ಪೋಸ್ಟ್‌ಗಳು

ಫೆಬ್ರವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

83. ಅಪರೂಪದ ಕಲಾವಿದ ದಂಪತಿ – ಉರುಮೆ ವಾದ್ಯ ಕಲಾವಿದ ರಾಮದಾಸಪ್ಪ, ಜಾನಪದ ಗಾಯಕಿ ಕಮಲಮ್ಮ

ಇಮೇಜ್
ಆತ್ಮೀಯ ಓದುಗರೇ, ಅಜ್ಜಂಪುರದ ಹಿಂದುಳಿದ ವರ್ಗದ ಸಮಾಜವೊಂದರ ಸಾಧನೆಗಳು, ಕಲೆ ಮತ್ತು ಸಂಸ್ಕೃತಿಗಳಿಗೆ ನೀಡಿರುವ ದೇಣಿಗೆಯ ವಿವರಗಳು ಈ ಸಂಚಿಕೆಯಲ್ಲಿದೆ. ಈ ಬರಹವನ್ನು ಆಪ್ತವಾಗಿ ನಮಗೆ ಸಂಗ್ರಹಿಸಿಕೊಟ್ಟವರು ಪ್ರೀತಿಯ ಮಿತ್ರ ಅಪೂರ್ವ ಬಸು.  ಅವರು ಲೇಖನದಲ್ಲಿ ಹೇಳಿರುವಂತೆ ಚೆಲುವಾದಿಗರ ಬೀದಿಯೆಂದರೆ ಚೆಲುವಿನ ಬೀದಿಯೆನ್ನಿಸುವಂತಿದ್ದುದು ದಿಟವೇ ಸರಿ. ಸಾರಿಸಿದ ಕಪ್ಪು ನೆಲದ ಮೇಲಿನ ಬಿಳಿಯ ರಂಗೋಲಿ, ಬೀದಿಯುದ್ದಕ್ಕು ಎದ್ದು ಕಾಣುವಂತಿದ್ದ ಸ್ವಚ್ಛತೆ ಇಂದಿಗೂ ನೆನಪಿನಿಂದ ಮರೆಯಾಗಿಲ್ಲ. ಸ್ವಯಂ ಪ್ರೇರಿತರಾಗಿ ಶಿಸ್ತು, ವಿದ್ಯಾಭ್ಯಾಸಕ್ಕೆ ಗೌರವ, ಪರಿಶ್ರಮಗಳ ಮೌಲ್ಯದಿಂದ ಮೇಲೆದ್ದುಬಂದ ಈ ಸಮಾಜದ ಹಿರಿಯರ ಕೊಡುಗೆ ನಾಡಿಗೆ ಸಾಕಷ್ಟಿದೆ.  ಇದರಲ್ಲಿ ಶಾಸಕ ಶ್ರೀ ತಿಪ್ಪಯ್ಯನವರ ಕೊಡುಗೆಯನ್ನು ಈಗಾಗಲೇ ಸ್ಮರಿಸಿದ್ದಿದೆ. ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಶ್ರೀ ಘನಶ್ಯಾಮರ ಸಾಹಸವನ್ನು ಹಿಂದಿನ ಸಂಚಿಕೆಯಲ್ಲಿ ದಾಖಲಿಸಲಾಗಿದೆ. ಶ್ರೀ ಪುಟ್ಟರಂಗಪ್ಪ ಎಂಬ ಹಿರಿಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರರಾಗಿದ್ದವರು. ಅವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಯತ್ನಿಸಿದಲೂ, ಅದಿನ್ನೂ ಸಫಲವಾಗಿಲ್ಲ. ಈ ಸಂಚಿಕೆಯನ್ನು ಓದಿದವರಲ್ಲಿ ಯಾರಿಗಾದರೂ, ಅವರ ಸಾಧನೆಗಳ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸಲು ಕೋರುತ್ತೇನೆ. ಅಜ್ಜಂಪುರದಲ್ಲೇ ಇದ್ದುಕೊಂಡು ಕಲೆ ಮತ್ತು ಸಂಸ್ಕೃತಿಗಳಿಗೆ ಕೊಡುಗೆ ನೀಡುತ್ತಿರುವ