ಪೋಸ್ಟ್‌ಗಳು

ಕೆರೆ ಹಿಂದಿನ ಶ್ರೀ ಶಂಕರ ಲಿಂಗೇಶ್ವರ ದೇವಾಲಯ

ಇಮೇಜ್
ಪರ್ವತರಾಯನ  ಕೆರೆಯಲ್ಲಿ  ಸೂರ್ಯಾಸ್ತ    ಕೆರೆಯ ಹಿನ್ನೆಲೆಯಲ್ಲಿ ಹಣ್ಣೆ ಗುಡ್ಡ ಸಾಮಾನ್ಯವಾಗಿ ಊರಿಗೆ ನೀರು ನೀಡುವ ಜಲಸ್ಥಾನಗಳಲ್ಲಿ ಒಂದು ಚಿಕ್ಕ ಮಂದಿರವಿರುತ್ತಿದ್ದುದು ವಾಡಿಕೆ.  ದೇವಾಲಯದ ಹೊರನೋಟ  ಈ ವಿಷಯದಲ್ಲಿ ಅಜ್ಜಂಪುರವೂ ಹೊರತಾಗಿಲ್ಲ. ಈ ಚಿತ್ರದಲ್ಲಿ ಕಾಣುವ ಚಿಕ್ಕ ಮಂದಿರವನ್ನು ಕೆರೆ ಹಿಂದಿನ ದೇವಸ್ಥಾನ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದು ಇರುವುದು ಪರ್ವತರಾಯನ ಕೆರೆಯ ಏರಿಯ ಬುಡದಲ್ಲಿ. ಹೀಗಾಗಿ ಈ ಹೆಸರೇ ಪ್ರಚಲಿತವಿದ್ದರೂ , ಅಲ್ಲಿ ನೆಲೆಗೊಂಡಿರುವುದು ಶ್ರೀ ಶಂಕರಲಿಂಗೇಶ್ವರ.  ನಾಲ್ಕು ಚದರಡಿಯ ಒಂದು ಗರ್ಭಗೃಹ ಮತ್ತು ಹತ್ತು ಚದರಡಿಯ ಮುಖಮಂಟಪವನ್ನು ಮಾತ್ರ ಹೊಂದಿರುವ ಈ ದೇವಾಲಯ ಅಜ್ಜಂಪುರದ ಪ್ರಾಚೀನವೆಂದು ಹೇಳಬಹುದಾದ ಶಿವಮಂದಿರ. ಇಲ್ಲಿ ಹಿಂದೆ ಸಂಭ್ರಮವಿತ್ತು. ಪೂಜಾದಿಗಳು ಯಥಾಕ್ರಮ ನಡೆಯುತ್ತಿದ್ದ ದಿನಗಳಿದ್ದವು. ಇದರ ನಿರ್ವಹಣೆಗೆಂದು ಸಾಕಷ್ಟು ಕೃಷಿ ಜಮೀನನ್ನು ಉಂಬಳಿ ನೀಡಲಾಗಿತ್ತು. ಮಳೆಯ ಅಭಾವವಿರುವ ವರ್ಷಗಳಲ್ಲಿ ಇಲ್ಲಿ ರುದ್ರಾಭಿಷೇಕವನ್ನು ನಡೆಸಿ , ಮಳೆಯನ್ನು ಆಹ್ವಾನಿಸುವ ಪದ್ಧತಿಯಿತ್ತು. ಈಗ ಅದೆಲ್ಲ ಕೇವಲ ನೆನಪು ಮಾತ್ರ.   ಸಾಧಾರಣವಾಗಿ ಇಂಥ ರಚನೆಯ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲೆ ಇಟ್ಟಿಗೆ-ಗಾರೆಗಳಿಂದ ನಿರ್ಮಿಸುವ ಶಿಖರವಿರುತ್ತದೆ. ಆದರೆ ಈ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಲಾ

