ಪೋಸ್ಟ್‌ಗಳು

ಜನವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

104. ಅಜ್ಜಂಪುರದಲ್ಲಿ ಮೂರನೇ ವರ್ಷದ ಶ್ರೀ ಹನುಮ ಜಯಂತಿ ಉತ್ಸವ

ಇಮೇಜ್
 ಓದುಗರೆಲ್ಲರಿಗೂ 2020ನೇ ವರ್ಷದ ಶುಭಾಶಯಗಳು  09-12-2019 ಭಾನುವಾರ, ಎಲ್ಲೆಡೆಯಂತೆ , ನನ್ನ ಹುಟ್ಟೂರು ಅಜ್ಜಂಪುರದಲ್ಲೂ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಆಯೋಜಿತವಾಗಿತ್ತು. ದೇವಾಲಯವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಮೊದಲು ಪವಮಾನ ಹೋಮವನ್ನು ಮಾಡುವುದು ಎಂದುಕೊಂಡಿದ್ದರು. ಹಾಗೆ ಭಾವಿಸಲು, ಪವಮಾನ ಹೋಮವೆಂದರೆ ಆಂಜನೇಯನನ್ನು ಉದ್ದೇಶಿಸಿ ಮಾಡುವುದೆಂಬ ಕಲ್ಪನೆ ಅದು ಹೇಗೋ ಆಯೋಜಕರ ಮನದಲ್ಲಿ ನೆಲೆ ನಿಂತಿತ್ತು. ಬಹುಶಃ ಆಂಜನೇಯನಿಗೆ ಇರುವ ಇನ್ನೊಂದು ಹೆಸರಾದ ಪವನ ಎಂಬುದು ಕಾರಣವಿದ್ದೀತೆಂದು ನಂತರ ಮಾತನಾಡಿದಾಗ ತಿಳಿಯಿತು. ಇದರ ವ್ಯತ್ಯಾಸಗಳನ್ನು, ಉದ್ದೇಶಗಳನ್ನು ತಿಳಿಸಿದ ನಂತರ ಬದಲಾವಣೆ ಮಾಡಿಕೊಳ್ಳಲು ಒಪ್ಪಿದರು.  ಕಾರ್ಯಕ್ರಮವನ್ನು ಅದ್ದೂರಿಯಿಂದ ನಡೆಸುತ್ತಿರುವ ಅವಧೂತ ಬಳಗದವರು ಹೋಮ ಕಾರ್ಯಕ್ರಮವನ್ನು ತಮ್ಮ ಫಲಕದಲ್ಲಿ ಪ್ರದರ್ಶಿಸಿದ್ದರೇ ವಿನಾ, ಅದರ ಕುರಿತಾದ ಸಿದ್ಥತೆಗಳ ವಿವರ ಅವರಿಗೆ ತಿಳಿದಂತಿರಲಿಲ್ಲ. ನಂತರ ನಡೆದ ಸಮಿತಿಯ ಸಭೆಯಲ್ಲಿ ಇದೆಲ್ಲವನ್ನೂ ಸ್ಪಷ್ಟಪಡಿಸಲಾಯಿತು. ಸ್ಥಳಪುರೋಹಿತರಾಗಿ  ನಮ್ಮೂರಿನ ಈ ಕಾರ್ಯಕ್ರಮದ ಹೋಮ-ಹವನಾದಿಗಳನ್ನು ನಾನು ನಡೆಸಿಕೊಡುವ ಸದವಕಾಶ ದೊರೆತದ್ದು ತುಂಬ ಸಂತೋಷ ತಂದಿತು.   ಅಜ್ಜಂಪುರದ ಬ್ರಾಹ್ಮಣ ಸಮಾಜದಿಂದ ಆಯೋಜಿತವಾಗಿದ್ದ ಗಣಪತಿ, ನವಗ್ರಹ, ಶ್ರೀಸೂಕ್ತ, ಪುರುಷಸೂಕ್ತ, ರಾಮತಾರಕ ಹಾಗೂ ಆಂಜನೇಯ ಗಾಯತ್ರಿ ಪುರಸ್ಸರ ಐದು ಹವನಗಳು ಅಜ್ಜಂಪುರದ ಸ್ಥಳ ಪ