ಪೋಸ್ಟ್‌ಗಳು

ಜೂನ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚವುಡಮ್ಮನ ಗುಡಿ

ಇಮೇಜ್
ಚಿತ್ರದಲ್ಲಿ ಕಾಣುತ್ತಿರುವ ಈ ಚಿಕ್ಕ ದೇವಾಲಯಕ್ಕೆ ಚವುಡಮ್ಮನ ಗುಡಿ ಎಂದು ಹೆಸರು. ದೇವಾಲಯ ಮತ್ತು ಗುಡಿ ಇವೆರಡರ ನಡುವೆ  ಗಾತ್ರ, ವಿಸ್ತಾರ, ಅನುಕೂಲತೆಗಳು ಮುಂತಾದ ವ್ಯತ್ಯಾಸಗಳು ಇರುತ್ತವಾದ್ದರಿಂದ ತೀರ ಸರಳ ರಚನೆಯಾದ ಇದನ್ನು ಗುಡಿ ಎಂದೇ ಕರೆಯುವುದು ವಾಡಿಕೆ. ಅದೇ ರೀತಿ ಕೋಟೆಯಲ್ಲಿರುವ ಹನುಮಂತ ಮತ್ತು ಈಶ್ವರ ದೇವಾಲಯಗಳು ಶಿಷ್ಟರದೆಂದೂ, ಚವುಡಮ್ಮನು ಅಶಿಷ್ಟರ ದೇವಿಯೆಂದೂ ಈಗಿನ ಸಾಹಿತ್ಯಕರು ವಿಶ್ಲೇಷಿಸುತ್ತಾರೆ. ಆದರೆ ಶಿಷ್ಟರಲ್ಲದವರ ದೇವಿಯೂ ಇದೇ ಕೋಟೆಯಲ್ಲಿ ಪೂಜೆಗೊಳ್ಳುತ್ತಿದೆ. ಇದನ್ನೇನು ವಿಶೇಷವೆಂದು ಹೇಳಬೇಕಾದ ಅವಶ್ಯಕತೆಯಿಲ್ಲವಾದರೂ, ದೇವ-ದೇವರ ನಡುವೆಯೇ ಕಂದ ಕ ಸೃಷ್ಟಿಸಿ, ಭಾವನೆಗಳ ವಿರೂಪ ಮಾಡುವಂಥ ಚಾಲತಿಯಲ್ಲಿರುವ ಸಾಹಿತ್ಯಕ ಪ್ರವೃತ್ತಿಯನ್ನಿಷ್ಟು ನೆನೆದು ಹೇಳಬೇಕಾಯಿತು. ಅಂಥ ಹೊಂದಾಣಿಕೆ, ಸಹಿಷ್ಣುತೆಗಳು ಎಂದಿನಿಂದಲೂ ನಡೆದುಬಂದಿವೆ. ಇದರಲ್ಲಿ  ಕಲ್ಲುಗುಂಡಿನಂಥ ನಾಲ್ಕಾರು ರಚನೆಗಳಿವೆ. ಇವು ಅಜ್ಜಂಪುರದ ಕೋಟೆಯಲ್ಲಿ ಬಹಳ ಹಿಂದಿನಿಂದಲೂ ಪೂಜೆಗೊಳ್ಳುತ್ತಿವೆ. ಹಿಂದೆ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಜಾನುವಾರುಗಳು ಇರುತ್ತಿದ್ದವು. ಹಸುಗಳು ಕರುಹಾಕಿದಾಗ ಅವುಗಳ ಮೊದಲ ದಿನದ ಹಾಲನ್ನು ಚೌಡಮ್ಮನಿಗೆ ಅರ್ಪಿಸಿ ನಂತರ ಅದನ್ನು ಗಿಣ್ಣು ಮಾಡುವ ಸಂಪ್ರದಾಯವಿತ್ತು. ಅದೇ ರೀತಿ ನಾಲ್ಕಾರು ದಿನಗಳ ನಂತರ ಆ ಹಸುವಿನ ಹಾಲಿನಿಂದ ಮೊಸರು ತಯಾರಿಸಿ, ಅದರಿಂದ ಮೊಸರನ್ನ ಮಾಡಿ, ಚೌಡಮ್ಮನನ್ನು ಪೂಜಿಸಿ, ಮಕ್ಕಳಿ