112. ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!
ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು! 'ಯೋಗಿಗಳ ಯೋಗಿ, ಶಿವಯೋಗಿ, ಸಿದ್ಧರಾಮನೊಬ್ಬನೆ ನಿಜಯೋಗಿ' ಎಂದು ಸಮಕಾಲೀನ ಶರಣರಾದ ಸೊಡ್ಡಳ ಬಾಚಾರಸರಿಂದ ಹೊಗಳಿಸಿಕೊಂಡಿರುವ ಸಿದ್ದರಾಮೇಶ್ವರರು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಸೊಲ್ಲಾಪುರವೆಂಬ ಅಭಿನವಕೈಲಾಸವಾಗಿ ಕಟ್ಟಿದವರು. ಮಹಾನ್ ಕನಸುಗಾರ ಶಿಲ್ಪಿ ಇವರು. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದು ಆದರ್ಶಗಳಿಗೆ ವಾಸ್ತವತೆಯ ಸ್ಪರ್ಷ ನೀಡಿದವರು. 'ಶಿವಯೋಗಿಯ ಶರೀರಂ ವೃಥಾ ಸಮೆಯಲಾಗದು, ಅನುಗೊಂಬನಿತು ಕಾಯಕವನು ನಡೆಸುತಿರಬೇಕು' ಎಂಬುದು ಇವರ ಸಾಧನೆಯ ನಿತ್ಯಮಂತ್ರ. ಇಂಥ ಪವಿತ್ರ ಸಂಕಲ್ಪದಿಂದಲೇ ಸಿದ್ದರಾಮೇಶ್ವರರು ಪರಮತೆಯ ಔನ್ನತ್ಯವನ್ನು ಸಾಧಿಸಿದರು. ಹನಿಮೊಸರನ್ನು ಮಲ್ಲಯ್ಯನಿಗೆ ಸಮರ್ಪಿಸಲಾಗದ ಏಕೈಕ ಕಾರಣದಿಂದ ಶ್ರೀಶೈಲಪರ್ವತದಲ್ಲಿ ಆತ್ಮಾಹುತಿಯನ್ನು ಮಾಡಿಕೊಳ್ಳಹೊರಟ ಬಾಲಕನನ್ನು ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ಮಡಿಲಿಗೆ ಆತುಕೊಂಡು ಸಂರಕ್ಷಿಸಿಕೊಂಡ ಕಥೆಯ ಹಿಂದಿರುವುದೂ ಸಿದ್ದರಾಮರ ದೃಢಸಂಕಲ್ಪ ಮನೋಭಾವವೇ. ಈ ಮನೋದೃಢತೆಯೇ ಬಡ ಒಕ್ಕಲಿಗರ ಮನೆಯ ಮಗನಾದ ಧೂಳಿಮಾಕಾಳನನ್ನು ಆದರ್ಶ ಶಿವಯೋಗಿಯಾಗಿ ಬೆಳೆಸಿತು. ಕೆರೆಗಳನ್ನು ಕಟ್ಟಿಸುವ, ದೇವಾಲಯಗಳನ್ನು ನಿರ್ಮಿಸುವ, ಅಗ್ರಹಾರಗಳನ್ನು ರೂಪಿಸುವ ಸಮಾಜಮುಖಿ ಚಟುವಟಿಕೆಗಳು ಅವರ ಉಸಿರಾದವು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