ಪೋಸ್ಟ್‌ಗಳು

ಜುಲೈ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

100. ಅಜ್ಜಂಪುರ ಕ್ಷೇತ್ರಪಾಲಯ್ಯ ಮೇಷ್ಟ್ರು – ಕೆಲವು ನೆನಪುಗಳು

ಇಮೇಜ್
ಈ ಲೇಖನವು ಈ ಮಾಲಿಕೆಯಲ್ಲಿ ನೂರನೆಯದು. 2011ರ ಅಗಸ್ಟ್ 8ರಂದು ಆರಂಭವಾದ ಈ ಮಾಲಿಕೆಗೆ ಇದೀಗ ಎಂಟು ವರ್ಷಗಳು. ಪ್ರತಿ ತಿಂಗಳ ಒಂದನೇ ದಿನಾಂಕ ದಂದು ಒಂದು ಲೇಖನ ಪ್ರಕಟಿಸುತ್ತ ಬಂದಿದ್ದಾಗಿದೆ. ನನ್ನೂರಿಗೆ ಸಂಬಂಧಿಸಿದಂತೆ ಇದೊಂದು ಕಾರ್ಯ ಸಾಧ್ಯವಾಗಿದ್ದಕ್ಕೆ ಹಲವರ ಬೆಂಬಲವೇ ಕಾರಣ.  ಈ ಹಿಂದೆ ಹೇಳಿದಂತೆ ಮುಂದಿನ ಸಂಚಿಕೆಗಳಿಗೆ ನಿಗದಿಯಿರದು. ವಿಷಯ, ಅವಕಾಶಗಳು ದೊರೆತಂತೆ ಲೇಖನಗಳು ಪ್ರಕಟವಾಗುತ್ತವೆ. ಇದುವರೆಗಿನ ಎಲ್ಲ ಸಂಚಿಕೆಗಳಿಗೂ, ನಾನು ಕೋರಿದಾಗಲೆಲ್ಲ ಲೇಖನಗಳನ್ನು ಬರೆದುಕೊಟ್ಟು, ಈ ಮಾಲಿಕೆಯ ಸಾತತ್ಯವನ್ನು ಕಾಯ್ದುಕೊಂಡು ಬರಲು ನೆರವಾದ ಎಲ್ಲರಿಗೂ ನಾನು ಅತ್ಯಂತ ಕೃತಜ್ಞ. ಇನ್ನು ಮುಂದೆಯೂ ನಿಮ್ಮ ನೆರವಿನ ಅಗತ್ಯ ಇದ್ದೇ ಇರುತ್ತದೆ. ನೂರು ಎಂಬುದೊಂದು ಘಟ್ಟ ಎಂಬ ಕಾರಣಕ್ಕಾಗಿಯಷ್ಟೇ ಈ ಸ್ಮರಣೆ. ಅಂತೆಯೇ ಓದುಗರಿಗೂ ಸಹ. ನನ್ನ ತಂದೆ ಶ್ರೀ ಅಜ್ಜಂಪುರ ಕ್ಷೇತ್ರಪಾಲಯ್ಯನವರನ್ನು ಕುರಿತಂತೆ ಮಿತ್ರ ಅಪ್ಪಾಜಿಯವರ ಸ್ಮರಣೆ ಇಲ್ಲಿದೆ. ಅಂತೆಯೇ ನಿಮ್ಮಲ್ಲೂ ಅನೇಕರಿಗೆ ಅವರ ಪರಿಚಯ, ಸಹವಾಸಗಳು ದೊರಕಿದ್ದಿರಬಹುದು. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ನಮೂದಿಸಲು ಕೋರುವೆ.  ----------------------------------------------------------------------------------------------------------------------------------------------------------------- ನನ್ನ ತಂದೆಯ ನೆನಪಿನಲ್ಲಿ............