103. ನನ್ನ ನೆನಪಿನ ಅಜ್ಜಂಪುರ - ಕೆ.ಎಸ್. ರಾಘವನ್ ರ ನೆನಪುಗಳು
6 ನವೆಂಬರ್ 2019 ಮೇಲ್ಕಂಡ ದಿನಾಂಕದಂದು ನನಗೆ ತಲುಪಿದ ಈ-ಪತ್ರದ ಪಠ್ಯ ಇಲ್ಲಿದೆ. ಸ್ವಾಮಿ , ನಾನು ಇಂದು ಮೇಲ್ಕಂಡ ಬ್ಲಾಗ್‍ಸೈಟನ್ನು ಮೊದಲ ಬಾರಿ ನೋಡಿದೆ. ಮನಕ್ಕೆ ತುಂಬಾ ಸಂತೋಷವಾಯಿತು. ಆಶ್ಚ್ಚರ್ಯ ಕೂಡಾ. ನನ್ನ ಜೀವನದಲ್ಲಿ ಅಜ್ಜಂಪುರದ ಬಹು ಮಹತ್ವವಾದ ಪಾತ್ರವಿದೆ. ನನ್ನ ಬಾಲ್ಯ ಅಲ್ಲೇ ಕಳೆಯಿತು. ನಮ್ಮ ತಂದೆ ಅಜ್ಜಂಪುರಕ್ಕೆ ಬಂದಾಗ ನನಗೆ ಮೂರು ತಿಂಗಳು ಮಾತ್ರ. ಅದು 1946 ರಲ್ಲಿ. ನನ್ನ SSLC ವರೆಗಿನ ವಿದ್ಯಾಬ್ಯಾಸ ಅಲ್ಲೇ. ನಮ್ಮ ತಂದೆಗೆ CBS ( ಅಮೃತಮಹಲ್) ನಲ್ಲಿ ಕೆಲಸ. ಅವರ ಹೆಸರು ಕೆ ಎ ಶ್ರೀನಿವಾಸನ್. 1960 ರಲ್ಲಿ ಅವರಿಗೆ ಕುಣಿಗಲ್‍ಗೆ ವರ್ಗವಾಯಿತು. ನನ್ನ ನಂತರದ ಒಬ್ಬ ತಮ್ಮ ಮತ್ತು ಐದು ತಂಗಿಯರು ಜನಿಸಿದ್ದು ಅಜ್ಜಂಪುರದಲ್ಲೇ. ಕಳೆದ 60 ವರ್ಷಗಳಲ್ಲಿ ಅಜ್ಜಂಪುರವನ್ನು ಮತ್ತೆ ನೋಡುವ ಅವಕಾಶ ನನಗೆ ಸಿಗಲಿಲ್ಲ. ಪೋಸ್ಟ್ ಗಳನ್ನು ಓದುತ್ತಿದ್ದಂತೆ ನನ್ನ ಬಾಲ್ಯದಹಲವು ನೆನಪುಗಳು ಕಣ್ಣಮುಂದೆ ಸುಳಿದು ಬಂದವು. ವಿಶೇಷವಾಗಿ ಸುಬ್ರಮಣ್ಯ ಶೆಟ್ಟಿ , ಸತ್ಯನಾರಾಯಣ ಶೆಟ್ಟಿ , ಶೆಟ್ರ ಸಿದ್ದಪ್ಪ ಹಾಗೂ ಕಲಾ ಸೇವಾ ಸಂಘ. ನನಗೆ ಒಂದು ಮಾಹಿತಿ ಬೇಕು. ಅಜ್ಜಂಪುರ ಕೃಷ್ಣಸ್ವಾಮಿಯವರ ತಂದೆಯ ಹೆಸರೇನು ? ನೀವು ಸಲ್ಲಿಸುತ್ತರುವ ಸೇವೆಗಾಗಿ ವಂದನೆಗಳು. ನಿಮ್ಮ ಈ ಬ್ಲಾಗ್‍ಗೆ ಲೇಖನಗಳನ್ನು ಹೇಗೆ ಕಳಿಸ...