ಪೂರ್ಣ ಬೆಳಗುವ ಮುನ್ನ ಆರಿತೇ ಜ್ಯೋತಿ !
ಆತ್ಮೀಯ ಓದುಗರೇ , "ಎಲ್ಲರಿಗೂ ಜಯ ನಾಮ ಸಂವತ್ಸರದ ಶುಭಾಶಯಗಳು" ಅಜ್ಜಂಪುರದ ಪುರಪ್ರಮುಖರಲ್ಲಿ ಓರ್ವರಾದ ಶ್ರೀ ಸುಬ್ರಹ್ಮಣ್ಯ ಶೆಟ್ಟರ ಪುತ್ರ ಶ್ರೀ ರಾಜಗೋಪಾಲ ಗುಪ್ತ ಇತ್ತೀಚೆಗೆ ಎಂದರೆ ದಿನಾಂಕ 19-12-2013 ರಂದು ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಅಜ್ಜಂಪುರದ ಸಾಮಾಜಿಕ ವಲಯದಲ್ಲಿ ತಮ್ಮ ತಂದೆಯವರ ಹೆಸರಿನ ಬಲಕ್ಕಿಂತ ಹೆಚ್ಚಾಗಿ , ತಮ್ಮ ಸೌಮ್ಯ ಸ್ವಭಾವ ಮತ್ತು ತೋರುತ್ತಿದ್ದ ಸಾಮಾಜಿಕ ಕಾಳಜಿಗಳಿಂದಾಗಿ ಗಮನಾರ್ಹ ವ್ಯಕ್ತಿಯಾಗಿದ್ದರು. ಅವರನ್ನು ಸಮೀಪದಿಂದ ನೋಡಿಬಲ್ಲ , ಒಡನಾಡಿಯಾಗಿದ್ದ ಗೆಳೆಯ ಶ್ರೀ ಅಜ್ಜಂಪುರ ಮಂಜುನಾಥ ಹಾಗೂ ಅಜ್ಜಂಪುರದ ಪವಿತ್ರ ಪ್ರಿಂಟರ್ಸ್ ಮಾಲಕ ಮತ್ತು ಪತ್ರಕರ್ತರಾದ ಶ್ರೀ ಎನ್. ವೆಂಕಟೇಶ್ ಇವರೀರ್ವರೂ ತಮ್ಮ ಪದಶ್ರದ್ಧಾಂಜಲಿಯನ್ನು ಈ ಲೇಖನಗಳಲ್ಲಿ ದಾಖಲಿಸಿದ್ದಾರೆ. - ಶಂಕರ ಅಜ್ಜಂಪುರ ನಮ್ಮೆಲ್ಲರ ಪ್ರೀತಿಯ ಅಣ್ಣ ರಾಜಗೋಪಾಲ ಇನ್ನಿಲ್ಲ , ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆ ನೋಡಿದರೆ , ಅವನ ಜೀವನವೇ ಒಂದು ಸವಾಲು. ತುಂಬ ಪ್ರತಿಭಾವಂತರಾದ -ಕ್ರಿಯಾಶೀಲರಾದ - ಚೈತನ್ಯಶೀಲರಾದ , ತಂದೆ-ತಾಯಿಯ ಏಕೈಕ ಪುತ್ರ ಎನ್ನುವುದು ಸಹ ಸವಾಲೇ. ಉದ್ಯಮಶೀಲತೆಯ - ಚಟುವಟಿಕೆಯ - ಕಲಾಪೋಷಕರಾದ - ರಾಜಕಾರಣಿಯೂ ಆದ ಸುಬ್ರಹ್ಮಣ್ಯ ಶೆಟ್ಟರ ...