84. ರಾಜಕಾರಣಿ, ಕ್ರೀಡಾಪಟು ಶ್ರೀ ಬಿ.ವಿ. ಗುರುಶಾಂತಪ್ಪ
ಆತ್ಮೀಯ ಓದುಗರೇ, ಮಾರ್ಚ್ ತಿಂಗಳ ಈ ಸಂಚಿಕೆಯಲ್ಲಿ ಅಜ್ಜಂಪುರದ ಹಿರಿಯರಾದ ಮಾಜಿ ಪುರಸಭಾಧ್ಯಕ್ಷ ಬಿ.ವಿ. ಗುರುಶಾಂತಪ್ಪನವರನ್ನು ಕುರಿತಂತೆ ಕಿರುಲೇಖನವಿದೆ. ಇದನ್ನು ಅಲ್ಪಸಮಯದಲ್ಲಿ ಆಸ್ಥೆಯಿಂದ ಸಿದ್ಧಪಡಿಸಿ, ಛಾಯಾಚಿತ್ರಗಳನ್ನು ಮಿತ್ರ ಅಪೂರ್ವ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ನಿಮ್ಮ ಅಭಿಪ್ರಾಯಗಳನ್ನು ನಮೂದಿಸಲು ವಿನಂತಿ. ಅಜ್ಜಂಪುರದ ದೇವಾಲಯಗಳ ಬಗ್ಗೆ, ಸಾರ್ವಜನಿಕ ಸಂಸ್ಥೆಗಳು, ವ್ಯಕ್ತಿಗಳ ಬಗ್ಗೆ ಚಿತ್ರ-ಬರಹಗಳನ್ನು shankarajp@gmail.com ಈ ವಿಳಾಸಕ್ಕೆ ಕಳಿಸಲು ಕೋರುತ್ತೇನೆ. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ – 99866 72483 ಶ್ರೀ ಬಿ.ವಿ. ಗುರುಶಾಂತಪ್ಪ ಶ್ರೀ ಬಿ.ವಿ. ಗುರುಶಾಂತಪ್ಪನವರದು ಎತ್ತರದ ನಿಲುವು, 80ರ ಮೇಲ್ಪಟ್ಟ ವಯಸ್ಸಿನಲ್ಲಿಯೂ ದಟ್ಟ ತಲೆಗೂದಲು ಹೊಂದಿರುವ, ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದ ಅಜ್ಜಂಪುರದ ರಾಜಕೀಯ ಹಾಗೂ ಕಲಾ ರಂಗಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರನ್ನು ಇತ್ತೀಚೆಗೆ ಅಜ್ಜಂಪುರದಲ್ಲಿ ಸನ್ಮಾನಿಸಲಾಯಿತು. ಶ್ರೀ ಜೋಗಿ ತಿಮ್ಮಯ್ಯ ರಂಗಪ್ರಶಸ್ತಿ ಪ್ರದಾನ ಸಮಾರಂಭ 1948ರಲ್ಲಿ ಕೆಲವು ಸಂಸ್ಥಾನಗಳು ಭಾರತದಲ್ಲಿ ವಿಲೀನವಾಗಿರಲಿಲ್ಲ. ನಮ್ಮ ಮೈಸೂರು ಸಂಸ್ಥಾನವೂ ಅವುಗಳಲ್ಲಿ ಒಂದು. ಆಗ ನಾಡಿನ ಸ್ವಾತಂತ್ರ್ಯ ಹೋರಾಟಗಾರರು ಮೈಸೂರು ಚಲೋ ಎಂಬ ಚಳುವಳಿಯನ್ನು ಹಮ್ಮಿಕೊಂಡರು. ಆ ಹೋರಾಟದಲ್ಲಿ ಗುರುಶಾಂತಪ್ಪನವರೂ