ಪೋಸ್ಟ್‌ಗಳು

ಫೆಬ್ರವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಋಜುತ್ವ - ಕಠಿಣ ಪರಿಶ್ರಮಗಳ ಸಂಕೇತ ಎ.ಪಿ.ನಾಗರಾಜ ಶೆಟ್ಟರು.

ಇಮೇಜ್
ಅಜ್ಜಂಪುರದಲ್ಲಿ ಮುದ್ರಣ ಕ್ಷೇತ್ರದ ಮೊದಲಿಗರು ಶ್ರೀ ಎ.ಪಿ. ನಾಗರಾಜಶೆಟ್ಟರು. ಸದಾ ಖಾದಿಧಾರಿಯಾಗಿರುತ್ತಿದ್ದ ಅವರು ಎಂದಿಗೂ ರಾಜಕೀಯದ ಪ್ರವೇಶವನ್ನೇ ಮಾಡಲಿಲ್ಲ. ಖಾದಿ ಅವರಿಗೆ ಸ್ವಾವಲಂಬನೆಯ ಸಂಕೇತ ಮಾತ್ರವಾಗಿತ್ತು. ಉದ್ಯಮ, ಕಲೆ, ಪತ್ರಕರ್ತ, ಸಾಹಿತ್ಯಾಭಿಮಾನಿ, ಸಂಘಟಕ ಮುಂತಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ನಾಗರಾಜಶೆಟ್ಟರು ಉದ್ಯೋಗನಿಮಿತ್ತವಾಗಿ ಸಮೀಪದ ನರಸಿಂಹರಾಜಪುರದಲ್ಲೂ ಕೆಲಕಾಲ ವಾಸವಿದ್ದರು. ಅಲ್ಲಿನ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾತ್ರವಹಿಸಿದರು. ಅವರು ಯುವಕರಾಗಿದ್ದಾಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಜೀವನವಿಡೀ ಪಾಲಿಸಿಕೊಂಡು ಬಂದ ಈ ಹಿರಿಯ ಚೇತನದ ಬಗ್ಗೆ, ಅಜ್ಜಂಪುರದ ಗೆಳೆಯ ಚಿಂತಕ, ಲೇಖಕ ಅಪೂರ್ವ ಅವರ ಸ್ಮರಣೆ ಇಲ್ಲಿದೆ, ನಿಮಗಾಗಿ.  -ಶಂಕರ ಅಜ್ಜಂಪುರ ನಾಗರಾಜ ಶೆಟ್ಟರ ಮಂಡಿ ,  ಮುದ್ರಣಾಲಯಗಳು ನಮ್ಮ ಮನೆಯೆದುರಿಗೇ ಇದ್ದುದರಿಂದ ನಾನು ಅವರನ್ನು ತುಂಬ ಶೈಶವದಿಂದಲೇ ಬಲ್ಲೆ. ಅವರ ಮಗ ಮಂಜುನಾಥ ಅಜ್ಜಂಪುರ - ನನ್ನ ಆಪ್ತಸ್ನೇಹಿತನಾಗುವುದಕ್ಕೆ ತುಂಬ ಮುಂಚೆಯೇ ,  ನನಗೆ ಅವರ ವ್ಯವಸ್ಥಿತ ಜೀವನಶೈಲಿಯ ಪರಿಚಯವಾಗಿತ್ತು. ಅವರ ತಂದೆ ಫಣಿಯಪ್ಪ ಶೆಟ್ಟರು ಜವಳಿ ವ್ಯಾಪಾರಿಯಾಗಿ ,  ಅಡಿಕೆ ಚೇಣಿ ಇತ್ಯಾದಿ ಮಾಡಿದಂತಹವರು. ನೂರು ವರ್ಷಗಳ ಹಿಂದೆಯೇ ಮದ್ರಾಸಿನಿಂದ ರಾಮಾಯಣ - ಮಹಾಭಾರತ - ಭಾಗವತಗಳ ಕನ್ನಡ ಗ್ರಂಥಗಳನ್ನು ತರಿಸ