ಪೋಸ್ಟ್‌ಗಳು

ಡಿಸೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

21. ಕತ್ತೆ ಕವಾಡ

ಇಮೇಜ್
ಸೌದೆ ಸಂಕಟಕ್ಕೊಂದು ಪರಿಹಾರ !  ಈಗ ಎಂಥ ಕುಗ್ರಾಮದಲ್ಲೂ ಅಡಿಗೆ ಅನಿಲ ದೊರೆಯುತ್ತಿದೆ, ವಿದ್ಯುತ್ ಶಕ್ತಿಯಿದೆ. ಈ ಹಂತ ತಲುಪುವ ವೇಳೆಗೆ ಉರುವಲಿಗೆಂದು ನಮ್ಮ ಹಿರಿಯರು ಪಡುತ್ತಿದ್ದ ಕಷ್ಟ-ತೊಂದರೆಗಳನ್ನು ಗಮನಿಸಿದರೆ ನಾವಿಂದು ಸುಖವಾಗಿ ಇದ್ದೇವೆ ಎನ್ನಬೇಕು. ನಾಲ್ಕಾರು ದಶಕಗಳ ಹಿಂದೆ ಇಂಧನಕ್ಕೆಂದು ಜನರು ಸೌದೆಯನ್ನು ಬಳಸುವುದು ಅನಿವಾರ್ಯವಾಗಿತ್ತು. ಹಾಗೆ ಅಂದು ಕಾಡನ್ನು ಕಡಿದು ನೆಲಸಮ ಮಾಡಿದ ಪರಿಣಾಮವೇ ಇಂದು ಪರ್ಯಾಯ ವ್ಯವಸ್ಥೆಗಳು ಬರಲು ಕಾರಣವಾಯಿತು. ಬದಲಾವಣೆ ಸ್ವಾಭಾವಿಕ. ಅದನ್ನು ತಡೆಯಲು ಯಾರಿಂದಲೂ ಆಗದು ಎನ್ನುವುದು ಬೇರೆ ಮಾತು.  ಅಜ್ಜಂಪುರದಲ್ಲಿ ೬೦ರ ದಶಕದ ಸುಮಾರಿಗೇ ಸೌದೆಯ ಅಭಾವ ಕಾಣಿಸಿಕೊಂಡಿತ್ತು. ಸೌದೆಯ ಸಗಟು ವ್ಯಾಪಾರ ಮಾಡಲಾಗದ ಬಡಜನ, ರಸ್ತೆಗಳ ಬದಿಗಳಲ್ಲಿ ಇರುತ್ತಿದ್ದ ಸಾಲುಮರಗಳಿಂದ ಉರುವಲನ್ನು ಹೊಂದಿಸಿಕೊಳ್ಳುತ್ತಿದ್ದರು. ಅಜ್ಜಂಪುರದ ಅಮೃತಮಹಲ್ ಫಾರಂನ ರಸ್ತೆಯಲ್ಲಿ ಹುಣಸೆ, ಆಲ, ಅತ್ತಿಯ ಮರಗಳನ್ನು ಉದ್ದಕ್ಕೂ ನೆಟ್ಟು ಬೆಳೆಸಲಾಗಿತ್ತು. ೫೦-೬೦ರ ವಯಸ್ಸಿನ ಆ ಹೆಮ್ಮರಗಳ ಮುರಿದ ರೆಂಬೆ-ಕೊಂಬೆಗಳು ಬಡಜನರ ಅಗತ್ಯಗಳನ್ನು ಪೂರೈಸುತ್ತಿದ್ದವು. ಕಾಲ ಬದಲಾದಂತೆ ಜನಸಂಖ್ಯೆ ಹೆಚ್ಚಾದಂತೆ ಅದೇ ಮರಗಳ ಕಾಂಡಗಳನ್ನು ನಿಧಾನವಾಗಿ ಕೆತ್ತಿ ತೆಗೆಯುವ ಕಾಯಕ ಆರಂಭವಾಯಿತು. ಸ್ವಾಭಾವಿಕವಾಗಿ ಒಣಗಿಹೋದ ಮರಗಳು ಮರೆಯಾಗಿ ಹೋದವು.  ಅಜ್ಜಂಪುರ ಭೌಗೋಳಿಕವಾಗಿ ಬಯಲು ಸೀಮೆಗೆ ಸೇರಿದ ಪ್ರದೇಶ. ಇಂಧನದ ಸಮಸ್ಯೆ ಅಲ್ಲ