ ಅಪಹರಣದ ಪ್ರಕರಣ ಹಲವರಿಗೆ ನೆನಪಿರಬಹುದು.  ಈ ಘಟನೆ ನಡೆದು ಇಂದಿಗೆ ಸರಿಯಾಗಿ ೧೩  ವರ್ಷಗಳು ಸಂದಿವೆ.   ಆಗ ಭಾರತೀಯ ವಿಮಾನ ಐಸಿ ೮೧೪ನ್ನು ಉಗ್ರರು ಅಪಹರಣ ಮಾಡಿ, ಅದರಲ್ಲಿದ್ದ ವಿಮಾನ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಉಗ್ರರು ಸಂಧಾನಕ್ಕೆ ಕರೆನೀಡಿದಾಗ, ಅದನ್ನು ಧೈರ್ಯದಿಂದ ಸ್ವೀಕರಿಸಿ ಅವರೊಂದಿಗೆ ಮಾತುಕತೆಯಾಡಲು ಯಾವ ರಾಜಕೀಯ ನಾಯಕರೂ ಮುಂದೆ ಬರಲಿಲ್ಲ. ಆಗ ಶ್ರೀ ಘನಶ್ಯಾಮ್ ತಾವಾಗಿಯೇ ಮುಂದುವರೆದು ಉಗ್ರರೊಂದಿಗೆ ಮಾತುಕತೆಯಾಡಲು ಭಾರತ ಸರಕಾರದ ಪರವಾಗಿ ಹೊರಟರು. ತಮ್ಮ ಗುರಿಯಲ್ಲಿ ಯಶಸ್ವಿಯಾಗಿ ಇನ್ನೂರು ಮಂದಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರುಮಾಡಿದ ಕೀರ್ತಿ ಘನಶ್ಯಾಮ್ ರಿಗೆ ಸಲ್ಲುತ್ತದೆ.  ಈ ಸಂದರ್ಭದಲ್ಲಿ ಅಂದಿನ ರಕ್ಷಣಾ ಮಂತ್ರಿಯಾಗಿದ್ದ ಜಸವಂತ ಸಿಂಗರು ಬರೆದಿರುವ " A Call to Honor" ಪುಸ್ತಕದಲ್ಲಿ  ಘನಶ್ಯಾಮ್ ರ ಕೊಡುಗೆಯನ್ನು ಉಲ್ಲೇಖಿಸಿದ್ದಾರೆ.  ಉಗ್ರರೊಂದಿಗಿನ ಅವರ ರೋಚಕ ಅನುಭವದ ವಿವರಣೆಯ ಕನ್ನಡ ಅನುವಾದವನ್ನು  ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದೇನೆ.  -ಶಂಕರ ಅಜ್ಜಂಪುರ  ದೂರವಾಣಿ : 99866 72483 ---------------------------------------------------------------------------