123. ದಕ್ಷ ಅಧಿಕಾರಿ - ಪುಟ್ಟ ರಂಗಪ್ಪ

ಇಮೇಜ್
ನಾನು ಬಹುದಿನಗಳಿಂದ ಈ ಅಂಕಣದಲ್ಲಿ ದಾಖಲು ಮಾಡಬೇಕೆಂದು ಬಯಸಿದ್ದ ವಿಷಯವನ್ನು ಗೆಳೆಯ ಮಲ್ಲಿಕಾರ್ಜುನ ಇಲ್ಲೊಂದು ಸಮಗ್ರ ಚಿತ್ರ ಲೇಖನದೊಡನೆ ಒದಗಿಸಿದ್ದಾರೆ. ಅವರಿಗೆ ಧನ್ಯವಾದಗಳು. ಪಾಂಡುರಂಗಪ್ಪ ಮತ್ತು ಅವರ ಪುತ್ರರು ಅಜ್ಜಂಪುರದ ಜನ ಮಾನಸದಲ್ಲಿ ಸ್ಥಾನಗಳಿಸಲು ಅವರು ವಿದ್ಯಾಭ್ಯಾಸಕ್ಕೆ ನೀಡಿದ ಮಹತ್ವ ಮತ್ತು ದೂರದೃಷ್ಟಿಗಳೇ ಕಾರಣವೆಂದು ಹೇಳಬಹುದು. ಅಜ್ಜಂಪುರದ ಪೇಟೆಯ ಬಳಿ ಇದ್ದ ಚಿತ್ರಮಂದಿರದ ಎದುರಿನಲ್ಲಿ ಇದ್ದ ನಾಲ್ಕಾರು ಮನೆಗಳ ಗುಂಪು, ತನ್ನ ಸ್ವಚ್ಛತೆಯಿಂದ  ಗಮನ ಸೆಳೆಯುವಂತಿತ್ತು. ಸಗಣಿ ಹಾಕಿ ಸಾರಿಸಿದ ನೆಲ, ದೊಡ್ಡ ರಂಗೋಲಿಯ ವಿನ್ಯಾಸಗಳಿಂದಾಗಿ ವಿಶಿಷ್ಟವಾಗಿ ಕಾಣುತ್ತಿತ್ತು. ಈ ಆವರಣದಲ್ಲಿ ವಾಸವಿದ್ದ ಪಾಂಡುರಂಗಪ್ಪನವರು ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದವರು. ಅವರ ಹಿರಿಯ ಮಗ ತಿಪ್ಪಯ್ಯ ಮಾಸ್ತರರು ಶಿಕ್ಷಕರಾಗಿ ನಂತರ ರಾಜಕೀಯದಲ್ಲಿ ಭಾಗವಹಿಸಿ ತಮ್ಮ ಛಾಪನ್ನು ಮೂಡಿಸಿದ್ದರೆ, ಎರಡನೆಯವರಾದ ಪುಟ್ಟರಂಗಪ್ಪನವರು ತಮ್ಮ ಆಡಳಿತ ಶೈಲಿಯಿಂದ ರಾಜ್ಯದಲ್ಲಿ ಜನಪ್ರಿಯರಾದರು. ಪುಟ್ಟರಂಗಪ್ಪನವರ ಅಧಿಕಾರ ಅವಧಿಯಲ್ಲಿ ಜಾತಿಯ ಹಂಗಿಲ್ಲದೆ ಸಮಾಜದ ಎಲ್ಲ ವರ್ಗಗಳ ಅಜ್ಜಂಪುರದ ಜನ ಪ್ರಯೋಜನ ಪಡೆದದ್ದುಂಟು. ಶಿಕ್ಷಣ ತಂದುಕೊಟ್ಟ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸಗಳ ಮಹತ್ವವನ್ನು ಸ್ವತಃ ಬದುಕಿ ತೋರಿಸಿದ ಪುಟ್ಟರಂಗಪ್ಪನವರ ಸ್ಮರಣಾರ್ಥ ಅಪರೂಪದ ಚಿತ್ರಗಳೊಂದಿಗೆ ಇರುವ ಈ ಲೇಖನ ಅಜ್ಜಂಪುರವು ನಿಜಕ್ಕೂ ಹೆಮ್ಮೆ ಪಡುವಂಥದ್ದು. ಶಂಕರ ಅಜ್ಜಂಪ

