ಪೋಸ್ಟ್‌ಗಳು

ಸೆಪ್ಟೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

05. ಶ್ರೀ ಎ. ಸೀತಾರಾಮ ಭಟ್ಟರು

ಇಮೇಜ್
ಶ್ರೀ ಎ. ಸೀತಾರಾಮ ಭಟ್ಟರು " ಇವರು ನಮ್ಮ ಹಿರಿಯರು" ಮಾಲಿಕೆಯಲ್ಲಿನ ನಾಲ್ಕನೆಯ ಲೇಖನವಿದು. ೫೦-೬೦ರ ದಶಕದಲ್ಲಿ ಅಜ್ಜಂಪುರದ ಧಾರ್ಮಿಕ , ರಾಜಕೀಯ ಕ್ಷೇತ್ರಗಳಲ್ಲಿ ಕೆಲಸಮಾಡಿದ ಈ ಹಿರಿಯರು ತಮ್ಮ ಸರಳ ಜೀವನ ಶೈಲಿಯಿಂದ ಜನರ ಮನಸ್ಸನ್ನು ಗೆದ್ದವರು. ಇಂದಿನ ರಾಜಕೀಯಕ್ಕೆ ಹೋಲಿಸಿದರೆ , ಅವರದು ರಾಜಕೀಯವೇ ಅಲ್ಲ. ಅವರಿಗೆ ಅದೊಂದು ಜನಸಂಪರ್ಕದ ಮಾಧ್ಯಮವಾಗಿದ್ದಿತು. ಅವರ ವಿಶೇಷ ಶೈಲಿ , ಉಡುಪು ಮತ್ತು ರಾಜಕೀಯ ಚಟುವಟಿಕೆಗಳನ್ನು ಮಿತ್ರ ಮಂಜುನಾಥ ಅಜ್ಜಂಪುರ ಇಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀ ಸೀತಾರಾಮಭಟ್ಟರ ಪರಿಚಯವಿರುವ ಜನರು ಇದನ್ನು ನಿಶ್ಚಿತವಾಗಿ ಆನಂದಿಸುವರು. ನಮ್ಮೂರಿನ "ಕುಲಪುರೋಹಿತ"ರೆಂಬ ಅಭಿದಾನವಿದ್ದ ಸೀತಾರಾಮ ಭಟ್ಟರು ನಿಜಕ್ಕೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರು. ನಗುಮುಖ , ಒಂದಿಷ್ಟು ತುಂಟತನ , ಸರಳತೆ ಅವರ ವ್ಯಕ್ತಿತ್ವದ ಗುಣಲಕ್ಷಣಗಳಾಗಿದ್ದವು.   ನಿಜವಾಗಿಯೂ ಅವರೊಬ್ಬ Born Leader. ಇವತ್ತಿನ ಪರಿಭಾಷೆಯಲ್ಲಿ ಅವರೊಬ್ಬ Crowd Puller. 1950 ಮತ್ತು 1960 ರ ದಶಕಗಳಲ್ಲಿ , ಅವರು ಊರಿನ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದ್ದರು. ಅಜ್ಜಂಪುರದಲ್ಲಿ ಅತಿ ಹೆಚ್ಚು ಸಮುದಾಯಗಳಿರುವುದು ವಿಶೇಷವೇ. ಲಿಂಗಾಯತರು , ಕುರುಬರು ಹೆಚ್ಚು ಜನ ಇದ್ದರು ಎಂದರೂ ಬ್ರಾಹ್ಮಣ , ಆರ್ಯವೈಶ್ಯ , ಮರಾಠ , ಭಾವಸಾರ ಕ್ಷತ್ರಿಯ ,  ದೇವಾಂಗ , ವಿಶ್ವಕರ್ಮ , ಹೀಗೆ ಅನೇಕ ಜಾತಿಗಳ