ಪೋಸ್ಟ್‌ಗಳು

ಅಕ್ಟೋಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಂಪುರದ ಬಸವಣ್ಣ ದೇವರ ಗುಡಿ

ಇಮೇಜ್
ಎಲ್ಲರಿಗೂ 2016 - ಹೊಸ ವರ್ಷದ ಶುಭಾಶಯಗಳು  ಈ ಲೇಖನದ ಹೊಳಹು ಮೂಡಿದ್ದು ಅಜ್ಜಂಪುರದ ಹಿರಿಯ ಪತ್ರಕರ್ತರಾದ ಶ್ರೀ ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರಿಂದ. ಒಮ್ಮೆ ಅವರೊಂದಿಗೆ ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾಗ, ಅವರು ಈಗ ಅಜ್ಜಂಪುರದ ಪೇಟೆಬೀದಿಯಲ್ಲಿ ನೆಲೆಗೊಂಡಿರುವ ಬಸವಣ್ಣನ ದೇವಾಲಯವು ಹಿಂದೆ ಕೋಟೆ ಪ್ರದೇಶದಲ್ಲಿತ್ತು ಎಂಬ ಅಪರೂಪದ ಸಂಗತಿಯನ್ನು ಹೊರಗೆಡಹಿದ್ದರು. ಬಹಳ ಕಾಲ ಅದರ ವಿವರಗಳು ದೊರೆಯಲಿಲ್ಲವಾಗಿ ಹಾಗೇ ನೆನೆಗುದಿಯಲ್ಲಿತ್ತು. ನನ್ನ ಮಿತ್ರ ಅಪೂರ್ವ (ಅಪ್ಪಾಜಿ)ಯನ್ನು ಈ ಬಗ್ಗೆ ಸಂಪರ್ಕಿಸಿದಾಗ, ಅವರು ಆಸ್ಥೆತಳೆದು, ಈ ದೇವಾಲಯದ ಚಿತ್ರ ಮತ್ತು ಲೇಖನದ ವಿವರಗಳನ್ನು ಕಳಿಸಿದರು. ನಾನು ಪದೇ ಪದೇ ವಿನಂತಿಸುತ್ತಿರುವಂತೆ, ಊರಿನಲ್ಲಿರುವವರು ಅಪೂರ್ವರಂತೆಯೇ ಆಸಕ್ತಿ ತಳೆದು ಚಿತ್ರ-ಮಾಹಿತಿಗಳನ್ನು ಕಳಿಸುವಂತಾದರೆ, ಈ ಬ್ಲಾಗ್ ನ್ನು ಅಜ್ಜಂಪುರದ ಬಗ್ಗೆ ಮಾಹಿತಿ ಕಣಜವನ್ನಾಗಿಸಬಹುದು. ಹಾಗೆ ಆದೀತೆಂದು ನನ್ನ ಆಶಯ. ಬ್ಲಾಗ್ ಆರಂಭವಾದಂದಿನಿಂದ ಬೆಂಬಲಿಸುತ್ತಿರುವ ಅಜ್ಜಂಪುರ ಮಂಜನಾಥ, ಮಲ್ಲಿಕಾರ್ಜನ ಅಜ್ಜಂಪುರ, ಬಿ.ಎನ್. ಮಾಧವರಾವ್ ಇವರ ಕೊಡುಗೆಯನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ರುದ್ರದೇವರು ಮತ್ತು ವೀರಭದ್ರದೇವರು ದಕ್ಷಪ್ರಜಾಪತಿಯ ಯಜ್ಞಕಾಲದಲ್ಲಿ ಅವತರಣಗೊಂಡ ಶಿವನ ಉಗ್ರರೂಪವೆನ್ನುವುದು ಪೌರಾಣಿಕ ಐತಿಹ್ಯ. ಈ ಕಥಾನಕವನ್ನು ಒಳಗೊಂಡಿರುವ ಜಾನಪದ ಕಲೆ ವೀರಗಾಸೆ ನಮ್ಮೂರ ವಿಶೇಷಗಳಲ್ಲಿ ಒಂದ