122. ಅಪೂರ್ವ ಅಜ್ಜಂಪುರ - ಸಾಧನೆಗೆ ಸಂದ ಗೌರವ

ಇಮೇಜ್
ಅಪ್ಪಾಜಿ ಅಜ್ಜಂಪುರ (ಕಾವ್ಯನಾಮ - ಅಪೂರ್ವ) ನನ್ನ ಆತ್ಮೀಯ ಮಿತ್ರರು. ನನ್ನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ 'ಅಂತರಜಾಲದಲ್ಲಿ ಅಜ್ಜಂಪುರ' ಬ್ಲಾಗಿನ ಅನೇಕ ಲೇಖನಗಳನ್ನು ಅವರು ವಿಷಯ ಸಂಗ್ರಹಿಸಿ ಬರೆದು ಸಹಕರಿಸಿದ್ದಾರೆ.  ಇತ್ತೀಚೆಗಷ್ಟೇ ಅವರ ಕಥಾ ಕವನ ಸಂಕಲನ  'ಒಂದಷ್ಟು ಕತೆಗಳು, ಕವಿತೆಗಳು' ಅಜ್ಜಂಪುರದಲ್ಲಿ ಬಿಡುಗಡೆಯಾಯಿತು. ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜಿಲ್ಲಾ ಪತ್ರಿಕೆಗಳು ಮತ್ತು ರಾಜ್ಯ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.   ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತಿಯು ಅವರ ಕವಿತೆಗಳಲ್ಲಿ ಎದ್ದು ಕಾಣುತ್ತದೆ. ವಿಶೇಷತಃ ಅಲ್ಲಮನ ವಚನಗಳ ಅವರ ವಿಶ್ಲೇಷಣೆ ನನಗೆ ತುಂಬ ಮೆಚ್ಚಿನ ಸಂಗತಿ.  ಅವರಿಗೆ ಸಂಬಂಧಿಸಿದಂತೆ 2023ರ ಹೊಸ ಸಂಗತಿ ಎಂದರೆ ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಜ್ಜಂಪುರ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ನಿಜಕ್ಕೂ ಅವರ ಸೇವೆ ಮತ್ತು ಅಭಿರುಚಿಗೆ ಸಂದ ಗೌರವವೆಂದೇ ತಿಳಿಯುತ್ತೇನೆ. ಅವರಿಗೆ ಹಾರ್ದಿಕ ಅಭಿನಂದನೆಗಳು.

121. ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿಋಷಿ ಎಸ್.ಚಂದ್ರಶೇಖರ್ ನಾರಣಾಪುರ

ಇಮೇಜ್
ಅಜ್ಜಂಪುರ ತಾಲೂಕು ಆದ ನಂತರ ಸ್ವಾಭಾವಿಕವಾಗಿ ವ್ಯಾಪ್ತಿಯು ವಿಸ್ತಾರವಾಗಿದೆ. ಅಂತೆಯೇ ಅಜ್ಜಂಪುರದ ಸಾಧಕರ ಹಿರಿಮೆಯು ಬೆಳೆಯುತ್ತಿರುವುದು ಸಂತೋಷದ ಸಂಗತಿ. ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸುಬ್ರಹ್ಮಣ್ಯ ಶೆಟ್ಟರು ಹಾಗೂ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ಅಜ್ಜಂಪುರ ಮಂಜುನಾಥ್ ಅವರು ಸೇರಿದಂತೆ, ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಶ್ರೀ ಚಂದ್ರಶೇಖರ್ ಅವರಿಗೆ 2022ನೇ ಸಾಲಿಗೆ ಸಂದಿರುವ ರಾಜ್ಯೋತ್ಸವ ಪ್ರಶಸ್ತಿಯು  ಮೂರನೆಯದಾಗಿದೆ. ಅವರನ್ನು ನೇರವಾಗಿ ಮಾತನಾಡಿಸಿ ಸಂದರ್ಶನ ಪಡೆಯುವ ಅವಕಾಶ ಆಗದಿದ್ದರೂ ಮಿತ್ರ ಅಪ್ಪಾಜಿ ಅಜ್ಜಂಪುರ ಅವರು ಚಿತ್ರ ಮಾಹಿತಿಗಳನ್ನು ಸಂಗ್ರಹಿಸಿ ಈ ಲೇಖನವನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಚಂದ್ರಶೇಖರ ನಾರಣಾಪುರ ಅವರಿಗೆ ಅಭಿನಂದನೆಗಳು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ - ೦-೦-೦-೦-೦-೦ - ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿ ಋಷಿ ಚಂದ್ರಶೇಖರ ನಾರಣಾಪುರ ಕೃಷಿ ಕ್ಷೇತ್ರದ ಸಾಧನೆಗಾಗಿ  ಚಂದ್ರಶೇಖರ ನಾರಣಾಪುರ ಅವರಿಗೆ  ೨೦೨೨ನೆಯ ಸಾಲಿನ  ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರವು  ನೀಡಿ ಗೌರವಿಸಿದೆ. ಸಾವಯವ ಕೃಷಿಯಲ್ಲಿ ಅವರು ಪರಿಣತರು. ತಮ್ಮ ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಯ ಅನೇಕ ಪ್

120. ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.)

ಇಮೇಜ್
  ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.) ಅಜ್ಜಂಪುರದ ಶೆಟ್ರು ಶಿದ್ದಪ್ಪನವರ ಪದವೀಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಅಜ್ಜಂಪುರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ತರೀಕೆರೆಯಲ್ಲಿ ನೆಲೆಸಿದ್ದ ಎನ್.ಡಿ. ನಾಗರಾಜರು ನಿಧನರಾಗಿದ್ದಾರೆ. ಎನ್.ಡಿ.ಎನ್. ಎಂಬ ಸಂಕ್ಷಿಪ್ತ ನಾಮದಿಂದ ಹೆಸರಾಗಿದ್ದ ನಾಗರಾಜರ ಹೆಚ್ಚಿನ ಪರಿಚಯ ನನಗೆ ಇರಲಿಲ್ಲವಾದರೂ, ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರಿಗೆ ಅವರು ಆಪ್ತರು. ವಿದ್ಯಾಭಿಮಾನಿಗಳಾಗಿದ್ದ ನನ್ನ ತಂದೆಯನ್ನು ಕಂಡರೆ ನಾಗರಾಜರಿಗೂ ಅದೇ ಬಗೆಯ ಗೌರವ. ನಾನು ಅವರನ್ನು ಒಂದೆರಡು ಬಾರಿ ಕಂಡು ಮಾತನಾಡಿದ್ದುಂಟು. ಆಗೆಲ್ಲ ನನ್ನ ತಂದೆಯನ್ನು ಪ್ರೀತಿಯಿಂದ ಸ್ಮರಿಸಿದ್ದರು.. ಸ್ವತಃ ಆಂಗ್ಲ ಪ್ರಾಧ್ಯಾಪಕರಾಗಿದ್ದ ನಾಗರಾಜರಿಗೆ ಸಾಹಿತ್ಯ, ಸಂಸ್ಕೃತಿ, ಕಲೆಗಳಲ್ಲಿ, ರಂಗಭೂಮಿಗಳ ಬಗ್ಗೆ ಅಪಾರ ಅಭಿಮಾನ. ನಿವೃತ್ತಿಯ ನಂತರವೂ ಸಂಸ್ಕೃತದ ಅಧ್ಯಯನದಲ್ಲಿ ತೊಡಗಿದ್ದರು. ನಾನೊಮ್ಮೆ ಇಂಗ್ಲಿಷ್ ಬರಹವೊಂದರ ಪರಿಷ್ಕರಣೆಗಾಗಿ ಅವರನ್ನು ಕೋರಿದಾಗ, ಸಮಯಾಭಾವದಿಂದ ಸಾಧ್ಯವಾಗಲಾರದು ಎಂದು ತುಂಬ ಸಂಕೋಚದಿಂದ ಹೇಳಿಕೊಂಡಿದ್ದರು. ಪ್ರತಿ ಹಬ್ಬಗಳಿಗೂ ಶುಭಾಶಯ ಕೋರುತ್ತಿದ್ದ ಆತ್ಮೀಯರೊಬ್ಬರು ಮರೆಯಾಗಿದ್ದಾರೆ. ಅವರ ಅಧ್ಯಯನಶೀಲತೆ, ಶಿಕ್ಷಣದ ಬಗೆಗಿನ ಪ್ರೀತಿ, ವಿದ್ಯಾರ್ಥಿಗಳನ್ನು ಕುರಿತಾದ ಕಾಳಜಿಗಳಿಂದಾಗಿ ಅವರು ನನ್ನೂರಿನ ವಿದ್ಯಾವಲಯದಲ್ಲಿ ತುಂಬ ಜನಪ್ರಿಯರಾ

