22. ಅಜ್ಜಂಪುರದ ಒಂದು ಕೌಟುಂಬಿಕ ಸಮಾವೇಶ
ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು ಸರಿಯಾಗಿ ವರ್ಷದ ಹಿಂದೆ ಬೆಂಗಳೂರಿನ ಯಶವಂತಪುರದಲ್ಲಿರುವ ಗಾಯತ್ರೀ ದೇವಾಲಯದಲ್ಲಿ ಅಜ್ಜಂಪುರಕ್ಕೆ ಸೇರಿದ ಹಿರಿಯ ದಂಪತಿಗಳ ಸ್ಮರಣಾರ್ಥ ಕಾರ್ಯಕ್ರಮವೊಂದು ನಡೆಯಿತು. ಅಜ್ಜಂಪುರಕ್ಕೆಂದೇ ಮೀಸಲಾದ ಈ ಬ್ಲಾಗ್‌ನಲ್ಲಿ ಇದರಲ್ಲಿ ಭಾಗವಹಿಸಿದ ಯಾರೂ ಬರೆಯಬಹುದಿತ್ತು. ಅದು ನಡೆದ ಅಲ್ಪಕಾಲದಲ್ಲೇ ಇದರ ವರದಿಯನ್ನು ಪ್ರಕಟಿಸಬಹುದಿತ್ತು. ಆದರೆ ಆ ಕೆಲಸ ನಡೆಯಲಿಲ್ಲವಾಗಿ, ಅದನ್ನಿಲ್ಲಿ ಈಗ ಪ್ರಸ್ತಾಪಿಸುತ್ತಿರುವೆ. ಇದನ್ನೊಂದು ಆಕ್ಷೇಪವೆಂದು ತಿಳಿಯುವ ಅಗತ್ಯವಿಲ್ಲ. ಊರಿಗೆ ಸಂಬಂಧಿಸಿದಂತೆ, ಇಂಥ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅವುಗಳ ಕಿರುವರದಿಗಳು ಬ್ಲಾಗ್‌ನಲ್ಲಿ ಪ್ರಕಟವಾಗುವಂತಾದರೆ, ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎನ್ನುವುದಷ್ಟೇ ಆಶಯ. ಈ ಕಾರ್ಯಕ್ರಮವನ್ನು ಆಯೋಜಿಸಿದವರು, ಅಜ್ಜಂಪುರದ ಶ್ರೀಮತಿ ಪುಟ್ಟಮ್ಮ ಮತ್ತು ಶ್ರೀ ಶಂಕರಭಟ್ಟರ ಕುಟುಂಬದವರು. ಇವರು ಅಜ್ಜಂಪುರದ ಮಾಜಿ ಪುರಸಭಾಧ್ಯಕ್ಷ ಶ್ರೀ ಸೀತಾರಾಮಭಟ್ಟರ ತಂದೆ ತಾಯಿಗಳು. ಬೆಂಗಳೂರಿನ ಖ್ಯಾತ ಮುದ್ರಣ ಉದ್ಯಮಿ ಪಯೋನಿಧಿ ಪ್ರಿಂಟರ್ಸ್‌ನ ಮಾಲಿಕರಾದ ಶ್ರೀ ವೆಂಕಟರಾಮಯ್ಯನವರು ಇವರನ್ನು ಕುರಿತಂತೆ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಮಾಡಿದರು. ಇದರ ಆಯ್ದ ಭಾಗಗಳನ್ನು ಮುಂದೆ ಪ್ರಕಟಿಸುವ ಉದ್ದೇಶವಿದೆ. ಅತ್ಯಂತ ಸುಂದರವಾಗಿ ಆಯೋಜಿತವಾಗಿದ್ದ ಈ ಕುಟುಂಬದ ಸಮಾವೇಶ