ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

107. ಗಂಗಮ್ಮನ ಪಾಲು

ಇಮೇಜ್
ಗಂಗಮ್ಮನ ಪಾಲು ಇಲ್ಲಿರುವುದು ಪ್ರಾಚೀನ ಶಿಲ್ಪವಲ್ಲ. ಅದರ ಕಲಾಮೌಲ್ಯಕ್ಕೆಂದೂ ಇದನ್ನು ಪ್ರಕಟಿಸಿಲ್ಲ. ಇದರ ಹಿಂದಿನ ಕಥೆ ಮಾತ್ರ ಹೃದಯಸ್ಪರ್ಶಿಯಾಗಿದೆ. ಇಂಥ ಘಟನೆ ನಾಲ್ಕು ದಶಕಗಳ ಹಿಂದೆ ಅಜ್ಜಂಪುರದಲ್ಲಿ ನಡೆದು ಅದು ಶಿಲ್ಪರೂಪದಲ್ಲಿ ದಾಖಲಾಗಿದೆ ಮತ್ತು ಅದರ ಹಿಂದಿನ ಮನೋಭಾವ ಎಂಥ ನೆಮ್ಮದಿಯನ್ನು ಆ ತಾಯಿಗೆ ನೀಡಿರಬಹುದು ಎನ್ನುವುದೇ ಅದರ ವಿಶೇಷ. ಚಿತ್ರದಲ್ಲಿ ಮೂವರು ಸ್ತ್ರೀಯರ ಚಿತ್ರಗಳಿವೆ. ಅದರಲ್ಲಿ ಮಧ್ಯದಲ್ಲಿರುವುದು ಗಂಗಾಮಾತೆ. ಅಕ್ಕಪಕ್ಕದಲ್ಲಿರುವುದು ಗಂಗಮ್ಮನ ಪಾಲಾದ ಈರ್ವರು ಬಾಲ ಕಿಯರು. ಹಿಂದೊಂದು ಮಳೆಗಾಲದ ದಿನಗಳಲ್ಲಿ ಅಜ್ಜಂಪುರದ ಹೊಂಬಾಳಮ್ಮ ಎಂಬ ಮಹಿಳೆಯ ಇಬ್ಬರು ಮಕ್ಕಳು ಅವರೊಂದಿಗೆ ಊರಿನ ಹತ್ತಿರದಲ್ಲಿ ಬುಕ್ಕಾಂಬುಧಿ ರಸ್ತೆಯಲ್ಲಿರುವ ತುಂಬೇ ಹಳ್ಳದ ಬಳಿ ಹೋಗಿದ್ದರು. ಹಳ್ಳದಲ್ಲಿ ತುಂಬ ನೆರೆ ಬಂದಿತು. ದಡದಲ್ಲಿದ್ದ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಕೊಚ್ಚಿಹೋದರು. ಅಸಹಾಯಕಳಾದ ತಾಯಿಗೆ ಕಣ್ಣೆದುರಿಗೆ ತೇಲಿಹೋದ ಆ ಮಕ್ಕಳನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಅವರ ದಾರುಣ ಸಾವು ತಾಯಿಯ ಮನಸ್ಸಿಗೆ ತುಂಬ ಆಘಾತ ನೀಡಿದ್ದು ಸಹಜವೇ ಸರಿ. ನಂತರ ಆಕೆಯ ಕನಸಿನಲ್ಲಿ ಗಂಗಾಮಾತೆ ಕಾಣಿಸಿಕೊಂಡು, ನಿನ್ನ ಮಕ್ಕಳನ್ನು ನಾನೇ ಕರೆದೊಯ್ದಿರುವೆ. ಅವರ ನೆನಪಿಗೆಂದು ಶಿಲೆಯಲ್ಲಿ ನನ್ನೊಡನೆ ಅವರು ಇರುವಂತೆ ಕಾಣುವ ಶಿಲ್ಪವನ್ನು ಮಾಡಿಸಿ ಹಾಕು ಎಂದು ಹೇಳಿದಳಂತೆ. ಅದರಂತೆ ಆ ತಾಯಿ ಈ ಶಿಲ್ಪವನ್ನು ಮಾಡಿಸಿ, ಹಳ್ಳದ