ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

25. ಕೋಟೆಯ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯ

ಇಮೇಜ್
ದೇವಾಲಯದ ಹೊರನೋಟ  ನಮ್ಮ ಊರಿನಲ್ಲಿ ಸುಮಾರು ಇಪ್ಪತ್ತಾರು ದೇವಾಲಯಗಳಿವೆಯೆಂದು ಒಮ್ಮೆ ಲೆಕ್ಕ ಹಾಕಿದ ಅಂದಾಜು. ಈ ಮೊದಲು ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ.  ಶ್ರೀ ಪ್ರಸನ್ನ ಸೋಮೇಶ್ವರ  ಅಜ್ಜಂಪುರದ ಕೋಟೆಯಲ್ಲಿ ಶ್ರೀ  ಪ್ರಸನ್ನ ಸೋಮೇಶ್ವರ  ದೇವಾಲಯವಿದೆ. ಅದು ಹೊರಗಿನಿಂದಲೇ ಏಕೆ, ಒಳಗಿನಿಂದಲೂ ಆಕರ್ಷಕವಾಗಿ ಕಾಣುವುದಿಲ್ಲ. ಹಿಂದೊಂದು ಕಾಲಕ್ಕೆ ಅಲ್ಲೊಂದು ಹಳೇ ಮಾದರಿಯ ಶಿವಮಂದಿರವಿದ್ದಿರಬೇಕು. ಏಕೆಂದರೆ ಈಗಿರುವ ರಚನೆಯಷ್ಟನ್ನೇ ನೋಡಿದರೆ, ಅದು ಪುನರ್ನಿರ್ಮಿತವಾದುದೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಆರೆಂಟು ದಶಕಗಳ ಹಿಂದೆ    ಕೋಟೆಯಲ್ಲಿ ಬ್ರಾಹ್ಮಣ್ಯವು ಚೆನ್ನಾಗಿಯೇ ಇತ್ತು. ಸಾಂಪ್ರದಾಯಿಕ ಪೂಜೆ-ಪುರಸ್ಕಾರಗಳು ಧಾರಾಳವಾಗಿ ನಡೆ ಯುತ್ತಿತ್ತು. ಮಳೆ ಬಾರದ ಬರಗಾಲದ ದಿನಗಳಲ್ಲಿ ಗರ್ಭಗುಡಿಯಲ್ಲಿನ ಶಿವ ಲಿಂಗಕ್ಕೆ ಕಟ್ಟೆ ಕಟ್ಚಿ ದೂರದ ಬಾವಿಗಳಿಂದ ನೀರು ತಂದು ರುದ್ರಾಭಿಷೇಕ ಮಾಡುತ್ತಿದ್ದರು. ಹಾಗೆಯೇ ನಂತರ ಸಮೃದ್ಧ ಮಳೆಯಾದ ಬಗ್ಗೆ ಹಿರಿಯರು ಮಾತನಾಡುತ್ತಿದ್ದುದನ್ನು ಕೇಳಿದ್ದೇನೆ. ದೇವಾಲಯಕ್ಕೆ ಮುಖಮಂಟಪ ಮತ್ತು ಗರ್ಭಗುಡಿಗಳು ಮಾತ್ರವೇ ಇತ್ತು. ನಂತರ ಅದಕ್ಕೊಂದು ಮಂಗಳೂರು ಹೆಂಚಿನ ಮಾಡನ್ನು ಮುಂಭಾಗಕ್ಕೆ ಸಿದ್ಧಪಡಿಸಿದರು. ಮುಖ ಮಂಟಪದಲ್ಲಿ ನಂದಿಯಿದ್ದು ಅದರ ಸುತ್ತಣ  ಚೌಕಾಕಾರದ ಕಂಬಗಳಲ್ಲಿ ನಕಾಶೆಗಳೇನೂ ಇಲ್ಲ.  ಆದರೆ ಗರ್ಭಗುಡಿಯಲ್ಲಿರುವ ಶಿವಲಿಂ

105. "ಅಜ್ಜಂಪುರ" ಸ್ಥಳನಾಮದ ಸುತ್ತ...........!

ಇಮೇಜ್
ಆತ್ಮೀಯ ಓದುಗರೇ, ದಿನಾಂಕ 16-02-2020 ರಂದು ವಾಗರ್ಥವೆಂಬ ಫೇಸ್ ಬುಕ್ ಅಂಕಣದಲ್ಲಿ ಪ್ರಕಟವಾದ ಶ್ರೀ ಮಾಧವ ಅಜ್ಜಂಪುರ ಅವರ ಕಿರುಬರಹವು ಅಜ್ಜಂಪುರದ ಸ್ಥಳನಾಮದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅವರ ಆಸ್ಥೆಯನ್ನು ಮೆಚ್ಚುತ್ತೇನೆ.  ಇದು ಸಾಮಾಜಿಕ ಜಾಲತಾಣದ ಶಕ್ತಿಯೂ ಹೌದು. ಒಂದು ವಿಷಯದ ಬಗ್ಗೆ ಚರ್ಚೆ ಆರಂಭವಾಯಿತೆಂದರೆ, ಅದಕ್ಕೆ ಇರುವ ಹಲವು ಆಯಾಮಗಳು ಹೊರಬರುತ್ತವೆ. ಹೊಸ ಸಂಗತಿಗಳು ತಿಳಿಯುತ್ತವೆ.  ಈ ಕಾರಣದಿಂದ ಇದುವರೆಗೆ ಪ್ರಕಟವಾದ ಅಭಿಪ್ರಾಯಗಳನ್ನು ಇಲ್ಲಿ ದಾಖಲು ಮಾಡಿರುವೆ. ನನ್ನ ಅಭಿಪ್ರಾಯವನ್ನೂ ನಮೂದಿಸಿರುವೆ. ಅನೇಕರು ಈ ವಿಷಯದ ಕುರಿತು ಆಸಕ್ತಿಯಿಂದ ಸ್ಪಂದಿಸಿದ್ದಾರೆ. ಶಾಸನಾಧಾರಿತ ಮಾಹಿತಿಗಳನ್ನು ಹುಡುಕುವಂತೆ ಸಲಹೆ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಈ ಕುರಿತು ಇನ್ನಷ್ಟು ಮಾಹಿತಿಗಳು ದೊರೆತಂತೆಲ್ಲ ಅದನ್ನೂ ಇಲ್ಲಿಯೇ ಸೇರಿಸಲಾಗುವುದು. Madhav Ajjampur ವಾಗರ್ಥ 14 hrs  ·  ಈಚೆಗೆ ನನ್ನ surname ಆಗಿರುವ "ಅಜ್ಜಂಪುರ"ದ ಬಗ್ಗೆ ಒಂದು ಸ್ವಾರಸ್ಯವಾದ ಕತೆ ಕೇಳಿದೆ. ಅದರ ತಾತ್ಪರ್ಯ ಹೀಗಿತ್ತು: "ಅಜ್ಜಂಪುರ" ಎಂಬುದು "ಅಮ್ಮಿಜಾನ್ ಪುರ" ಆಗಿತ್ತು. ಅಮ್ಮಿಜಾನ್ ಎಂಬ ಒಬ್ಬ ಮುಸಲ್ಮಾನರು ಆ ಊರಲ್ಲಿ ನಡೆಯುವ ಸುಮಾರು ಎಲ್ಲ ಕಾರ್ಯಕ್ರಮಗಳಿಗೆ ಸಹಾಯ ನೀಡುತ್ತಿದ್ದರು. ಆದ್ದರಿಂದ, ಆ ಊರಿನ ಹೆಸರು 'ಅಮ್ಮಿ ಜಾನ್