119. ಅಜ್ಜಂಪುರದ ದೇವರಮನೆಗಳು-2

ಇಮೇಜ್
ಆತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆಯಾದರೂ, ಇವುಗಳ ಬಗ್ಗೆ ಜನರ ಗಮನ ಅಷ್ಚಾಗಿ ಹರಿದಂತಿಲ್ಲ. ಏಕೆಂದರೆ ಇವು ಹಿಂದೆ ಇದ್ದ ಸಾಧಾರಣ ಮಣ್ಣಿನ ಮನೆಗಳ ಜೊತೆಗೇ ಇರುತ್ತಿದ್ದುದರಿಂದ, ಇವುಗಳನ್ನು ವಿಶೇಷವೆಂದು ತಿಳಿದವರು ಕಡಿಮೆ.  ಈ ವಂಶಾವಳಿಯ ಕಾರಣದಿಂದ ಅಜ್ಜಂಪುರದ ಕೆರೆಗೆ ಪರ್ವತರಾಯನ ಕೆರೆ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಒಂದು ತರ್ಕದ ಪ್ರಕಾರ, ವಿಜಯನಗರದ ಅರಸರು ನಾಡಿನ ಹಲವಾರು ದೇವಾಲಯಗಳನ್ನು, ಕೆರೆಗಳನ್ನು ಅಭಿವೃದ್ಧಿಪಡಿಸಿದ  ಉದಾಹರಣೆಗಳಿವೆ. ಇದೇ ವಂಶಕ್ಕೆ ಸೇರಿರಬಹುದಾದ ಸಾಮಂತರೋ, ನಾಯಕರಲ್ಲಿ ಓರ್ವನಾಗಿರಬಹುದಾದ ಪರ್ವತರಾಯನಿಂದಲೂ ಇದು ಉಗಮವಾಗಿರಬಹುದು. ಏಕೆಂದರೆ, ಬುಕ್ಕಾಂಬುಧಿಯ ಕೆರೆಗೆ ವಿಜಯನಗರದ ಸಂಸರ್ಗವಿದೆ. ಅಜ್ಜಂಪುರದ ದೇವಾಲಯಗಳ ನವೀಕರಣದಲ್ಲಿ ವಿಜಯನಗರದ ಪಾತ್ರವಿದೆ. ಏನಿದ್ದರೂ, ಇತಿಹಾಸಜ್ಞರು ಸಂಶೋಧಿಸಬೇಕಾಗಿರುವ  ಅಂಶವಿದೆಂದು ತಿಳಿಯಬಹುದು.   ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಈ ದೇವರಮನೆಗಳು, ಆಯಾ ಕುಟುಂಬಗಳ, ವರ್ಗಗಳ ಪದ್ಧತಿಯನ್ನು ಜೀವಂತವಾಗಿಟ್ಟಿವೆ. ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಮುದಾಯದ ಜನರು ತಮ್ಮ ಕುಲದೈವವನ್ನು ಮರೆಯದೇ, ಅವುಗಳಿದ್ದ ಸ್ಥಳಗಳನ್ನು ನವೀಕರಿಸಿ, ಸಮಾಜದ ಕಾರ್ಯಗಳಿಗೆ