ಪೋಸ್ಟ್‌ಗಳು

ಮಾರ್ಚ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

70. ಅಜ್ಜಂಪುರದ ಶ್ರೀ ಕೋಟೆ ಆಂಜನೇಯ ದೇವಾಲಯ

ಇಮೇಜ್
ಆತ್ಮೀಯರೇ, ಅಜ್ಜಂಪುರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕಗಳು ಜರುಗಿ ಸರಿಯಾಗಿ ಒಂದು ದಶಕದ ನಂತರ ಈ ಲೇಖನ ಪ್ರಕಟವಾಗುತ್ತಿದೆ. , ನಾನು ಮತ್ತು ನನ್ನ ಪರಿವಾರ ನನ್ನ ಸ್ವಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ದೊರೆತಿತ್ತು. ದಶಕದ ನಂತರವೂ ದೇವಾಲಯಕ್ಕೆ ಆಗಮಿಸುವ ಭಕ್ತರು, ನಡೆಯುವ ಕಾರ್ಯಕ್ರಮಗಳಲ್ಲಿ ವೃದ್ಧಿಯಾಗಿರುವುದು ಸಂತೋಷದ ಸಂಗತಿ.  ಕುಂಭಾಭಿಷೇಕದ ಸಂದರ್ಭದಲ್ಲಿ ಎಲ್ಲ ಚಿತ್ರಗಳನ್ನೂ ನನ್ನ ಮಗಳು ಚಿ.ಸೌ. ರಮ್ಯಾ ನವೀನ್ ಸೆರೆಹಿಡಿದಿದ್ದಳು. ಅದನ್ನು ಸಂಗ್ರಹಿಸಿದ್ದರಿಂದ ಆ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಾಗಿದೆ. ಇದಲ್ಲದೆ ಹಳೆಯ ಚಿತ್ರಗಳೂ ಈ ಸಂಕಲನದಲ್ಲಿವೆ.  ಇದೇ ಸಂದರ್ಭದಲ್ಲಿ ಆಗಮಿಸಿದ್ದ ತರೀಕೆರೆಯ ಹಿರಿಯ ಖ್ಯಾತ ಪತ್ರಕರ್ತ ಶ್ರೀ ಅಂಚೆ ನಾಗಭೂಷಣರು ಅಜ್ಜಂಪುರದ ಬಗ್ಗೆ ದಾಖಲಾತಿಯ ಕಾರ್ಯವನ್ನು ಯಾರಾದರೂ ಕೈಗೊಳ್ಳಬೇಕಾಗಿದೆ ಎಂದು ಸೂಚಿಸಿದ್ದರು. ಅದಕ್ಕೆ ನಾನು ಪ್ರತಿಕ್ರಿಯಿಸಿ, ಅದನ್ನು ಮಾಡುತ್ತೇನೆ ಎಂದು ಹೇಳಿದ್ದೆ. ಮುದ್ರಣ ಮಾಧ್ಯಮವು ತುಂಬ ದುಬಾರಿ ಹಾಗೂ ನಿರ್ವಹಿಸಲಾಗದ್ದು ಎಂದು ಭಾವಿಸಿದ್ದರಿಂದ, ಇಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಬಿಸುವುದು ಅನಿವಾರ್ಯವಾಯಿತು. ತತ್ಫಲವಾಗಿ  ಈ ಬ್ಲಾಗ್ ಅಂತರಜಾಲದಲ್ಲಿ ಅಜ್ಜಂಪುರ ಮೂಡಿಬರಲು ಸಾಧ್ಯವಾಯಿತು.  70ನೇ ಸಂಚಿಕೆಯಾಗಿ ಬಂದಿರುವ ಈ ಲೇಖನವು ಸ್ಥಳೀಯ ಹಾಗೂ ಹೊರ ಊರು